ಪ್ರಯಾಗ್‌ರಾಜ್: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ (IIT Baba) ಹೇಳಿದ್ದ ಭಾರತ- ಪಾಕಿಸ್ತಾನ ಪಂದ್ಯದ ಫಲಿತಾಂಶ ಇದೀಗ ಉಲ್ಟಾ ಆಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತವನ್ನು (Team India) ಸೋಲಿಸಲಿದೆ. ಇದೇ ನಿಜ ಎಂದು ಅವರು ಭವಿಷ್ಯ ನುಡಿದಿದ್ದರು. ಅವರ ಈ ಹೇಳಿಕೆ ವೈರಲ್ ಆಗಿತ್ತು. ಆದರೀಗ ಅವರ ಭವಿಷ್ಯವಾಣಿ ಸಂಪೂರ್ಣ ಸುಳ್ಳಾಗಿದೆ.
ಹೀಗಾಗಿ ಅವರು ಮತ್ತೆ ಗೂಗಲ್ ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಹಿಮಾಚಲದಲ್ಲಿ ಶೇ.100, ಹರಿಯಾಣದಲ್ಲಿ ಶೇ.73 ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 71 ರಷ್ಟು ಅವರ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಆಗಿದೆ. ಇದನ್ನೂ ಓದಿ: ಪಾಕ್ ತಂಡದ ನಸೀಮ್ ಷಾ ಶೂ ಲೇಸ್ ಕಟ್ಟಿದ ಕಿಂಗ್ ಕೊಹ್ಲಿ – ವಿರಾಟ್ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್
Advertisement
Advertisement
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 6 ವಿಕೆಟ್ ಗಳಿಂದ ಭರ್ಜರಿಯಾಗಿ ಬಗ್ಗು ಬಡಿದಿದೆ. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ರಮ್ ಮಿಷಿನ್ ವಿರಾಟ್ ಕೊಹ್ಲಿ ಅವರು ಶತಕ ಬಾರಿಸುವ ಮೂಲಕ ಮತ್ತೊಮ್ಮೆ ತಮ್ಮ ಫಾರ್ಮ್ ಪ್ರದರ್ಶಿಸಿದ್ದಾರೆ. ಇದೀಗ ನೆಟ್ಟಿಗರು ಐಐಟಿ ಬಾಬಾ ನ ಭವಿಷ್ಯದ ಬಗ್ಗೆ ಅಪಹಾಸ್ಯ ಮಾಡಲು ಪ್ರಾರಂಭಿಸಿದ್ದಾರೆ.
Advertisement
Advertisement
ಯಾರು ಐಐಟಿ ಬಾಬಾ?
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಕುಂಭಮೇಳದಲ್ಲಿ ಅಚ್ಚರಿಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದ ಸನ್ಯಾಸಿಯೇ ಐಐಟಿ ಬಾಬಾ. ಅವರ ನಿಜನಾಮಧೇಯ ಅಭಯ್ ಸಿಂಗ್. ಅವರು ಬಾಂಬೆ ಐಐಟಿ ಪದವೀಧರ ಎಂಬುದಾಗಿ ತಿಳಿಸಿದ್ದರು. ಮಾತ್ರವಲ್ಲದೇ ಕೆನಡಾದಲ್ಲಿ ದೊಡ್ಡ ವೇತನ ಪಡೆಯತ್ತಿದ್ದರು. ಆದರೆ ಆಧ್ಯಾತ್ಮಿಕ ಸಾಧನೆಗಾಗಿ ಅವರು ಹೈ ಪ್ರೊಫೈಲ್ ಜಾಬ್ ಅನ್ನು ತೊರೆದು ಬಂದುದಾಗಿ ಹೇಳಿದ್ದರು. ಇದರಿಂದಾಗಿ ಅವರು ಭಾರತಾದ್ಯಂತ ಹೆಸರುವಾಸಿಯಾಗಿದ್ದರು. ಅವರು ಮಾತನಾಡುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಈತ್ತೀಚೆಗೆ ಜುನಾ ಅಖಾಡದಲ್ಲಿದ್ದ ಅವರನ್ನು ದುರ್ನಡೆಯ ಆಧಾರದಲ್ಲಿ ಹೊರಹಾಕಲಾಗಿತ್ತು. ಆ ಬಳಿಕ ಅವರು ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡರು. ಇದನ್ನೂ ಓದಿ: ಶಹಬ್ಬಾಶ್ ಹುಡುಗ್ರಾ: ಪಾಕ್ ವಿರುದ್ಧ ಗೆದ್ದ ಟೀಂ ಇಂಡಿಯಾಗೆ ಡಿಕೆಶಿ ಅಭಿನಂದನೆ
ಇಂಡೋ ಪಾಕ್ ಕದನದ ಬಗ್ಗೆ ಹೇಳಿದ್ದೇನು?
ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ಐಐಟಿ ಬಾಬಾ ಅವರನ್ನು ಭಾರತ vs ಪಾಕಿಸ್ತಾನ ಪಂದ್ಯದ ಫಲಿತಾಂಶಧ ಬಗ್ಗೆ ಪ್ರಶ್ನಿಸಿದಾಗ ಈ ಬಾರಿ ಭಾರತ ಗೆಲ್ಲುವುದಿಲ್ಲ, ಪಾಕಿಸ್ತಾನವೇ ಗೆಲ್ಲುತ್ತದೆ ಎಂದು ತಿಳಿಸಿದ್ದರು. ಈ ಬಗ್ಗೆ ಇತ್ತೀಚೆಗೆ ಮತ್ತೆ ಪ್ರಶ್ನಿಸಿದಾಗಲೂ ನಾನು ನಿಮಗೆ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಈ ಬಾರಿ ಗೆಲ್ಲುವುದಿಲ್ಲ ಎಂದು. ಭಾರತೀಯ ಕ್ರಿಕೆಟ್ ಆಭಿಮಾನಿಗಳಿಗೆ ಈ ಹೇಳಿಕೆಯಿಂದ ಅಕ್ಷರಶಃ ಆಘಾತ ಆಗಿತ್ತು. ಏಕೆಂದರೆ 2024ರ ಟಿ20 ವಿಶ್ವಕಪ್ ವೇಳೆ ಅವರು ಹೇಳಿದ್ದ ಭವಿಷ್ಯವಾಣಿ ನಿಜವಾಗಿತ್ತು. ಹೀಗಾಗಿಯೇ ಅವರು ಈ ಬಾರಿಯೂ ಹೇಳಿದ ಭವಿಷ್ಯವಾಣಿ ನಿಜವಾಗಲಿದೆ ಎಂದು ಅನೇಕರು ನಂಬಿದ್ದರು.
ಆದ್ರೆ ಭವಿಷ್ಯಕ್ಕೆ ಸೆಡ್ಡು ಹೊಡೆದ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದೆ.