ನಾಗಪುರ: ಅಭಿಷೇಕ್ ಶರ್ಮಾ (Abhishek Sharma) ಮತ್ತು ರಿಂಕು ಸಿಂಗ್ (Rinku Singh) ಅವರ ಸ್ಫೋಟಕ ಆಟದಿಂದ ಭಾರತ (India) ನ್ಯೂಜಿಲೆಂಡ್ (New Zealand) ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತ (India) 48 ರನ್‌ಗಳಿಂದ ಗೆದ್ದುಕೊಂಡಿದೆ.
ಗೆಲ್ಲಲು 239 ರನ್‌ಗಳ ಕಠಿಣ ಗುರಿಯನ್ನು ಪಡೆದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಹೊಡೆದು ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಭಾರತ ಕಡೆಯಿಂದ 14, ನ್ಯೂಜಿಲೆಂಡ್ ಕಡೆಯಿಂದ 9 ಸೇರಿ ಒಟ್ಟು 23 ಸಿಕ್ಸ್ ಸಿಡಿಯಲ್ಪಟ್ಟಿತ್ತು. ಭಾರತ 21, ನ್ಯೂಜಿಲೆಂಡ್ 15 ಬೌಂಡರಿ ಹೊಡೆದಿತ್ತು.
Going, going, GONE! 🚀
🎥 Rinku Singh with a fabulous final flourish to power #TeamIndia to 2⃣3⃣8⃣/7 👏
Scorecard ▶️ https://t.co/ItzV352h5X#INDvNZ | @IDFCFIRSTBank | @rinkusingh235 pic.twitter.com/BGTv4m3NxD
— BCCI (@BCCI) January 21, 2026
ನ್ಯೂಜಿಲೆಂಡ್ 1 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದರೂ ಗ್ಲೇನ್ ಫಿಲಿಪ್ಸ್ ಮತ್ತು ಮಾರ್ಕ್ ಚಾಪ್‌ಮನ್ ಉತ್ತಮ ಆಟವಾಡಿದರು. ಪಿಲಿಪ್ಸ್ 78 ರನ್(40 ಎಸೆತ, 4 ಬೌಂಡರಿ, 6 ಸಿಕ್ಸ್), ಮಾರ್ಕ್‌ಚಾಪ್‌ಮನ್ 39 ರನ್(24 ಎಸೆತ, 4 ಬೌಂಡರಿ, 2 ಸಿಕ್ಸ್)
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ 27 ರನ್ ಗಳಿಸುವಷ್ಟರಲ್ಲಿ ಸಂಜು ಸಾಮ್ಸನ್ ಮತ್ತು ಇಶನ್ ಕಿಶನ್ ಔಟಾದರು. ಅಭಿಷೇಕ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟಿಗೆ 47 ಎಸೆತಗಳಲ್ಲಿ 99 ರನ್ ಜೊತೆಯಾಟವಾಡಿದರು.
Dealing in MAXIMUMS 💥
Abhishek Sharma 🤝 Surya Kumar Yadav
Updates ▶️ https://t.co/ItzV352h5X#TeamIndia | #INDvNZ | @IDFCFIRSTBank | @surya_14kumar pic.twitter.com/GUndgBVKgQ
— BCCI (@BCCI) January 21, 2026
ಸೂರ್ಯಕುಮಾರ್ 32 ರನ್(22 ಎಸೆತ, 4 ಬೌಂಡರಿ, 1 ಸಿಕ್ಸ್), ಹಾರ್ದಿಕ್ ಪಾಂಡ್ಯ 25 ರನ್(16 ಎಸೆತ, 3 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರೆ ಅಭಿಷೇಕ್ ಶರ್ಮಾ 84 ರನ್(35 ಎಸೆತ, 5 ಬೌಂಡರಿ, 8 ಸಿಕ್ಸ್) ಕೊನೆಯಲ್ಲಿ ರಿಂಕು ಸಿಂಗ್ ಔಟಾಗದೇ 44 ರನ್ (20 ಎಸೆತ, 4 ಬೌಂಡರಿ, 3 ಸಿಕ್ಸ್) ಹೊಡೆದರು.
ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ ನಂತರದ 15 ಎಸೆತಗಳಲ್ಲಿ 34 ರನ್ ಚಚ್ಚಿದರು. ಅಭಿಷೇಕ್ ಮತ್ತು ರಿಂಕು ಸ್ಫೋಟದ ಆಟದ ನೆರವಿನಿಂದ ಭಾರತ 7 ವಿಕೆಟ್ ನಷ್ಟಕ್ಕೆ 238 ರನ್ ಹೊಡೆಯಿತು.

