ಲಂಡನ್: ಆರಂಭಿಕ ಪಂದ್ಯದಲ್ಲಿ ಮಾರಕ ವೇಗದ ಬೌಲಿಂಗ್ ಹಾಗೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತು. ರೀಸ್ ಟೋಪ್ಲಿ ಮಾರಕ ಬೌಲಿಂಗ್‌ಗೆ ತತ್ತರಿಸಿದ ಭಾರತ 100 ರನ್‌ಗಳ ಅಂತರದಿಂದ ಸೋಲು ಕಂಡಿತು.
Advertisement
ಲಾರ್ಡ್ಸ್ ಅಂಗಳದಲ್ಲಿ ನಡೆದ 2ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 49 ಓವರಲ್ಲಿ 246 ಗಳ ಸಾಧಾರಣ ಮೊತ್ತ ಗಳಿಸಿ ಆಲೌಟಾಯಿತು. ಈ ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 38.5 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 146 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಅತಿಥೇಯ ಇಂಗ್ಲೆಂಡ್ 3 ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲಗೊಂಡಿತು. ಇದನ್ನೂ ಓದಿ: ಇಂದು ಭಾರತ-ಇಂಗ್ಲೆಂಡ್ 2ನೇ ಏಕದಿನ – ಸರಣಿ ಗೆಲ್ಲುವ ತವಕದಲ್ಲಿ ಟೀಂ ಇಂಡಿಯಾ
Advertisement
Advertisement
ಆರಂಭಿಕ ಆಘಾತ, ಬ್ಯಾಟಿಂಗ್ ವೈಫಲ್ಯ:
ಟಾಸ್ ಗೆದ್ದು ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕದಲ್ಲೇ ಆಘಾತ ಎದುರಿಸಿತು. ನಾಯಕ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಶೂನ್ಯ ಸುತ್ತಿದರು. ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 16 ರನ್ ಗಳಿಸಿ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 27, ಹಾರ್ದಿಕ್ ಪಾಂಡ್ಯ 44 ಎಸೆತಗಳಲ್ಲಿ 29 ಹಾಗೂ ರವೀಂದ್ರ ಜಡೇಜಾ 44 ಎಸೆತಗಳಲ್ಲಿ 29 ರನ್‌ಗಳಿಸಿ ತಂಡಕ್ಕೆ ನೆರವಾದರು. ಆದರೆ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿ ಗೆಲುವು ದಾಖಲಿಸುವಲ್ಲಿ ವಿಫಲರಾದರು. ಇದನ್ನೂ ಓದಿ: ಸ್ಫೋಟಕ ಶತಕ- ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಸೂರ್ಯ ಭಾರೀ ಹೈಜಂಪ್
Advertisement
ವಿಲಿ, ಮೊಯಿನ್ ಅಲಿ ಆಸರೆ:
ಭಾರತದ ಬೌಲಿಂಗ್ ಪಡೆಯ ಪರಿಣಾಮಕಾರಿ ದಾಳಿಯಿಂದಾಗಿ ಇಂಗ್ಲೆಂಡ್ ತಂಡವು 102 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ 33ರನ್ (2 ಸಿಕ್ಸರ್, 2 ಬೌಂಡರಿ), ಮೊಯಿನ್ ಅಲಿ 47 (2 ಬೌಂಡರಿ, 2 ಸಿಕ್ಸರ್) ಜೊತೆಯಾಟದಲ್ಲಿ 6ನೇ ವಿಕೆಟ್‌ಗೆ 62 ರನ್‌ಗಳನ್ನು ಸಿಡಿಸಿದರು. ನಂತರದಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಡೇವಿಡ್ ವಿಲಿ 41 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನೂ ಜೇಸನ್ ರಾಯ್ 23ರನ್ ಗಳಿಸಿದರೆ ಜಾನಿ ಬೈರ್‌ಸ್ಟೋವ್ 6 ಬೌಂಡರಿಗಳೊಂದಿಗೆ 38 ರನ್ ಸಿಡಿಸಿದರು.
ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಆದರೆ 9ನೇ ಓವರ್‌ನಲ್ಲಿ ಜೇಸನ್ ರಾಯ್ ವಿಕೆಟ್ ಕಬಳಿಸಿದ ಹಾರ್ದಿಕ್ ಪಾಂಡ್ಯ ಮೊದಲ ಯಶಸ್ಸು ಪಡೆದರು. ಚಾಹಲ್ ಜಾನಿ ಬೈರ್‌ಸ್ಟೋವ್ ವಿಕೆಟ್ ಅನ್ನು 15ನೇ ಓವರ್‌ನಲ್ಲಿ ಉರುಳಿಸಿದ ಚಾಹಲ್ ತಮ್ಮ ಖಾತೆ ತೆರೆದರು. ಜೋ ರೂಟ್ ಅವರನ್ನು LBW ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ನಲ್ಲಿ ಅಬ್ಬರಿಸುತ್ತಿದ್ದ ಡೇವಿಡ್ ವಿಲಿಗೆ ಅರ್ಧಶತಕ ಗಳಿಸಲು ಬುಮ್ರಾ ಬ್ರೇಕ್ ಹಾಕಿದರು. ಮೊದಲ ಪಂದ್ಯದಲ್ಲಿ 6 ವಿಕೆಟ್ ಗಳಿಸಿದ್ದ ಬುಮ್ರಾ ಇಲ್ಲಿ ಡೇವಿಡ್ ಸೇರಿದಂತೆ ಎರಡು ವಿಕೆಟ್ ಗಳಿಸಿದರು.
ಒಟ್ಟಿನಲ್ಲಿ ಮೊದಲ ಪಂದ್ಯದಲ್ಲಿ ಬೌಲಿಂಗ್, ಬ್ಯಾಟಿಂಗ್ ವಿಭಾಗದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ 2ನೇ ಪಂದ್ಯದಲ್ಲಿ ಎರಡೂ ವಿಭಾಗಗಳ ವೈಫಲ್ಯದಿಂದಾಗಿ ಸೋಲನ್ನು ಅನುಭವಿಸಿತು.