LatestMain PostSports

ಸ್ಫೋಟಕ ಶತಕ- ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಸೂರ್ಯ ಭಾರೀ ಹೈಜಂಪ್‌

Advertisements

ದುಬೈ: ಇಂಗ್ಲೆಂಡ್‌ ವಿರುದ್ಧ ಕೊನೆಯ ಟಿ-20 ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಸೂರ್ಯಕುಮಾರ್‌ ಯಾದವ್‌ ಐಸಿಸಿ ಟಿ-20  ಬ್ಯಾಟರ್‌  ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಜೀವಮಾನ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಸೂರ್ಯಕುಮಾರ್‌ ಯಾದವ್‌ 44 ಸ್ಥಾನ ಏರಿ 732 ರೇಟಿಂಗ್‌ ಪಡೆದು ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಸೂರ್ಯ ಹೊರತು ಪಡಿಸಿ ಟಾಪ್‌ 10 ಪಟ್ಟಿಯಲ್ಲಿ ಯಾವೊಬ್ಬ ಟೀಂ ಇಂಡಿಯಾ ಆಟಗಾರರು ಸ್ಥಾನ ಪಡೆದಿಲ್ಲ. ಪಟ್ಟಿಯಲ್ಲಿ ಪಾಕಿಸ್ತಾನ ಬಾಬರ್‌ ಅಜಂ ಮತ್ತು ಮೊಹಮ್ಮದ್‌ ರಿಜ್ವಾನ್‌ ಅನುಕ್ರಮವಾಗಿ ಮೊದಲ ಎರಡು ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ ಬೆಂಕಿ ಬೌಲಿಂಗ್‌ ಇದೀಗ ಬುಮ್ರಾ ಏಕದಿನ ಕ್ರಿಕೆಟ್‌ನ ನಂ.1 ಬೌಲರ್‌

ಪಟ್ಟಿಯಲ್ಲಿ ಇಶನ್‌ ಕಿಶನ್‌ 12, ರೋಹಿತ್‌ ಶರ್ಮಾ 18, ಶ್ರೇಯಸ್‌ ಅಯ್ಯರ್‌ 21, ವಿರಾಟ್‌ ಕೊಹ್ಲಿ 25ನೇ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಮೂರನೇ ಟಿ 20 ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ 117 ರನ್‌(55 ಎಸೆತ, 14 ಬೌಂಡರಿ, 6 ಸಿಕ್ಸರ್‌) ಸಿಡಿಸಿದ್ದರು. ಸೂರ್ಯ ಸ್ಫೋಟಕ ಶತಕ ಸಿಡಿಸಿದ್ದರೂ ಭಾರತ ತಂಡ 17 ರನ್‌ಗಳಿಂದ ಸೋತಿತ್ತು.

ಕಳೆದ ವರ್ಷ ಮಾರ್ಚ್‌ ತಿಂಗಳಿನಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲ ಟಿ 20 ಪಂದ್ಯವಾಡಿರುವ 31 ವರ್ಷದ ಸೂರ್ಯ ಇಲ್ಲಿಯವರೆಗೆ 19 ಪಂದ್ಯವಾಡಿದ್ದಾರೆ. 17 ಇನ್ನಿಂಗ್ಸ್‌ಗಳಿಂದ 38.35 ಸರಾಸರಿಯಲ್ಲಿ ಒಟ್ಟು 537 ರನ್‌ ಹೊಡೆದಿದ್ದಾರೆ. 4 ಅರ್ಧಶತಕ, 1 ಶತಕ ಸಿಡಿಸಿದ್ದಾರೆ.

Live Tv

Leave a Reply

Your email address will not be published.

Back to top button