ಅರ್ಧ ಶತಕ ಸಿಡಿಸಿ ತಂದೆಗೆ ಸೆಲ್ಯೂಟ್ ಮಾಡಿದ ಧ್ರುವ್ ಜುರೆಲ್

Public TV
1 Min Read
Dhruv Jurel 3

ರಾಂಚಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಕೀಪರ್ ಧ್ರುವ್ ಜುರೆಲ್ (Dhruv Jurel) ಅರ್ಧ ಶತಕ ಸಿಡಿಸಿ ತಂದೆಗೆ ಸೆಲ್ಯೂಟ್ ಮಾಡಿದ್ದಾರೆ.

Dhruv Jurel 1

ಇಲ್ಲಿನ ಜೆಎಸ್‍ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಧ್ರುವ್ ಜುರೆಲ್ ಅವರು 149 ಎಸೆತಗಳಲ್ಲಿ 6 ಫೋರ್ ಮತ್ತು 4 ಸಿಕ್ಸರ್ ಸೇರಿ 90 ರನ್ ಹೊಡೆದರು. ಅರ್ಧಶತಕ ಸಿಡಿಸಿದ ಬಳಿಕ ಮೈದಾನದಲ್ಲೇ ಅವರ ತಂದೆಗೆ ಸೆಲ್ಯೂಟ್ ಮಾಡಿ ಸಂಭ್ರಮಿಸಿದ್ದಾರೆ.

Dhruv Jurel 2

ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿನ ಎರಡನೇ ಪಂದ್ಯದಲ್ಲಿ ಮನಮೋಹಕ 90 ರನ್ ಗಳಿಸಿ ಶತಕಕ್ಕಾಗಿ ಕಾದಿದ್ದ ಧ್ರುವ್ ಜುರೆಲ್, ಸ್ಪಿನ್ನರ್ ಟಾಮ್ ಹಾಟ್ರ್ಲಿ ಎಸೆತಕ್ಕೆ ಔಟಾಗಿ ಪೆವಿಲಿಯನ್‍ಗೆ ಮರಳಿದರು. 200ರ ಒಳಗೆ ಆಲೌಟ್ ಆಗುವ ಭೀತಿಯಲ್ಲಿದ್ದ ಟೀಂ ಇಂಡಿಯಾಕ್ಕೆ ಜುರೆಲ್ ಅವರ ದಿಟ್ಟ ಆಟ ಬಲ ನೀಡಿತು.

Dhruv Jurel

ಭಾರತ ತಂಡದ ಯುವ ವಿಕೆಟ್‍ಕೀಪರ್ ಬ್ಯಾಟ್ಸ್‌ಮನ್‌ ಧ್ರುವ್ ಜುರೆಲ್ ಬ್ಯಾಟಿಂಗ್‍ಗೆ ಬಂದಾಗ ತಂಡ 200ಕ್ಕೂ ಹೆಚ್ಚು ರನ್‍ಗಳ ಹಿನ್ನಡೆ ಅನುಭವಿಸುವ ಭೀತಿಯಲ್ಲಿತ್ತು. 177 ರನ್‍ಗಳಿಗೆ ಭಾರತ ತಂಡ ತನ್ನ 7ನೇ ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕುಲ್ದೀಪ್ ಯಾದವ್ (28) ಜೊತೆಗೂಡಿ ಅಮೋಘ ಆಟವಾಡಿದ ಧ್ರುವ್ ಜುರೆಲ್, 8ನೇ ವಿಕೆಟ್‍ಗೆ 202 ಎಸೆತಗಳಲ್ಲಿ 76 ರನ್‍ಗಳ ಜೊತೆಯಾಟವಾಡಿದರು. ಬಳಿಕ ಬಂದ ಆಕಾಶ್ ದೀಪ್ (9) ಜೊತೆಗೂಡಿಯೂ 40 ರನ್‍ಗಳ ಜೊತೆಯಾಟ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು. ಪರಿಣಾಮ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 307 ರನ್ ಕಲೆಹಾಕಿ ಕೇವಲ 46 ರನ್‍ಗಳಿಗೆ ಹಿನ್ನಡೆ ತಗ್ಗಿತು.

ಜುರೆಲ್ ಅವರ ತಂದೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ನಿವೃತ್ತ ಹವಾಲ್ದಾರ್ ಆಗಿದ್ದಾರೆ. ಅವರು 2008ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ.

Share This Article