– ಆಂಗ್ಲರ ಬೆವರಿಳಿಸಿದ ಟೀಂ ಇಂಡಿಯಾ ಬ್ಯಾಟರ್ಸ್
ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿ 2ನೇ ದಿನವೂ ಕ್ರೀಸ್ ಬಿಟ್ಟುಕೊಡದ ಭಾರತ (Team India) ದಿನದ ಅಂತ್ಯಕ್ಕೆ 473 ರನ್‌ಗಳಿಸಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಒಟ್ಟು 120 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 473 ರನ್ ಗಳಿಸುವ ಮೂಲಕ ಇಂಗ್ಲೆಂಡ್ (England) ವಿರುದ್ಧ 255 ರನ್‌ಗಳ ಮುನ್ನಡೆ ಸಾಧಿಸಿದೆ. ಅಲ್ಲದೇ 3ನೇ ದಿನಕ್ಕೆ ಕ್ರೀಸ್ ಉಳಿಸಿಕೊಂಡಿದೆ. ಇದನ್ನೂ ಓದಿ: ಫ್ರೀ.. ಫ್ರೀ.. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಡಿಸ್ನಿ+ ಹಾಟ್‍ಸ್ಟಾರ್‌ನಲ್ಲಿ ಫ್ರೀ
Advertisement
Advertisement
ಮೊದಲ ದಿನದ ಅಂತ್ಯಕ್ಕೆ 30 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡಿದ್ದ ಭಾರತ 135 ರನ್ ಗಳಿಸಿತ್ತು. ಆ ಮೂಲಕ 83 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್ ಆರಂಭಿಸಿತು. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಶತಕದ ಜೊತೆಯಾಟವಾಡಿದ್ದ ನಾಯಕ ರೋಹಿತ್ ಶರ್ಮಾ (Rohit Sharma), 2ನೇ ದಿನದಲ್ಲಿ ಶುಭಮನ್ ಗಿಲ್ (Shubman Gill) ಜೊತೆಯಾಗಿ 244 ಎಸೆತಗಳಲ್ಲಿ 171 ರನ್ ಜೊತೆಯಾಟ ನೀಡಿದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ ಮೇಲುಗೈ ಮೇಲುಗೈ ಸಾಧಿಸುವಂತೆ ಮಾಡಿದರು. ಇದರೊಂದಿಗೆ ಮಧ್ಯಮ ಕ್ರಮಾಂಕಲ್ಲಿ ಸರ್ಫರಾಜ್ ಖಾನ್, ದೇವದತ್ ಪಡಿಕಲ್ ಅವರ ಅರ್ಧಶತಕಗಳ ಬ್ಯಾಟಿಂಗ್ ನೆರವು ಟೀಂ ಇಂಡಿಯಾ ಬೃಹತ್ ಮೊತ್ತಕ್ಕೆ ಕಾರಣವಾಯಿತು.
Advertisement
Advertisement
ಗಿಲ್, ರೋಹಿತ್ ಶತಕಗಳ ಮಿಂಚು:
2ನೇ ದಿನದಾಟದಲ್ಲಿ ಭದ್ರವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ್ದ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಇಬ್ಬರೂ ಶತಕ ಸಿಡಿಸಿ ಮಿಂಚಿದರು. ನಾಯಕ ರೋಹಿತ್ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ 12ನೇ ಶತಕ ಪೂರೈಸಿದರು. 162 ಎಸೆತಗಳಲ್ಲಿ 103 ರನ್ (13, ಬೌಂಡರಿ, 3 ಸಿಕ್ಸರ್) ಬಾರಿಸುವ ಮೂಲಕ ಹಲವು ದಾಖಲೆಗಳನ್ನೂ ಮುಡಿಗೇರಿಸಿಕೊಂಡರು. ಇದನ್ನೂ ಓದಿ: ಯಶಸ್ವಿ ಅರ್ಧಶತಕ – 700 ರನ್ ಸಿಡಿಸಿ ಸಚಿನ್, ಕೊಹ್ಲಿ ದಾಖಲೆ ಉಡೀಸ್
ಈ ಬೆನ್ನಲ್ಲೇ ಶುಭಮನ್ ಗಿಲ್ 110 ರನ್ (150 ಎಸೆತ, 12 ಬೌಂಡರಿ, 5 ಸಿಕ್ಸರ್), ದೇವದತ್ ಪಡಿಕಲ್ 65 ರನ್ (103 ಎಸೆತ, 10 ಬೌಂಡರಿ, 1 ಸಿಕ್ಸರ್), ಸರ್ಫರಾಜ್ ಖಾನ್ 56 ರನ್ (60 ಎಸೆತ, 1 ಸಿಕ್ಸರ್, 8 ಬೌಂಡರಿ), ರವೀಂದ್ರ ಜಡೇಜಾ 15 ರನ್, ಧ್ರುವ್ ಜುರೆಲ್ 15 ರನ್ ಗಳಿಸಿದ್ರೆ ಅಶ್ವಿನ್ ಶೂನ್ಯ ಸುತ್ತಿದರು. ಸದ್ಯ ಕುಲ್ದೀಪ್ 27 ರನ್, ಜಸ್ಪ್ರೀತ್ ಬುಮ್ರಾ 19 ರನ್ ಗಳಿಸಿದ್ದು, 3ನೇ ದಿನಕ್ಕೆ ಕ್ರೀಸ್ ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಶೋಯೆಬ್ ಬಷೀರ್ (Shoaib Bashir) 4 ವಿಕೆಟ್ ಪಡೆದರೆ, ಟಾಮ್ ಹಾರ್ಟ್ಲಿ 2 ವಿಕೆಟ್ ಹಾಗೂ ಜೇಮ್ಸ್ ಆಂಡರ್ಸನ್ ಮತ್ತು ಬೆನ್‌ಸ್ಟೋಕ್ಸ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: T20 World Cup: ಅಬ್ಬಬ್ಬಾ! ಇಂಡೋ-ಪಾಕ್ ಪಂದ್ಯದ ಟಿಕೆಟ್ ಬೆಲೆ ಕೇಳಿದ್ರೆ ಎದೆಬಡಿತ ಜೋರಾಗುತ್ತೆ