ಮುಂಬೈ: ಈ ವರ್ಷದ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (T20 World Cup 2024) ಕ್ರಿಕೆಟ್ ಪಂದ್ಯಗಳನ್ನು ಕ್ರಿಕೆಟ್ (Cricket) ಪ್ರಿಯರು ಮೊಬೈಲಿನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಇಲ್ಲಿಯವರೆಗೆ ಡಿಸ್ನಿ ಹಾಟ್‍ಸ್ಟಾರ್‌ನಲ್ಲಿ (Disney+ Hotstar) ಲೈವ್ ಕ್ರಿಕೆಟ್ ನೋಡಬೇಕಾದರೆ ಸಬ್‍ಸ್ಕ್ರೈಬ್ ಮಾಡಬೇಕಿತ್ತು. ಮೊಬೈಲಿನಲ್ಲಿ ಮಾತ್ರ ಉಚಿತ ಸಿಗಲಿದ್ದು ಟಿವಿಯಲ್ಲಿ ವೀಕ್ಷಣೆ ಮಾಡಬೇಕಾದರೆ ಸಬ್‍ಸ್ಕ್ರೈಬ್ ಆಗಬೇಕಾಗುತ್ತದೆ.
Advertisement
ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಜೂನ್ 1 ರಿಂದ ಪ್ರಾರಂಭವಾಗಲಿದ್ದು ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ನಲ್ಲಿ ನಡೆಯಲಿದೆ. ಈ ಮೂಲಕ ಮೊದಲ ಬಾರಿಗೆ ಅಮೆರಿಕದ ಅಂಗಳದಲ್ಲಿ ವಿಶ್ವಕಪ್ ಕ್ರಿಕೆಟ್ ನಡೆಯಲಿದೆ.
Advertisement
ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಪ್ರಕಟಿಸಿದ್ದು, ಜೂನ್ 9 ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದೆ.
Advertisement
ಡಿಸ್ನಿ ಮತ್ತು ರಿಲಯನ್ಸ್ ತಮ್ಮ ಭಾರತೀಯ ದೂರದರ್ಶನ ಮತ್ತು ಸ್ಟ್ರೀಮಿಂಗ್‍ನ್ನು 8.5 ಬಿಲಿಯನ್ ಡಾಲರ್‌ಗೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದಿಂದ ಭಾರತದಲ್ಲಿನ ನೂರು ಕೋಟಿ ಮೊಬೈಲ್‍ಗಳಿಗೆ ಐಪಿಎಲ್ ಹಾಗೂ ವಿಶ್ವಕಪ್ ಕ್ರಿಕೆಟ್ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗಲಿದೆ.
Advertisement
ಒಪ್ಪಂದದ ನಿಯಮಗಳ ಅಡಿಯಲ್ಲಿ, ರಿಲಯನ್ಸ್ ಮತ್ತು ಅದರ ಅಂಗಸಂಸ್ಥೆಗಳು ಜಂಟಿ ಉದ್ಯಮದ 63% ಪಾಲನ್ನು ಹೊಂದಿದ್ದು, ಉಳಿದ 37%ನ್ನು ಡಿಸ್ನಿ ನಿರ್ವಹಿಸುತ್ತದೆ.
ಒಟ್ಟಾರೆಯಾಗಿ, 120ಕ್ಕೂ ಹೆಚ್ಚು ಟಿವಿ ಚಾನೆಲ್‍ಗಳು ಮತ್ತು ಎರಡು ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮ್‍ಗಳನ್ನು ನಿಯಂತ್ರಿಸುತ್ತದೆ. ಡಿಸ್ನಿಯು ಸ್ಟಾರ್ ಟಿವಿ ಮತ್ತು ಹಾಟ್‍ಸ್ಟಾರ್ ಬ್ರಾಂಡ್‍ಗಳ ಅಡಿಯಲ್ಲಿ ಡಿಜಿಟಲ್ ಸೇವೆಗಳನ್ನು ಹೊಂದಿದೆ. ರಿಲಯನ್ಸ್‍ನ ವಯಾಕಾಮ್ 18 ಜೆವಿ ಜಿಯೋಸಿನಿಮಾ ಬ್ರ್ಯಾಂಡ್ ಅಡಿಯಲ್ಲಿ ಸ್ಟ್ರೀಮಿಂಗ್ ಸೇವೆ ಒದಗಿಸಲಿದ್ದು, ಕ್ರಿಕೆಟ್ ಪ್ರಿಯರಿಗೆ ಉಚಿತವಾಗಿ ಐಪಿಎಲ್ ಹಾಗೂ ವಿಶ್ವಕಪ್ ವೀಕ್ಷಣೆಯ ಅವಕಾಶ ಮಾಡಿಕೊಡಲಾಗಿದೆ.
ಸೋನಿಯ ಝೀ ಟಿವಿ ಮತ್ತು ಅಮೆಜಾನ್ ಮತ್ತು ನೆಟ್‍ಫ್ಲಿಕ್ಸ್‌ನಂತಹ ಅಂತರರಾಷ್ಟ್ರೀಯ ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮ್‍ಗಳಿಗೆ ಸವಾಲು ಹಾಕಲು ಈ ಒಪ್ಪಂದದ ಸಂಬಂಧವನ್ನು ಉತ್ತಮವಾಗಿ ಇರಿಸಿಕೊಳ್ಳಲಾಗುವುದು. ಈ ಮೂಲಕ ಭಾರತದಲ್ಲಿ 7500 ಲಕ್ಷ ವೀಕ್ಷಕರನ್ನು ತಲುಪಲಿದ್ದೇವೆ ಎಂದು ಡಿಸ್ನಿ ಮತ್ತು ರಿಲಯನ್ಸ್ ಹೇಳಿಕೊಂಡಿವೆ.
ಇದು ಭಾರತೀಯ ಮನರಂಜನಾ ಉದ್ಯಮದಲ್ಲಿ ಹೊಸ ಯುಗವನ್ನು ಹುಟ್ಟು ಹಾಕುವ ಮಹತ್ವದ ಒಪ್ಪಂದವಾಗಿದೆ ಎಂದು ರಿಲಯನ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದರು. ನಾವು ಯಾವಾಗಲೂ ಡಿಸ್ನಿಯನ್ನು ಜಾಗತಿಕವಾಗಿ ಅತ್ಯುತ್ತಮ ಮಾಧ್ಯಮ ಗುಂಪು ಎಂದು ಗೌರವಿಸುತ್ತೇವೆ ಮತ್ತು ಈ ಕಾರ್ಯತಂತ್ರದ ಜಂಟಿ ಉದ್ಯಮವನ್ನು ರೂಪಿಸಲು ನಾವು ಉತ್ಸುಕರಾಗಿದ್ದೇವೆ. ಇದು ನಮ್ಮ ವ್ಯಾಪಕ ಸಂಪನ್ಮೂಲಗಳು, ಸೃಜನಶೀಲ ಸಾಮಥ್ರ್ಯ ಮತ್ತು ಮಾರುಕಟ್ಟೆ ಒಳನೋಟಗಳನ್ನು ಒಟ್ಟುಗೂಡಿಸಿ ರಾಷ್ಟ್ರದಾದ್ಯಂತ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ಮನರಂಜನೆ ನೀಡಲು ಸಹಾಯ ಮಾಡುತ್ತದೆ. ರಿಲಯನ್ಸ್ ಗುಂಪಿನ ಪ್ರಮುಖ ಪಾಲುದಾರರಾಗಿ ಡಿಸ್ನಿಯನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದರು.