– ಬಾಂಗ್ಲಾಗೆ 515 ರನ್‌ಗಳ ಕಠಿಣ ಗುರಿ
ಚೆನ್ನೈ: ಶುಭಮನ್ ಗಿಲ್, ರಿಷಭ್ ಪಂತ್ ಶತಕ ನಂತರ ಅಶ್ವಿನ್ (Ashwin) ಅವರ ಮಾರಕ ಬೌಲಿಂಗ್‌ನಿಂದ ಮೊದಲ ಟೆಸ್ಟ್‌ನಲ್ಲಿ ಭಾರತ (Team India) ಬಿಗಿ ಹಿಡಿತ ಹೊಂದಿದ್ದು, ಬಾಂಗ್ಲಾದೇಶಕ್ಕೆ (Bangladesh) ಗೆಲ್ಲಲು 515 ರನ್‌ಗಳ ಕಠಿಣ ಸವಾಲನ್ನು ನೀಡಿದೆ.
4 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದ್ದಾಗ ಭಾರತ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾ 158 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಹೊಡೆದರೂ ವಿಕೆಟ್ ಪಡೆಯದ ಅಶ್ವಿನ್ ಎರಡನೇ ಇನ್ನಿಂಗ್ಸ್ ಮೂರು ವಿಕೆಟ್ ಪಡೆಯುವ ಮೂಲಕ ಬಾಂಗ್ಲಾ ಬ್ಯಾಟಿಂಗ್ ಶಕ್ತಿಯನ್ನು ಧ್ವಂಸ ಮಾಡಿದ್ದಾರೆ. ಇನ್ನೂ ಎರಡು ದಿನದ ಆಟ ಬಾಕಿ ಉಳಿದಿದ್ದು 6 ವಿಕೆಟ್ ಸಹಾಯದಿಂದ ಬಾಂಗ್ಲಾ 357 ರನ್ ಗಳಿಸಬೇಕಿದೆ. ಇದನ್ನೂ ಓದಿ: 6 ರನ್ ಹೊಡೆದು ಭಾರತದ ಪರ ವಿಶಿಷ್ಟ ಸಾಧನೆ ನಿರ್ಮಿಸಿ ಸಚಿನ್, ಪಾಂಟಿಂಗ್ ಕ್ಲಬ್ ಸೇರಿದ ಕೊಹ್ಲಿ
- Advertisement
- Advertisement
ಬಾಂಗ್ಲಾ ಪರ ಝಕೀರ್ ಹಸನ್ 33 ರನ್, ಶಾದ್ಮನ್ ಇಸ್ಲಾಂ 35 ರನ್ ಹೊಡೆದರೆ ನಾಯಕ ನಜ್ಮುಲ್ ಹೊಸೈನ್ ಔಟಾಗದೇ 51 ರನ್ (60 ಎಸೆತ, 4 ಬೌಂಡರಿ, 3 ಸಿಕ್ಸ್) ಹೊಡೆದು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಶತಕದಾಟ:
ಎರಡನೇ ದಿನ 33 ರನ್ ಗಳಿಸಿದ್ದ ಶುಭಮನ್ ಗಿಲ್ (Shubman Gill ) ಮತ್ತು 12 ರನ್ ಗಳಿಸಿದ್ದ ರಿಷಭ್ ಪಂತ್ (Rishabh Pant) ಇಂದು ಶತಕ ಬಾರಿಸಿದರು. ಇಬ್ಬರೂ 4ನೇ ವಿಕೆಟಿಗೆ 217 ಎಸೆತಗಳಲ್ಲಿ 167 ರನ್ ಜೊತೆಯಾಟವಾಡಿದರು.
Just @RishabhPant17 things ????????
Live – https://t.co/jV4wK7BgV2… #INDvBAN@IDFCFIRSTBank pic.twitter.com/WSYpvqwzr1
— BCCI (@BCCI) September 21, 2024
ಏಕದಿನ ಶೈಲಿಯಂತೆ ಬ್ಯಾಟ್ ಬೀಸಿದ ರಿಷಭ್ ಪಂತ್ 128 ಎಸೆತಗಳಲ್ಲಿ 109 ರನ್ (13 ಬೌಂಡರಿ, 4 ಸಿಕ್ಸ್) ಹೊಡೆದು ಔಟಾದರೆ ಶುಭಮನ್ ಗಿಲ್ ಔಟಾಗದೇ 119 ರನ್ (176 ಎಸೆತ, 10 ಬೌಂಡರಿ, 4 ಸಿಕ್ಸರ್) ಹೊಡೆದರು. ಕೆಎಲ್ ರಾಹುಲ್ ಔಟಾಗದೇ 22 ರನ್ (19 ಎಸೆತ, 4 ಬೌಂಡರಿ) ಹೊಡೆದರು. ಮುರಿಯದ 5ನೇ ವಿಕೆಟಿಗೆ ಗಿಲ್ ಮತ್ತು ರಾಹುಲ್ (KL Rahul) 51 ಎಸೆತಗಳಲ್ಲಿ 53 ರನ್ ಹೊಡೆಯುವ ಮೂಲಕ ಬಾಂಗ್ಲಾಗೆ ದೊಡ್ಡ ಗುರಿಯನ್ನು ನೀಡಿದರು.