ಢಾಕಾ: 2ನೇ ಟೆಸ್ಟ್‌ನ (2nd Test) ಮೂರನೇ ದಿನ ಬೌಲರ್‌ಗಳ ಮೇಲಾಟ ನಡೆದಿದೆ. ಒಂದೇ ದಿನ ಭಾರತ (India) ಹಾಗೂ ಬಾಂಗ್ಲಾದೇಶದ (Bangladesh) 14 ವಿಕೆಟ್ ಪತನಗೊಂಡಿದ್ದು, ನಾಲ್ಕನೇ ದಿನದಾಟ ಕೂತುಹಲ ಕೆರಳಿಸಿದೆ.
Advertisement
ಬಾಂಗ್ಲಾದೇಶ ಭಾರತಕ್ಕೆ 145 ರನ್‍ಗಳ ಗುರಿ ನೀಡಿ ಬಳಿಕ ಬೌಲಿಂಗ್‍ನಲ್ಲಿ ಕಮಾಲ್ ಮಾಡಿದೆ. ಭಾರತ ಅಲ್ಪ ಗುರಿಯನ್ನು ಬೆನ್ನಟ್ಟುವ ಉತ್ಸಾಹದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದ್ದು, 4ನೇ ದಿನ 100 ರನ್‍ಗಳ ಟಾರ್ಗೆಟ್ ಪಡೆದಿದೆ. ಇದನ್ನೂ ಓದಿ: ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು
Advertisement
Advertisement
2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 7 ರನ್‍ಗಳಿದ್ದ ಬಾಂಗ್ಲಾ ಮೂರನೇ ದಿನದಾಟದ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಾಗಿತು. ಆದರೆ ಇನ್ನೊಂದೆಡೆ ಜಾಕಿರ್ ಹಸನ್ ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸಿ, ಏಕಾಂಗಿ ಹೋರಾಟ ನಡೆಸಿ 51 ರನ್ (135 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಬಳಿಕ ಕೆಲ ಕ್ರಮಾಂಕದಲ್ಲಿ ಲಿಂಟನ್ ದಾಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ 73 ರನ್ (98 ಎಸೆತ, 7 ಬೌಂಡರಿ) ಸಿಡಿಸಿ ತಂಡಕ್ಕೆ ಆಸರೆಯಾದರು.
Advertisement
ಆ ಬಳಿಕ ನೂರುಲ್ ಹಸನ್ 31 ರನ್ (29 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ತಸ್ಕಿನ್ ಅಹ್ಮದ್ ಅಜೇಯ 31 ರನ್ (46 ಎಸೆತ, 4 ಬೌಂಡರಿ) ಬಾರಿಸಿದ ಪರಿಣಾಮ 200ರ ಗಡಿ ದಾಟಿ 70.2 ಓವರ್‌ಗಳಲ್ಲಿ 231 ರನ್‍ಗಳಿಗೆ ಆಲೌಟ್ ಆಯಿತು. ಭಾರತ ಪರ ಬೌಲಿಂಗ್‍ನಲ್ಲಿ ಅಕ್ಷರ್ ಪಟೇಲ್ 3 ವಿಕೆಟ್ ಪಡೆದು ಮಿಂಚಿದರು. ಇನ್ನುಳಿದಂತೆ ಅಶ್ವಿನ್, ಸಿರಾಜ್ ತಲಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ ಮತ್ತು ಉನಾದ್ಕಟ್ ತಲಾ 1 ವಿಕೆಟ್ ಹಂಚಿಕೊಂಡರು. ಇದನ್ನೂ ಓದಿ: 15ರ ಬಾಲಕನಿಗೆ ಕೈತಪ್ಪಿದ ಅವಕಾಶ ಹಿರಿಯ ಅಟಗಾರನಿಗೆ ಮಣೆ – 10 ತಂಡಗಳ ಫೈನಲ್ ಲಿಸ್ಟ್
145 ರನ್‍ಗಳ ಗುರಿಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತದ ಲೆಕ್ಕಾಚಾರ ಆರಂಭದಲ್ಲೇ ತಲೆಕೆಳಗಾಗಿದೆ. ಗಿಲ್ 7, ರಾಹುಲ್ 2, ಪೊಜಾರ 6 ಮತ್ತು ಕೊಹ್ಲಿ 1 ರನ್ ಬಾರಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡು ಆತಂಕ ತಂದೊಡ್ಡಿದ್ದಾರೆ. ಅಂತಿಮವಾಗಿ ಭಾರತ ದಿನದಾಟದ ಅಂತ್ಯಕ್ಕೆ 23 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 45 ರನ್ ಬಾರಿಸಿದೆ. ಅಕ್ಷರ್ ಪಟೇಲ್ ಅಜೇಯ 26 ರನ್ (54 ಎಸೆತ, 3 ಬೌಂಡರಿ) ಮತ್ತು ನೈಟ್ ವಾಚ್‌ಮೆನ್ ಉನಾದ್ಕಟ್ 3 ರನ್ ಸಿಡಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೆರಡು ದಿನ ಬಾಕಿ ಇದ್ದು ಭಾರತದ ಗೆಲುವಿಗೆ 100 ರನ್ ಬೇಕಾಗಿದೆ. ಬಾಂಗ್ಲಾ ಗೆಲುವಿಗೆ ಇನ್ನು 6 ವಿಕೆಟ್ ಅವಶ್ಯಕವಾಗಿದೆ.
Live Tv
[brid partner=56869869 player=32851 video=960834 autoplay=true]