ಗ್ರಾಸ್ ಐಲೆಟ್(ಸೇಂಟ್ ಲೂಸಿಯಾ): ಟಿ20 ವಿಶ್ವಕಪ್ (T20 World Cup) ಕ್ರಿಕೆಟ್ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 24 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ಕಳೆದ ವರ್ಷದ ವಿಶ್ವಕಪ್ ಕ್ರಿಕೆಟ್ ಫೈನಲಿನಲ್ಲಿ ಸೋತಿದ್ದ ಭಾರತ ಈ ಪಂದ್ಯವನ್ನು ಗೆಲ್ಲುವ ಮೂಲಕ ಸೇಡು ತೀರಿಸಿದೆ.
ಗೆಲ್ಲಲು 205 ರನ್‌ಗಳ ಕಠಿಣ ಗುರಿಯನ್ನು ಪಡೆದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಹೊಡೆದು ಜಯಗಳಿಸಿತು. ಕೊನೆಯಲ್ಲಿ ಆರ್ಶ್‌ದೀಪ್ ಸಿಂಗ್, ಕುಲದೀಪ್ ಯಾದವ್, ಬುಮ್ರಾ ಉತ್ತಮ ಬೌಲಿಂಗ್ ದಾಳಿ ನಡೆಸಿದ ಪರಿಣಾಮ ಭಾರತ ಗೆಲುವು ಸಾಧಿಸಿತು.
Advertisement
ಡೇವಿಡ್ ವಾರ್ನರ್ 6 ರನ್‌ಗಳಿಸಿ ಬೇಗನೇ ಔಟಾದರೂ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಎರಡನೇ ವಿಕೆಟಿಗೆ 81 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು.
Advertisement
ವಿಕೆಟ್ ಉರುಳುತ್ತಿದ್ದರೂ ಟ್ರಾವಿಸ್ ಹೆಡ್ ನಿಂತು ಆಡುತ್ತಿದ್ದರು. ಬೂಮ್ರಾ ಎಸೆದ ಇನ್ನಿಂಗ್ಸ್ 17ನೇ ಓವರ್‌ನಲ್ಲಿ ಟ್ರಾವಿಸ್ ಹೆಡ್ 76 ರನ್ (43 ಎಸೆತ, 9 ಬೌಂಡರಿ,4 ಸಿಕ್ಸ್) ಗಳಿಸಿದ್ದಾಗ ರೋಹಿತ್ ಶರ್ಮಾ ಕ್ಯಾಚ್ ನೀಡಿ ಔಟಾದ ಬಳಿಕ ಭಾರತದತ್ತ ಪಂದ್ಯ ವಾಲಿತು.
Advertisement
ಆರ್ಶ್‌ದೀಪ್ ಸಿಂಗ್ 3 ವಿಕೆಟ್, ಕುಲದೀಪ್ ಯಾದವ್ 2 , ಬುಮ್ರಾ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: ಸಿಕ್ಸ್, ಬೌಂಡರಿ ಸುರಿಮಳೆ – ವಿಶ್ವದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ
Advertisement
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಪರ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು. ವಿಕೆಟ್ ಉರುಳಿದ್ದರೂ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 41 ಎಸೆತಗಳಲ್ಲಿ 91 ರನ್ ಹೊಡೆಯವ ಮೂಲಕ ಹಲವು ದಾಖಲೆ ನಿರ್ಮಿಸಿದರು. ಈ ಸುಂದರ ರೋಹಿತ್ ಶರ್ಮಾ (Rohit Sharma) ಸಿಕ್ಸ್ ಮತ್ತು ಬೌಂಡರಿ ಮೂಲಕವೇ 76 ರನ್ ಚಚ್ಚಿದ್ದರು. 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಮಿಚೆಲ್ ಸ್ಟ್ರಾಕ್ ಎಸೆತದಲ್ಲಿ ಬೌಲ್ಡ್ ಔಟ್ ಆದರು.
ರಿಷಭ್ ಪಂತ್ 15 ರನ್, ಸೂರ್ಯಕುಮಾರ್ ಯಾದವ್ 31 ರನ್(16 ಎಸೆತ, 3 ಬೌಂಡರಿ, 2 ಸಿಕ್ಸರ್), ಶಿವಂ ದುಬೆ 28 ರನ್ (22 ಎಸೆತ, 2 ಬೌಂಡರಿ, 1 ಸಿಕ್ಸ್), ಹಾರ್ದಿಕ್ ಪಾಂಡ್ಯ ಔಟಾಗದೇ 27 ರನ್ ( 17 ಎಸೆತ, 1 ಬೌಂಡರಿ, 2 ಸಿಕ್ಸ್), ಜಡೇಜಾ ಔಟಾಗದೇ 9 ರನ್ (5 ಎಸೆತ, 1 ಸಿಕ್ಸ್) ಹೊಡೆದ ಪರಿಣಾಮ ಭಾರತ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 205 ರನ್ ಹೊಡೆಯಿತು.