ಬೆಂಗಳೂರು: 5 ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನವೇ ನಥನ್ ಲಿಯಾನ್ ಸ್ಪಿನ್‍ಗೆ ತತ್ತರಿಸಿದ ಭಾರತ 71.2 ಓವರ್ ಗಳಿಗೆ 189 ರನ್‍ಗಳಿಗೆ ಆಲೌಟ್ ಆಗಿದೆ.
ಆರಂಭಿಕ ಆಟಗಾರ ಕೆಎಲ್ ರಾಹುಲ್ 90 ರನ್ (205 ಎಸೆತ, 9 ಬೌಂಡರಿ) ಕರಣ್ ನಾಯರ್ 26 ರನ್ ಹೊಡೆದರು. ಜೀವನ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಲಿಯಾನ್ 22.2 ಓವರ್ ಎಸೆದು 50 ರನ್ ನೀಡಿ 8 ವಿಕೆಟ್ ಪಡೆದರು.
Advertisement
ಅಭಿನವ್ ಮುಕುಂದ್ ಅವರನ್ನು ಸ್ಟ್ರಾಕ್ ಎಲ್‍ಬಿ ಮಾಡಿದ್ರೆ, ಕರಣ್ ನಾಯರ್ ಅವರನ್ನು ಸ್ವೀವ್ ಓ ಕೀಫ್ ಬೌಲಿಂಗ್‍ನಲ್ಲಿ ಮ್ಯಾಥ್ಯೂ ವೇಡ್ ಸ್ಟಂಪ್ ಔಟ್ ಮಾಡಿದರು. ಉಳಿದ ಆಟಗಾರರನ್ನು ಲಿಯನ್ ಪೆವಿಲಿಯನ್‍ಗೆ ಕಳುಹಿಸಿದರು.
Advertisement
ಇದನ್ನೂ ಓದಿ:ಕೊಹ್ಲಿಗೆ ಧೋನಿಯ ಈ ಒಂದು ದಾಖಲೆ ಮುರಿಯಲು ಸಾಧ್ಯವೇ ಇಲ್ಲ
Advertisement
ಯಾರು ಎಷ್ಟು ರನ್?
ಕೆಎಲ್ ರಾಹುಲ್ 90, ಅಭಿನವ್ ಮುಕುಂದ್ 0, ಚೇತೇಶ್ವರ ಪೂಜಾರ 17, ವಿರಾಟ್ ಕೊಹ್ಲಿ 12, ಅಜಿಂಕ್ಯಾ ರೆಹಾನೆ 17, ಕರಣ್ ನಾಯರ್ 26, ಆರ್ ಅಶ್ವಿನ್ 7, ವೃದ್ಧಿಮಾನ್ ಸಹಾ 1, ರವೀಂದ್ರ ಜಡೇಜಾ 3, ಉಮೇಶ್ ಯಾದವ್ ಔಟಾಗದೇ 0, ಇಶಾಂತ್ ಶರ್ಮಾ 0 ರನ್ ಗಳಿಸಿದರು.
Advertisement
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿದೆ. ಡೇವಿಡ್ ವಾರ್ನರ್ 23 ರನ್, ಮ್ಯಾಟ್ ರೇನ್‍ಶಾ 15 ರನ್‍ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನಥನ್ ಲಿಯಾನ್ 2013ರ ಮಾರ್ಚ್ ನಲ್ಲಿ ದೆಹಲಿಯ ಫಿರೋಜಾ ಕೋಟ್ಲಾ ಮೈದಾನದಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ನಲ್ಲಿ 94 ರನ್ ನೀಡಿ 7 ವಿಕೆಟ್ ಪಡೆದಿದ್ದರು. ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದುಕೊಂಡಿತ್ತು.