Connect with us

ಕೊಹ್ಲಿಗೆ ಧೋನಿಯ ಈ ಒಂದು ದಾಖಲೆ ಮುರಿಯಲು ಸಾಧ್ಯವೇ ಇಲ್ಲ

ಕೊಹ್ಲಿಗೆ ಧೋನಿಯ ಈ ಒಂದು ದಾಖಲೆ ಮುರಿಯಲು ಸಾಧ್ಯವೇ ಇಲ್ಲ

ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‍ನಲ್ಲಿ ಎಲ್ಲ ದಾಖಲೆಗಳನ್ನು ಮುರಿಯುತ್ತಾ ಹೋಗುತ್ತಿದ್ದಾರೆ. ಆದರೆ ಧೋನಿ ಆಸ್ಟ್ರೇಲಿಯಾ ವಿರುದ್ಧ ನಿರ್ಮಿಸಿರುವ ಒಂದು ದಾಖಲೆಯನ್ನು ಕೊಹ್ಲಿಗೆ ಮುರಿಯಲು ಸಾಧ್ಯವಿಲ್ಲ.

ಹೌದು. ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇದೂವರೆಗೆ ಸ್ವದೇಶದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿರಲಿಲ್ಲ. ಆದರೆ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲುವ ಮೂಲಕ ಕೊಹ್ಲಿಗೆ ಈ ವಿಶಿಷ್ಟ ದಾಖಲೆಯನ್ನು ಇನ್ನು ಮುಂದೆ ಮುರಿಯಲು ಸಾಧ್ಯವಿಲ್ಲದಂತಾಗಿದೆ.

ಧೋನಿ ನಾಯಕತ್ವದಲ್ಲಿ ಭಾರತ ಇದೂವರೆಗೆ ಒಟ್ಟು 8 ಪಂದ್ಯಗಳನ್ನು ಗೆದ್ದುಕೊಂಡಿದೆ. 2008-09ರಲ್ಲಿ ನಾಲ್ಕು ಟೆಸ್ಟ್ ಪಂದ್ಯದಲ್ಲಿ ಭಾರತ ಧೋನಿ ನಾಯಕತ್ವದಲ್ಲಿ 2-0 ಅಂತರದಿಂದ ಗೆದ್ದಿದ್ದರೆ, 2010-11ರಲ್ಲಿ ಇದೇ ಫಲಿತಾಂಶ ಮತ್ತೊಮ್ಮೆ ಪುನಾರವರ್ತನೆ ಆಗಿತ್ತು. 2013ರಲ್ಲಿ  4-0 ಅಂತರದಿಂದ ಭಾರತ ಸರಣಿಯನ್ನು ಗೆದ್ದುಕೊಂಡಿತ್ತು. ಈ ಸರಣಿಯಲ್ಲಿ ಧೋನಿ ದ್ವಿಶತಕ ಹೊಡೆದಿದ್ದರು.

ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟೇಲಿಯಾ 333 ರನ್‍ಗಳಿಂದ ಗೆದ್ದುಕೊಂಡಿತ್ತು. ಸ್ವೀವ್ ಓ’ ಕೀಫ್ 12 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಜಯಕ್ಕೆ ಕಾರಣರಾಗಿದ್ದರು.

Advertisement
Advertisement