ಅಹಮದಾಬಾದ್: ಕ್ರಿಕೆಟ್ (Cricket) ಅಂದ್ರೇ ಅದು ಬರೀ ಕ್ರೀಡೆಯಲ್ಲ, ಭಾರತೀಯರ ಪಾಲಿಗೆ ಅದೊಂದು ಧರ್ಮ ಅಷ್ಟರ ಮಟ್ಟಿಗೆ ಭಾರತದಲ್ಲಿ ಕ್ರಿಕೆಟ್ ಜನಪ್ರಿಯವಾಗಿರೋದು ಎಲ್ಲರಿಗೂ ಗೊತ್ತಿದೆ. ಇತಂಹ ಭಾರತದಲ್ಲಿ ಇಂದು ವಿಶ್ವಕಪ್ ಫೈನಲ್ (World Cup 2023) ಪಂದ್ಯ ನಡೆಯುತ್ತಿದ್ದು, ಭಾರತ ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನ (IND Vs AUS) ಎದುರಿಸುತ್ತಿದೆ. ಭಾರತ ಫೈನಲ್‍ಗೆ ಲಗ್ಗೆ ಇಡಲು ಎಲ್ಲರ ಕಾಣಿಕೆ ಮಹತ್ವದ್ದಾಗಿದ್ದರೆ ಈ ಬೌಲರ್ ಮಾತ್ರ ಎದುರಾಳಿ ತಂಡಗಳಿಗೆ ನಡುಕ ಸೃಷ್ಟಿಸಿದ್ದಾರೆ.
Advertisement
ಹೌದು, 2023ರ ವಿಶ್ವ ಕ್ರಿಕೆಟ್ ಫೈನಲ್‍ಗೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ. ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium Ahemadabad) ಇಂಡೋ ಆಶ್ ಫೈನಲ್ ಮ್ಯಾಚ್‍ಗೆ ಸಜ್ಜಾಗಿದೆ. ಭಾರತ ಮೂರನೇ ಬಾರಿ ಕಪ್ ತನ್ನಾದಾಗಿಸಿಕೊಳ್ಳಲಿದೆ ಅನ್ನೋ ಆಶಾಭಾವನೆಯಲ್ಲಿ ಇಡೀ ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಾಯ್ತಿದ್ದಾರೆ. ಇದನ್ನೂ ಓದಿ: ಮತ್ತೆ ಮಾತಿನಲ್ಲೇ ತಿವಿದ ವಿಚ್ಛೇದಿತ ಪತ್ನಿ – ತೆರೆಯ ಹಿಂದೆ ಶಮಿಯ ಬದುಕು ಘೋರ!
Advertisement
Advertisement
ಭಾರತ ಈ ವಿಶ್ವಕಪ್‍ನಲ್ಲಿ ಬ್ಯಾಟಿಂಗ್ ಬೌಲಿಂಗ್ ಫೀಲ್ಡಿಂಗ್ ಮೂರು ವಿಭಾಗದಲ್ಲಿ ಅಭೂತ ಫಾರ್ಮ್ ನಲ್ಲಿರೋದು ಫೈನಲ್ ಪ್ರವೇಶಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಮೊದಲು ಮೂರು ಪಂದ್ಯದಲ್ಲಿ ಬೆಂಜ್ ಕಾಯ್ತಿದ್ದ ಬೌಲರ್ ಇಂದಿನ ಪಂದ್ಯಕ್ಕೆ ಟ್ರಂಪ್ ಕಾರ್ಡ್ ಆಗಿದ್ದಾರೆ. ಈ ಟೂರ್ನಿಯಲ್ಲಿ ಭಾರತದ ಬೌಲಿಂಗ್ ಅಂದ್ರೆ ಶಮಿ ಅನ್ನೋ ಮಟ್ಟಕ್ಕೆ ಹೆಸರು ಮಾಡಿದ್ದಾರೆ. ಇದನ್ನೂ ಓದಿ: ಶಮಿಗೆ 7 ವಿಕೆಟ್ ಸಿಗುತ್ತೆ – ನ.14ಕ್ಕೆ ಬಿದ್ದ ಕನಸು ನನಸಾಯ್ತು
Advertisement
ಮೊದಲು ಮೂರು ಪಂದ್ಯದಲ್ಲಿ ಪ್ಲೇಯಿಂಗ್ 11 ನಲ್ಲಿ ಚಾನ್ಸ್ ಸಿಗದೇ ಬೆಂಚ್ ಕಾಯ್ತಿದ್ದ ಶಮಿಗೆ (Mohammed Shami) ಬಾಂಗ್ಲಾದೇಶ ವಿರುದ್ಧ ಹಾರ್ದಿಕ್ ಪಾಂಡ್ಯ ಇಂಜುರಿಯಿಂದ ನಾಲ್ಕನೇ ಪಂದ್ಯಕ್ಕೆ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಶಮಿ ಕಾಣಿಸಿಕೊಂಡಿದ್ದರು. ಆಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದು ಮುಂದಿನ ಪಂದ್ಯಗಳಿಗೆ ತಮ್ಮ ಅವಶ್ಯಕತೆ ಇದೇ ಅನ್ನೋದನ್ನ ತೋರಿಸಿದ್ದು ಮಹಮ್ಮದ್ ಶಮಿ. ಇದನ್ನೂ ಓದಿ: World Cup Semifinal: 7 ವಿಕೆಟ್ ಕಿತ್ತು ಗ್ಲೆನ್ ಮ್ಯಾಕ್‌ಗ್ರಾತ್ ದಾಖಲೆ ಸರಿಗಟ್ಟಿದ ಶಮಿ
ಆಡಿರೋ 6 ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆಯಿಂದ ನಂಬರ್ ಓನ್ ಬೌಲರ್ ಆಗಿರೋ ಶಮಿ ಒಟ್ಟು 23 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಮೂರು ಬಾರಿ 5+ ವಿಕೆಟ್ ಪಡೆದ ದಾಖಲೆ ಕೂಡ ಶಮಿ ಹೆಸರಿನಲ್ಲೇ ಇದೆ. ಇನ್ನೂ ಬೌಲಿಂಗ್ ಆವರೇಜ್ ಕೂಡ ಶಮಿ ಬೆಸ್ಟ್, ಅಷ್ಟೇ ಅಲ್ಲ ಬೆಸ್ಟ್ ಬೌಲಿಂಗ್ ಫಿಗರ್ ಕೂಡ ಶಮಿ ಹೆಸರಿನಲ್ಲೇ ಇದ್ದು 57 ರನ್‍ಗೆ 7 ವಿಕೆಟ್ ಪಡೆದ ಕೀರ್ತಿ ಶಮಿ ಹೆಸರಿನಲ್ಲಿದೆ.
ನಾಯಕ ರೋಹಿತ್ (Rohit Sharma), ಶಮಿ ಕೈಗೆ ಬಾಲ್ ನೀಡಿದ್ರು ಅಂದ್ರೆ ಅಪೊಸಿಟ್ ಟೀಮ್ ಬ್ಯಾಟರ್ ಗಳಲ್ಲಿ ನಡುಕ ಉಂಟಾಗ್ತಿದ್ದು ಇಂದಿನ ಪಂದ್ಯದಲ್ಲೂ ಶಮಿ ದಾಳಿಗೆ ಆಸ್ಟ್ರೇಲಿಯಾ ಬ್ಯಾಟರ್ ಗಳು ಗಲಿಬಿಲಿಗೊಂಡಿದ್ದಾರೆ. ಶಮಿಯ ಮಾರಕ ಇನ್‍ಸ್ವಿಂಗ್, ಔಟ್ ಸ್ವಿಂಗ್ ಆಸೀಸ್ ಬ್ಯಾಟ್ಸ್ ಮನ್ಸ್ ಗಳ ನಿದ್ದೆಗೆಡಿಸಿದೆ. ಹಾಗಾಗಿ ಶಮಿಯ ಬೌಲಿಂಗ್ ಹೇಗೆ ಪೇಸ್ ಮಾಡಬೇಕು ಅನ್ನೋ ಪ್ಲಾನ್ ಕೂಡ ಅವರು ಮಾಡಿಕೊಂಡಿದ್ದಾರೆ. ಶಮಿ ಮಾತ್ರ ಬೆಸಿಕ್ ಗೆ ಸ್ಟಿಕ್ ಆನ್ ಆಗಿದ್ದು ಪರಿಶ್ರಮಕ್ಕೆ ಫಲ ಸಿಕ್ಕೆ ಸಿಗುತ್ತದೆ ಅನ್ನೋ ನಂಬಿಕೆಯಲ್ಲಿ ಭಾರತಕ್ಕೆ ಕಪ್ ಗೆಲ್ಲಿಸೋದಕ್ಕೆ ಬೆಂಕಿ ಚೆಂಡುಗಳ ಮೂಲಕ ಬ್ಯಾಟರ್ ಗಳನ್ನ ಪೆವಿಲಿಯನ್‍ಗೆ ಕಳಿಸೋ ಪ್ಲಾನ್ ಮಾಡಿಕೊಂಡಿದ್ದಾರೆ.