ದುಬೈ: ರೋಚಕ ಹಣಾಹಣಿಗೆ ಸಾಕ್ಷಿಯಾಗುತ್ತದೆ ಎಂದು ನಿರೀಕ್ಷಿಸಿದ್ದ ಇಂಡೋ ಪಾಕ್ ಕದನದಲ್ಲಿ ಭಾರತದ ಬೌಲರ್ ಗಳು ಮಿಂಚು ಹರಿಸಿದ್ದು, ಇತ್ತ ಕರ್ನಾಟಕ ಮನೀಶ್ ಪಾಂಡೆ ಬೌಂಡರಿ ಗೆರೆಯಲ್ಲಿ ಅದ್ಭುತ ಕ್ಯಾಚ್ ಪಡೆದಿದ್ದಾರೆ.
ಪಂದ್ಯದ ವೇಳೆ ಗಾಯಗೊಂಡು ಹಾರ್ದಿಕ್ ಪಾಂಡ್ಯ ಕ್ರೀಡಾಂಗಣ ತೊರೆದ ಕಾರಣ ಕರ್ನಾಟಕದ ಮನೀಶ್ ಪಾಂಡೆ ಬದಲಿಯಾಗಿ ಅವಕಾಶ ಪಡೆದರು. ಸಿಕ್ಕ ಅವಕಾಶದಲ್ಲಿ ಮಿಂಚಿದ ಮನೀಶ್ ಪಾಕ್ ನಾಯಕ ಸರ್ಫರಾಜ್ ಖಾನ್ ಕ್ಯಾಚ್ ಪಡೆದು ಮಿಂಚಿದರು.
Advertisement
Manish Pandey takes a sensational catch on the boundary line to dismiss the Pakistan captain. #INDvPAK pic.twitter.com/RmTQhJDQsH
— ǟӄǟֆɦ (@akii3334) September 19, 2018
Advertisement
25ನೇ ಓವರ್ ಎಸೆದ ಜಾದವ್ ಎಸೆತದಲ್ಲಿ ಸರ್ಫರಾಜ್ ಖಾನ್ ಭಾರೀ ಹೊಡೆತಕ್ಕೆ ಕೈ ಹಾಕಿದರು. ಈ ವೇಳೆ ಬೌಂಡರಿಯಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಮನೀಶ್ ಕ್ಯಾಚ್ ಪಡೆದು ಬೌಂಡರಿ ಗೆರೆ ದಾಟುವ ಸಂದರ್ಭದಲ್ಲಿ ಮತ್ತೆ ಬಾಲ್ ಮೇಲಕ್ಕೆ ಎಸೆದು ಸಮಯಪ್ರಜ್ಞೆಯಿಂದ ಅದ್ಭುತ ಕ್ಯಾಚ್ ಪಡೆದರು. ಇದರಿಂದ ಉತ್ತಮ ಆಟದ ನಿರೀಕ್ಷೆಯಲ್ಲಿದ್ದ ಪಾಕ್ ನಾಯಕ ಪೆವಿಲಿಯನತ್ತ ನಡೆಯಬೇಕಾಯಿತು.
Advertisement
ಪಂದ್ಯದಲ್ಲಿ ಹಲವು ಕ್ಯಾಚ್ ಡ್ರಾಪ್ ಮಾಡಿದ ಟೀಂ ಇಂಡಿಯಾ ಆಟಗಾರರು ಫೀಲ್ಡಿಂಗ್ ನಲ್ಲಿ ನಿರಾಸೆ ಮೂಡುವಂತೆ ಮಾಡಿದ್ದರು. ಪ್ರಮುಖವಾಗಿ ಧೋನಿ, ಹಾರ್ದಿಕ್ ಪಾಂಡ್ಯ ಇದಕ್ಕೂ ಮುನ್ನವೇ 2 ಕ್ಯಾಚ್ ಬಿಟ್ಟಿದ್ದರು. ಚಹಲ್, ಧವನ್ ಕೂಡ ಕ್ಯಾಚ್ ಕೈ ಚೆಲ್ಲಿದ್ದರು.
Advertisement
Here are the highlights of what hepoened when last time #INDvPAK ODI was played. Can Green Shirts redo today what they did at the Oval last year?#HarSaansMeinBolo ???????? https://t.co/VINLNzwIqK
— Pakistan Cricket (@TheRealPCB) September 19, 2018
ಪಿಸಿಬಿ ಎಡವಟ್ಟು: ಟೀಂ ಇಂಡಿಯಾ ಹಾಗೂ ಪಾಕಿಸ್ತಾನದ ನಡುವಿನ ಕದನ ಆರಂಭಕ್ಕೂ ಮುನ್ನ ಟೀಂ ಇಂಡಿಯಾವನ್ನು ಟ್ರೋಲ್ ಮಾಡಲು ಯತ್ನಿಸಿದ್ದ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ (ಪಿಸಿಬಿ) ಎಡವಟ್ಟು ಮಾಡಿಕೊಂಡು ಟ್ರೋಲ್ ಆಗಿದೆ.
ಹೌದು, ಪಂದ್ಯ ಆರಂಭಕ್ಕೂ ಕೆಲವೇ ಕ್ಷಣಗಳ ಮುನ್ನ ಕಳೆದ ವರ್ಷದ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಗೆಲುವು ಪಡೆದಿದ್ದ ಪಂದ್ಯದ ಸನ್ನಿವೇಶಗಳ ಐಸಿಸಿ ವೀಡಿಯೋವನ್ನು ಶೇರ್ ಮಾಡಿದ್ದ ಪಿಸಿಬಿ ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿತ್ತು. ಆದರೆ ಈ ವೇಳೆ ಅಕ್ಷರ ದೋಷ ಮಾಡಿ ಪಾಕ್ ಟ್ರೋಲ್ ಒಳಗಾಗಿದೆ. ಇದನ್ನು ಕಂಡ ಅಭಿಮಾನಿಗಳು ಪಿಸಿಬಿಗೆ ಮರುಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ. ಅಲ್ಲದೇ ಪಿಸಿಬಿ ಟ್ವೀಟ್ ಮಾಡಿದ್ದ `hepoened’ ಪದದ ಅರ್ಥ ಕೇಳಿ, ಶುಭಾಶಯ ಕೋರಿದ್ದರೆ, ಮತ್ತು ಕೆಲವರು ನಮ್ಮ ಸೋಲನ್ನು ನೆನಪಿಸಿದ್ದಕ್ಕೆ ಧನ್ಯವಾದ ಆದರೆ ನಿಮ್ಮನ್ನು ಟ್ರೋಲ್ ಮಾಡುತ್ತಿರುವವರಿಗೆ ಉತ್ತರಿಸಿ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Pehle English shik lo fir aana baat karne????????????
— Ashutosh Kumar Singh (@ashkkkkash) September 19, 2018
what is the word 'hepoened' means pic.twitter.com/OB2B55F9K7
— gk singh (@gksingh264) September 19, 2018