– ಆ.18ರಂದು ಗೇಟ್ ಅಳವಡಿಸಿದ ನಂತರ ಮತ್ತೆ ಭರ್ತಿ ಹಂತದಲ್ಲಿರುವ ಡ್ಯಾಂ
ಕೊಪ್ಪಳ: ಮಲೆನಾಡಿನಲ್ಲಿ ಮತ್ತೆ ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ (Tungabhadra Dam) ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನೀರಿನ ಒಳ ಹರಿವು ಹೆಚ್ಚಾಗಿದೆ. ಇದರಿಂದ ಜನರಲ್ಲಿ ಸಂತಸ ಇಮ್ಮಡಿಯಾಗಿದೆ.
Advertisement
ಜಿಲ್ಲೆಯ ಮುನಿರಾಬಾದ್ (Munirabad) ಬಳಿಯಿರುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ನೀರಿನ ಒಳಹರಿವು 34,431 ಕ್ಯೂಸೆಕ್ ನಷ್ಟಿದೆ. ಜಲಾಶಯದಲ್ಲಿ ನೀರಿನ ಮಟ್ಟ 94.324 ಟಿಎಂಸಿ ತಲುಪಿದ್ದು, ಒಟ್ಟು 105.788 ಟಿಎಂಸಿ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ.ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ
Advertisement
Advertisement
ಸದ್ಯ ಜಲಾಶಯ ಭರ್ತಿಗೆ ಕೇವಲ 10 ಟಿಎಂಸಿ ನೀರು ಅವಶ್ಯಕತೆಯಿದೆ. ನೀರಿನ ಹೊರಹರಿವು ಒಟ್ಟು ಹತ್ತು ಸಾವಿರ ಕ್ಯೂಸೆಕ್ ಇದೆ.
Advertisement
ಆ.10 ರಂದು ಡ್ಯಾಂನ ಕ್ರಸ್ಟಗೇಟ್ (Crest Gate) ಕೊಚ್ಚಿಕೊಂಡು ಹೋಗಿತ್ತು. ಆ ಸಂದರ್ಭದಲ್ಲಿ ಡ್ಯಾಂ ಕ್ರಸ್ಟಗೇಟ್ ಅಳವಡಿಕೆಗಾಗಿ ಅಪಾರ ಪ್ರಮಾಣದ ನೀರನ್ನು ಹರಿಬಿಡುವ ಅನಿವಾರ್ಯತೆಯಿತ್ತು. ಆ.18 ರಂದು ಜಲಾಶಯಕ್ಕೆ ಸ್ಟಾಪಲಾಗ್ ಗೇಟ್ (Stoplog Gate) ಅಳವಡಿಕೆ ಮಾಡಲಾಗಿತ್ತು. ಗೇಟ್ ಅಳವಡಿಸಿದ ನಂತರ ಮತ್ತೆ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದೆ.ಇದನ್ನೂ ಓದಿ: ಪವಿತ್ರಾ ಗೌಡ ಮನೆಯಲ್ಲಿ ಸೊರಗಿ ಹೋಗಿದ್ದ ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್