– ಮೂರೇ ದಿನಗಳಲ್ಲಿ 4 ಟಿಎಂಸಿ ನೀರು ಸಂಗ್ರಹ
ಬಳ್ಳಾರಿ: ಮಲೆನಾಡಿನಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದ ಒಳಹರಿವಿನ (Water Inflow) ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದ್ದು, ಮೂರೇ ದಿನಗಳ ಅಂತರದಲ್ಲಿ ಜಲಾಶಯಕ್ಕೆ 4ಕ್ಕೂ ಅಧಿಕ ಟಿಎಂಸಿ ನೀರು ಸಂಗ್ರಹವಾಗಿದೆ.
ಇದರಿಂದ ಬರಡಾಗಿದ್ದ ತುಂಗಭದ್ರಾ ಜಲಾಶಯಕ್ಕೆ (Tungabhadra Reservoir) ಮರುಜೀವ ಬಂದಂತಾಗಿದೆ. ಗುರುವಾರ (ಜು.4) 10.082 ಟಿಎಂಸಿ ನಷ್ಟಿದ್ದ ಜಲಾಶಯದ ನೀರಿನ ಮಟ್ಟ ಶುಕ್ರವಾರ (ಜು.5) 11.714 ಟಿಎಂಸಿಗೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಟಿಬಿ ಡ್ಯಾಂಗೆ 1.5 ಟಿಎಂಸಿ (TMC) ನೀರು ಹರಿದುಬಂದಿದೆ. ಇದನ್ನೂ ಓದಿ: ವಿಶ್ವನಾಥ್, ಪುತ್ರ ನನ್ನ ಮನೆಗೆ ಸೈಟ್ ಕೇಳೋಕೆ ಬಂದಿದ್ದ ಫೋಟೋ ಇದೆ: ಬೈರತಿ ಸುರೇಶ್ ಬಾಂಬ್!
Advertisement
Advertisement
ಸದ್ಯ ಜಲಾಶಯಕ್ಕೆ 19,200ಕ್ಕೂ ಅಧಿಕ ಕ್ಯೂಸೆಕ್ ನೀರು ಒಳಹರಿವು ಇದ್ದು, ಕಳೆದ ಒಂದು ವಾರದಿಂದ ಸರಾಸರಿ ಒಳಹರಿವಿನ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ. 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ 11.714 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡಿದ್ರೆ 500ರೂ. ದಂಡ- ಬಿಬಿಎಂಪಿ ಆಯುಕ್ತ ಎಚ್ಚರಿಕೆ
Advertisement
Advertisement
100 ಅಡಿ ಭರ್ತಿಯಾದ ಕೆಆರ್‌ಎಸ್ ಡ್ಯಾಂ:
ಮತ್ತೊಂದೆಡೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಬೀಳುತ್ತಿರುವ ಹಿನ್ನೆಲೆ ಮಂಡ್ಯ ಜನರ ಜೀವನಾಡಿ ಕೆಆರ್‌ಎಸ್ ಡ್ಯಾಂ (KRS Dam) 100 ಅಡಿ ಭರ್ತಿಯಾಗಿದೆ. ಎರಡು ವಾರದಿಂದ ಪ್ರತಿದಿನ ಸರಾಸರಿ 10 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿದೆ. ಇದರ ಬೆನ್ನಲ್ಲೇ ಇದೀಗ 100 ಅಡಿಗೆ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿದೆ. ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ – ಎಲ್ಲೆಲ್ಲಿ ಏನಾಗಿದೆ?