ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಮಾರ್ಷಲ್ಸ್ ಮತ್ತೆ ಅಖಾಡಕ್ಕಿಳಿದಿದ್ದಾರೆ.
Advertisement
ಇಂದು ಮೈಸೂರು ರಸ್ತೆಯಲ್ಲಿ ಎತ್ತಿನ ಗಾಡಿ ಲಾಕ್ ಮಾಡಿದ್ದಾರೆ. ಎತ್ತಿನ ಗಾಡಿಯಲ್ಲಿ ಪ್ಲಾಸ್ಟಿಕ್ ಸಾಗಾಟ ಮಾಡಲಾಗುತ್ತಿತ್ತು. ಚೆಕ್ಕಿಂಗ್ ಇರಲ್ಲ ಎನ್ನುವ ಕಾರಣಕ್ಕೆ ಎತ್ತಿನ ಗಾಡಿಯಲ್ಲಿ ನಿಷೇಧಿತ ಮೂಟೆಗಟ್ಟಲೆ ಪ್ಲಾಸ್ಟಿಕ್ ಸಾಗಾಟ ಮಾಡಲಾಗ್ತಿತ್ತು. ಆದರೆ ಇದನ್ನು ಬಿಬಿಎಂಪಿ ಅಧಿಕಾರಿಗಳು ಹಿಡಿದಿದ್ದಾರೆ. ಅಲ್ಲದೆ ದಂಡ ವಿಧಿಸಿ, ಎರಡು ಮೂಟೆ ಪ್ಲ್ಯಾಸ್ಟಿಕ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ – ಶೀಘ್ರವೇ ಕಾಂಗ್ರೆಸ್ ಸೇರಲಿದ್ದಾರೆ ಮಾಜಿ ಎಂಎಲ್‌ಸಿ
Advertisement
Advertisement
ಮಾರ್ಕೆಟ್, ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಅನೌನ್ಸ್ ಮಾಡಲಾಗುತ್ತಿದೆ. ಎರಡು ಗಂಟೆಗೊಮ್ಮೆ ಮಾರ್ಕೆಟ್ ಸ್ಥಳದಲ್ಲಿ ಮೈಕ್‍ನಲ್ಲಿ ಅನೌನ್ಸ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಕೇಸ್ 500ರ ಗಡಿ ದಾಟಿದ್ದು, ಈ ಹಿನ್ನೆಲೆಯಲ್ಲಿ ಮಾರ್ಷಲ್ ಗಳ ನಡೆ ಮಾಲ್ ಗಳ ಕಡೆ ಎನ್ನುವಂತಾಗಿದೆ. ಮಾಸ್ಕ್ ಹಾಕದೇ ಮಾಲ್ ಕಡೆ ಓಡಾಡುವವರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಲ್ಲೇಶ್ವರಂ ಮಂತ್ರಿ ಮಾಲ್ ಮುಂದೆ ಕೊರೊನಾ ಮುನ್ನಚ್ಚರಿಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾರ್ಷಲ್ಸ್ ಮಾಡುತ್ತಿದ್ದಾರೆ.