ನವದೆಹಲಿ: ಬೆಳೆ ಹಾನಿ, ಬರಗಾಲ, ಅತಿವೃಷ್ಠಿ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಗೆ (Natural Calamities) ನೀಡುವ ಪರಿಹಾರ ಧನವನ್ನು ಹೆಚ್ಚಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ (Amit Shah) ಮನವಿ ಮಾಡಿದ್ದಾರೆ.
ವಿವಿಧ ರಾಜ್ಯಗಳ ವಿಪತ್ತು ನಿರ್ವಹಣಾ ಸಚಿವರ ಜೊತೆಗೆ ಅಮಿತ್ ಶಾ ಸಭೆ ಮಂಗಳವಾರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾಗಿಯಾದ ಸಚಿವರು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಬರಗಾಲ, ಅತಿವೃಷ್ಠಿ, ಮಳೆ ಹಾನಿ, ಬೆಳೆ ಪರಿಹಾರ ಮೊತ್ತ ಕಡಿಮೆ ಇದ್ದು ಅದನ್ನು ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚೆನ್ನೈನ ಪ್ರಭಾವಿ ಮಕ್ಕಳ ಹಕ್ಕುಗಳ ಪ್ರತಿಪಾದಕಿ ಲಲಿತಾ ನಟರಾಜನ್ಗೆ ಇಕ್ಬಾಲ್ ಮಸಿ ಪ್ರಶಸ್ತಿ
Advertisement
ಸಭೆ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಮೊದಲನೇಯದಾಗಿ ಮಳೆ ಆಶ್ರಿತ ಪ್ರತಿ ಹೆಕ್ಟೇರ್ ಭೂಮಿಗೆ 8,500 ರೂ. ಬೆಳೆ ಹಾನಿ ನೀಡಲಾಗುತ್ತಿದೆ. ಅದನ್ನು 20,000 ರೂ. ಗೆ ಹೆಚ್ಚಿಸಬೇಕು. ನೀರಾವರಿ ಭೂಮಿಗೆ 17,000 ರೂ. ನೀಡಲಾಗುತ್ತಿದೆ. ಇದನ್ನು 35,000 ರೂ. ಗೆ ಹೆಚ್ಚಿಸಬೇಕು. ತೋಟಗಾರಿಕೆ ಬೆಳೆ ಹಾನಿಗೆ 22,000 ರೂ. ನಿಂದ 49,000 ರೂ. ಹೆಚ್ಚಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಇದು ಬಹಳಷ್ಟು ವರ್ಷಗಳಿಂದ ಇರುವ ಸಾರ್ವಜನಿಕರ ಒತ್ತಾಯವಾಗಿದೆ. ಈಗ ರಾಜ್ಯ ಸರ್ಕಾರ ಕೈಯಿಂದ ಹಣ ಹಾಕಿ ಹೆಚ್ಚಿನ ಪರಿಹಾರ ನೀಡಲಾಗುತ್ತಿದೆ. ಇದು ರಾಜ್ಯ ಸರ್ಕಾರಗಳಿಗೆ ಹೊರೆಯಾಗುತ್ತಿದೆ. ಕರ್ನಾಟಕದ ಎಸ್ಡಿಆರ್ಎಫ್ಗೆ ಈಗಾಗಲೇ ಅನುದಾನ ಕಡಿಮೆ ಬರುತ್ತಿದೆ. ಹೀಗಾಗಿ ಕೇಂದ್ರದಿಂದ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕು ಆಗ್ರಹಿಸಿದ್ದೇನೆ ಎಂದಿದ್ದಾರೆ.
Advertisement
Advertisement
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಪಕೃತಿ ವಿಕೋಪ ಮಾರ್ಗಸೂಚಿಯಲ್ಲಿ ನಿಯಮ ಬದಲಾಯಿಸಿದೆ. ಸರ್ಕಾರ ನೀಡುವ ಪರಿಹಾರ ಮೊತ್ತದಲ್ಲಿ ವಿಮಾ ಕಂಪನಿಗಳು ವಿಮಾ ಮೊತ್ತವನ್ನು ಕಡಿತಗೊಳಿಸಿ ನೀಡುವ ನಿಯಮವನ್ನು ತೆಗೆದು ಹಾಕಬೇಕು. ಇದರಿಂದ ರೈತರು ಮತ್ತು ಸರ್ಕಾರಕ್ಕೆ ನಷ್ಟವಾಗುತ್ತಿದೆ. ವಿಮಾ ಕಂಪನಿಗಳಿಗೆ ದೊಡ್ಡ ಲಾಭವಾಗುತ್ತಿದೆ ಇದನ್ನು ಬದಲಾಯಿಸಬೇಕು ಎಂದು ಹೇಳಿದ್ದಾರೆ.
ಸಿಡಿಲು ಮಳೆ ಜಾಸ್ತಿಯಾಗುತ್ತಿರುವ ಹಿನ್ನೆಲೆ ಅದನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚಬೇಕಿದೆ. ಅದಕ್ಕಾಗಿ ಡಾಪ್ಲರ್ ರಾಡಾರ್ ಅಳವಡಿಸಬೇಕು. ರಾಡಾರ್ ಅಳವಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್- ಇಂದೂ ಸರ್ಕಾರಿ ಬಸ್ಗಳು ಫುಲ್ ರಶ್