ಬೆಂಗಳೂರು: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಕಾಂಗ್ರೆಸ್‍ನ ಗ್ಯಾರಂಟಿ (Congress Guarantee) ಗಳಲ್ಲಿ ಒಂದಾದ ಶಕ್ತಿ ಯೋಜನೆ (Shakthi Yojana) ಗೆ ಚಾಲನೆ ಸಿಕ್ಕಿ ಇಂದಿಗೆ ಮೂರು ದಿನ. ಮಹಿಳಾ ಪ್ರಯಾಣಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದ್ದು, ಬಡವರಿಗೆ ಅನುಕೂಲ ಆಗ್ತಿರೋದಕ್ಕೆ ಕೊಂಡಾಡ್ತಿದ್ದಾರೆ.
ಬೆಂಗಳೂರಿನಲ್ಲಂತೂ ಬಿಎಂಟಿಸಿ (BMTC) ಬಸ್‍ಗಳು ಫುಲ್ ರಶ್ ಆಗುತ್ತಿದ್ದರೆ, ಕೆಎಸ್‍ಆರ್ ಟಿಸಿ (KSRTC) ಬಸ್‍ಗಳಲ್ಲಿ ಸಾಧಾರಣ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸ್ತಿದ್ದಾರೆ. ಸೋಮವಾರ ಒಂದೇ ದಿನ ರಾಜ್ಯಾದ್ಯಂತ 41 ಲಕ್ಷದ 34 ಸಾವಿರದ 726 ಮಹಿಳೆಯರು ಸಂಚಾರ ಮಾಡಿದ್ದಾರೆ. ಇದರ ಮೌಲ್ಯ ಒಟ್ಟು 8 ಕೋಟಿ 83 ಲಕ್ಷ 53 ಸಾವಿರದ 434 ರೂಪಾಯಿ, ಮೊನ್ನೆ 5 ಲಕ್ಷದ 71 ಸಾವಿರ 23 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ರು. ಇದರ ಮೌಲ್ಯ 1 ಕೋಟಿ 40 ಲಕ್ಷದ 22 ಸಾವಿರದ 878 ರೂಪಾಯಿ. ಕಳೆದೆರಡು ದಿನಗಳಲ್ಲಿ ಅರ್ಧ ಕೋಟಿ ಸನಿಹದಷ್ಟು ನಾರಿಯರು ಪ್ರಯಾಣ ಮಾಡಿದ್ದಾರೆ.
Advertisement
Advertisement
ಯಾವ್ಯಾವ ಬಸ್‍ನಲ್ಲಿ ಎಷ್ಟು ಮಹಿಳೆಯರ ಸಂಚಾರ..?
ಕೆಎಸ್‍ಆರ್ ಟಿಸಿ- 11,40,057
ಬಿಎಂಟಿಸಿ- 17,57,887
ವಾಯುವ್ಯ ಸಾರಿಗೆ- 8,31,840
ಕಲ್ಯಾಣ ಕರ್ನಾಟಕ ಸಾರಿಗೆ-4,04,942
ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ-41,34,726
Advertisement
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Ticket For Women) ಕ್ಕೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಓಲಾ, ಊಬರ್ ಟ್ಯಾಕ್ಸಿಗೂ ಹೊಡೆತ ಬಿದ್ದಿದೆ. ಕಳೆದ ಮೂರು ದಿನಗಳಿಂದ ಬುಕ್ಕಿಂಗ್ ಸಂಖ್ಯೆ ಕಡಿಮೆಯಾಗಿದೆ. ಎರಡು ಗಂಟೆಗೊಮ್ಮೆ ಒಂದು ಆರ್ಡರ್ ಸಿಗ್ತಿದೆ ಅಂತ ಟ್ಯಾಕ್ಸಿ ಚಾಲಕರು ಕಿಡಿ ಕಾರುತ್ತಿದ್ದಾರೆ. ಇನ್ನೂ ಹೆಣ್ಮಕ್ಕಳು ಮೆಟ್ರೋ ಪ್ರಯಾಣ ಬಿಟ್ಟು, ಬಿಂಎಂಟಿಸಿ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗ್ತಿದೆ. ಇದನ್ನೂ ಓದಿ: ಸೋಮವಾರ 41.34 ಲಕ್ಷ ಮಹಿಳೆಯರಿಂದ ಪ್ರಯಾಣ – ಸರ್ಕಾರ ಪಾವತಿಸಬೇಕು 8.83 ಕೋಟಿ ರೂ.
Advertisement
ಕೆಲ ಬಿಎಂಟಿಸಿ ಬಸ್‍ಗಳಲ್ಲಿ ಅಂತರ್ ರಾಜ್ಯ ಮಹಿಳಾ ಪ್ರಯಾಣಿಕರು ತಮ್ಮ ರಾಜ್ಯದ ಆಧಾರ್ ಕಾರ್ಡ್‍ಗಳನ್ನ ಕನ್ನಡ ಅಕ್ಷರಗಳಲ್ಲಿ ಪ್ರಿಂಟ್ ಮಾಡಿಸಿ, ನಕಲಿ ಆಧಾರ್ ತೋರಿಸಿ ಸಂಚಾರ ಮಾಡ್ತಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಇಬ್ಬರು ಮಹಿಳಾ ಪ್ರಯಾಣಿಕರು ಸುಳ್ಳು ದಾಖಲೆ ನೀಡಿ ಪ್ರಯಾಣಿಸ್ತಿರುವಾಗ ತಗ್ಲಾಕ್ಕೊಂಡಿದ್ದು, ಕಂಡೆಕ್ಟರ್‍ಗಳು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಅದೇನೆ ಆಗ್ಲಿ, ಯೋಜನೆಯ ಆರಂಭದ ದಿನಗಳಲ್ಲೇ ಭರ್ಜರಿ ರೆಸ್ಪಾನ್ಸ್ ಸಿಗ್ತಿರೋದು ಖುಷಿಯ ವಿಚಾರ.