ಬೆಳಗಾವಿ: ರಾಜ್ಯದಲ್ಲಿನ ಮುಸ್ಲಿಂ (Muslims) ಅಲ್ಪಸಂಖ್ಯಾತರಿಗೂ ಮೀಸಲಾತಿ (Reservation) ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಅಂಜುಮನ್-ಎ-ಇಸ್ಲಾಂ ಸಂಘಟನೆ (Muslim Organization) ಜಿಲ್ಲಾಡಳಿತದ ಮೂಲಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಇಲ್ಲಿನ ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸಿದ ಸಂಘಟನೆ ಪ್ರಮುಖರು, ರಾಜ್ಯದಲ್ಲಿ ಮುಸ್ಲಿಂ (Muslims) ಅಲ್ಪಸಂಖ್ಯಾತರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಜನಸಂಖ್ಯೆಗೆ (Population) ಅನುಗುಣವಾಗಿ ನೋಡಿದರೂ ಶೈಕ್ಷಣಿಕ ಸಂಸ್ಥೆಗಳಲ್ಲಾಗಲಿ, ಸರ್ಕಾರಿ ಉದ್ಯೋಗ ಕ್ಷೇತ್ರಗಳಲ್ಲಾಗಲಿ ಸಮರ್ಥವಾದ ಪ್ರಾತಿನಿಧ್ಯ ಹೊಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ಲಂಚ ಆರೋಪ – ಬೊಮ್ಮಾಯಿ ರಾಜೀನಾಮೆಗೆ ಸುರ್ಜೇವಾಲಾ ಆಗ್ರಹ
Advertisement
Advertisement
2006ರಲ್ಲಿ ಸಾಚಾರ ಸಮಿತಿಯು ಭಾರತೀಯ ಮುಸ್ಲಿಮರು (Indian Muslims) ಎದುರಿಸುತ್ತಿರುವ ಪರಿಸ್ಥಿತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತಲೂ ಹೆಚ್ಚಿನದ್ದಾಗಿದೆ. ಇಂದಿಗೂ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ನಾಗರಿಕರ ವರ್ಗಗಳ ಏಳಿಗೆಗಾಗಿ, ರಾಜ್ಯಾಧೀನ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿಲ್ಲದೇ ಇರುವುದರಿಂದ ಹಾಗೂ ಸಂವಿಧಾನದ (Constitution Of India) 15 (4) ನೇ ಮತ್ತು 16 (4)ನೇ ವಿಧಿಯು ಹಿಂದುಳಿದ ಯಾವುದೇ ನಾಗರಿಕರ ವರ್ಗಗಳ ಪರವಾಗಿ ನೇಮಕಾತಿ ಹುದ್ದೆಗಳಲ್ಲಿ ಮೀಸಲಾತಿಗಾಗಿ ಉಪಬಂಧ ಕಲ್ಪಿಸಲು ರಾಜ್ಯಕ್ಕೆ ಅಧಿಕಾರ ನೀಡಿರುವುದರಿಂದ ಶೀಘ್ರವೇ ಒಂದು ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement
Advertisement
ಸಮಿತಿಯ ಮೂಲಕ ಶೈಕ್ಷಣಿಕ ಸ್ಥಿತಿಗತಿ ಕುರಿತು ವರದಿ ಪಡೆದು ರಾಜ್ಯದ ಮುಸ್ಲಿಂ ಅಲ್ಪಸಂಖ್ಯಾತರ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ ಶೇ.8ಕ್ಕೆ ಹೆಚ್ಚಿಸಿ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಕನ್ನಡದಲ್ಲಿಯೇ ಕೇಜ್ರಿವಾಲ್ ಟ್ವೀಟ್
ಪ್ರತಿಭಟನೆ ವೇಳೆ ಜೆ.ಎಸ್.ಹಡಗಲಿ, ಎ.ಬಿ.ಅತ್ತಾರ, ಹೆಚ್.ಎಂ.ಕೊಪ್ಪದ, ಜೆ.ಎನ್.ಗಲಗಲಿ, ವಾಹಿದ ಅತ್ತಾರ ಮೊದಲಾದವರು ಇದ್ದರು.