– ಸಂಸದ ಮುನಿಸ್ವಾಮಿಗೆ ಹಿನ್ನಡೆ
ಕೋಲಾರ: ಲೋಕಸಭಾ ಚುನಾವಣೆಗೆ (General Elections 2024) ಕೋಲಾರ (Kolar) ಕ್ಷೇತ್ರದಲ್ಲಿ ಬಿಜೆಪಿ (BJP) ಟಿಕೆಟ್ ಆಕಾಂಕ್ಷಿಗಳ (LokSabha Candidates) ಸಂಖ್ಯೆ ಹೆಚ್ಚಾಗಿದ್ದು ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ಇನ್ನೂ ಮೈತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯ ನಡುವೆ, ಬಿಜೆಪಿಯಲ್ಲೇ ಹೆಚ್ಚಿದ ಅಭ್ಯರ್ಥಿಗಳ ಸಂಖ್ಯೆಯಿಂದ ಮತ್ತಷ್ಟು ಗೊಂದಲ ಉಂಟಾಗಿದೆ.
Advertisement
Advertisement
ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ನೇತೃತ್ವದಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹ ನಡೆದಿದೆ. ಮೈತ್ರಿಯಲ್ಲಿ ಬಿಜೆಪಿಗೆ ಉಳಿಸಿಕೊಳ್ಳಬೇಕು ಎಂಬ ವಾದ ಒಂದೆಡೆ ವ್ಯಕ್ತವಾಗಿದೆ. ಇದರೊಂದಿಗೆ ಹಾಲಿ ಸಂಸದ ಎಸ್.ಮುನಿಸ್ವಾಮಿ ಪರ ಅಲೆ ಮಂಕಾಗಿದ್ದು, ಬಂಗಾರಪೇಟೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ವಿ.ಮಹೇಶ್ ಹೆಸರು ಮುನ್ನಲೆಗೆ ಬಂದಿದೆ. ಇದು ಬಿಜೆಪಿ ಪಕ್ಷದಲ್ಲಿ ಹೊಸ ಸಂಚಲನವನ್ನು ಹುಟ್ಟು ಹಾಕಿದೆ. ಇದನ್ನೂ ಓದಿ: ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್ ಖರ್ಗೆ
Advertisement
ಬಿಜೆಪಿಯಲ್ಲಿ ಎಸ್.ಮುನಿಸ್ವಾಮಿ, ಬಿ.ವಿ.ಮಹೇಶ್, ಎಸ್.ಬಿ.ಮುನಿವೆಂಕಟಪ್ಪ, ಡಾ.ಶಿವಣ್ಣ ಲೋಕಸಭಾ ಅಖಾಡದಲ್ಲಿದ್ದು, ಈ ಮೂವರ ಹೆಸರುಗಳು ಪ್ರಸ್ತಾಪವಾಗುತ್ತಿರುವುದು ಹಾಲಿ ಸಂಸದ ಮುನಿಸ್ವಾಮಿ ಅವರಿಗೆ ಆಗಿರುವ ಮೊದಲ ಹಿನ್ನೆಡೆ ಎಂದೇ ಪರಿಗಣಿಸಲಾಗಿದೆ. ಇನ್ನೂ ವೀಕ್ಷಕರ ಅಭಿಪ್ರಾಯ ಸಂಗ್ರಹಣೆಯ ವಿಚಾರದಲ್ಲಿ ಮೈತ್ರಿ ವಿಚಾರವೂ ಪ್ರಸ್ತಾಪಕ್ಕೆ ಬಂದಿದ್ದು ಬಹುತೇಕ ಬಿಜೆಪಿಗೆ ಕೋಲಾರ ಕ್ಷೇತ್ರವನ್ನ ಬಿಟ್ಟು ಕೊಡುವಂತೆ ಅಭಿಪ್ರಾಯ ಸಂಗ್ರಹವಾಗಿದೆ.
Advertisement
ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಾಲೂರು ಹಾಗೂ ಬಂಗಾರಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಅರಳಿದೆ. ಜಿ.ಪಂ ಸದಸ್ಯರಾಗಿ ಕಾಂಗ್ರೆಸ್ ಶಾಸಕರ ವಿರೋಧದ ನಡುವೆಯೂ ಬಂಗಾರಪೇಟೆ ಎಪಿಎಂಸಿ ಅಧ್ಯಕ್ಷರಾಗಿ, ಜಿಪಂ ಸದಸ್ಯನಾಗಿ, ಪಕ್ಷದಲ್ಲಿ ರಾಜ್ಯ ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷನಾಗಿ, ಸಧ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ, ಮಹೇಶ್ ಅವರಿಗೆ ಹಿರಿಯ ಕಿರಿಯ ಮುಖಂಡರ, ಮಾಜಿ ಶಾಸಕರ ಅಚ್ಚು ಮೆಚ್ಚಿನ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದು, ಬಿಜೆಪಿ ವರಿಷ್ಠರೂ ಮಹೇಶ್ ಪರವಾಗಿರುವುದು ಅವರಿಗೆ ವರವಾಗುತ್ತಿದೆ.
ನರೇಂದ್ರ ಮೋದಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ನಾಯಕತ್ವದಲ್ಲಿ ಸಂಸದರಾಗಿ ಕೆಲಸ ಮಾಡುವ ಆಸೆ ನನಗೂ ಇದೆ, ಪಕ್ಷ ತೀರ್ಮಾನ ತೆಗೆದುಕೊಂಡರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲಾ ರೀತಿಯಿಂದಲೂ ತಯಾರಿದ್ದೇನೆ ಎಂದು ಮಹೇಶ್ ಅವರು ಹೇಳಿದ್ದಾರೆ. ಇದನ್ನೂ ಓದಿ: ಕೈ ನಾಯಕರ ಜೊತೆ ಕಾಣಿಸಿಕೊಂಡ ಸಿ.ಪಿ ಯೋಗೇಶ್ವರ್ ಪುತ್ರಿ!