– 30 ಲಕ್ಷ ಹಣದ ಮೂಲ ಕೆದಕಿದ ಐಟಿ; ದ್ವಂತ ಹೇಳಿಕೆ ನೀಡಿದ ಪ್ರದೋಷ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) 2ನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ಗೆ (Darshan) ಒಂದರ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. 82 ಲಕ್ಷ ರೂ. ಹಣದ ಮೂಲ ಕುರಿತು ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ ಅತ್ಯಾಪ್ತ ಪ್ರದೋಷ್ ನೀಡಿರುವ ಹೇಳಿಕೆ ಮುಳುವಾದಂತೆ ಕಾಣ್ತಿದೆ.
ತನ್ನ ಮನೆಯಲ್ಲಿ ಸಿಕ್ಕ 30 ಲಕ್ಷ ರೂ. ಹಣಕ್ಕೆ ಪಕ್ಕಾ ಲೆಕ್ಕ ಕೊಡದ ಪ್ರದೋಷ್ (Pradosh) ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆಮಾತನಾಡಿದ್ದಾರೆ. ಮನೆಯಲ್ಲಿ ಸಿಕ್ಕ 30 ಲಕ್ಷ ಹಣ ನನ್ನದೂ ಅಲ್ಲ, ನನ್ನ ಕುಟುಂಬಕ್ಕೂ ಸೇರಿದ್ದಲ್ಲ ಅಂತ ಹೇಳಿದ್ದಾರೆ. ಹಾಗಿದ್ದ ಮೇಲೆ ಆ ಹಣ ಎಲ್ಲಿಂದ ಬಂತು? ಹಣದ ಮೂಲ ಯಾವುದು ಅನ್ನೋದನ್ನ ಬಹಿರಂಗಪಡಿಸಲು ಹಿಂದೇಟು ಹಾಕಿದ್ದಾರೆ. ಇದರಿಂದ ಕೊಲೆ ಆರೋಪಿ ದರ್ಶನ್‌ನ ಮತ್ತೆ ವಿಚಾರಣೆಗೆ ಒಳಪಡಿಸಲು ಆದಾಯ ತೆರಿಗೆ ಇಲಾಖೆ ತಯಾರಿ ನಡೆಸಿದೆ. ಇದನ್ನೂ ಓದಿ: ʻದಾಸʼನಿಗೆ 82 ಲಕ್ಷ ಹಣದ ತಲೆಬಿಸಿ – ಕೃಷಿ, ಪ್ರಾಣಿ ಮಾರಾಟದಿಂದಲೇ ಹಣ ಸಿಕ್ಕಿದ್ದು ಎಂದ ದರ್ಶನ್
ಐಟಿ ಅಧಿಕಾರಿಗಳ ಮುಂದೆ ಪ್ರದೋಷ್ ಹೇಳಿದ್ದೇನು?
ಪ್ರಶ್ನೆ: 30 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾದ ಹಣದ ಮೂಲವನ್ನು ದಯವಿಟ್ಟು ಒದಗಿಸಿ.
ಉತ್ತರ: ಸರ್, ಮೇಲೆ ತಿಳಿಸಿದ 30,00,000/- ರೂ. ನಗದು ವಶಪಡಿಸಿಕೊಳ್ಳಲಾದ ಹಣದ ಮೂಲ ನನಗೆ ತಿಳಿದಿಲ್ಲ. ಏಕೆಂದರೆ ಅದು ನನಗೆ ಅಥವಾ ನನ್ನ ಕುಟುಂಬ ಸದಸ್ಯರಿಗೆ ಸೇರಿಲ್ಲ.
ಪ್ರಶ್ನೆ: 2024ರ ಜೂನ್ 12ರಂದು ನಿಮ್ಮ ನಿವಾಸದಲ್ಲಿ ಪತ್ತೆಯಾದ ಮತ್ತು ವಶಪಡಿಸಿಕೊಂಡ ಹಣದ ಮೂಲದ ಬಗ್ಗೆ ಸರಿಯಾದ ವಿವರಣೆ ಇಲ್ಲದಿದ್ದರೆ, 30,00,000/- ರೂ.ಗಳ ಸಂಪೂರ್ಣ ನಗದನ್ನು ವಶಪಡಿಸಿಕೊಳ್ಳಲಾಗುತ್ತದೆ. ಇದರ ಬಗ್ಗೆ ನಿಮಗೆ ಯಾವುದೇ ಆಕ್ಷೇಪಣೆ/ಕಾಮೆಂಟ್‌ಗಳಿವೆಯೇ?
ಉತ್ತರ: ಸರ್, 2024ರ ಜೂನ್ 12ರಂದು ನನ್ನ ನಿವಾಸದಿಂದ ಪತ್ತೆಯಾದ ಮತ್ತು ವಶಪಡಿಸಿಕೊಂಡ ಹಣದ ಮೂಲ, 30,00,000/- ರೂ.ಗಳ ನಗದು ಇನ್ನೂ ವಿವರಿಸಲಾಗಿಲ್ಲ ಅನ್ನೋದನ್ನ ಒಪ್ಪುತ್ತೇನೆ. ಅದನ್ನು ವಶಪಡಿಸಿಕೊಳ್ಳಬಹುದು ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಬಹುದು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ದರ್ಶನ್ ಐಟಿ ಮುಂದೆ ಹೇಳಿದ್ದೇನು?
1. ನೀವು ಕಳೆದ ಆರು ವರ್ಷಗಳಲ್ಲಿ ಯಾರಿಗಾದರೂ ಕೈ ಸಾಲ ಕೊಟ್ಟಿದ್ರಾ? ಹಾಗೇನಾದ್ರೂ ಕೈ ಸಾಲ ನೀಡಿದ್ರೆ ಯಾವ ದಿನಾಂಕ ಸಮಯದ ಬಗ್ಗೆ ಸ್ಪಷ್ಟನೆ ನೀಡಬಹುದು..?
ಉತ್ತರ : ಹೌದು ನಾನು 40 ಲಕ್ಷ ಕೈ ಸಾಲವನ್ನು ನನ್ನ ಸ್ನೇಹಿತರಾದ ರಾಮ್ ಮೋಹನ್ ರಾಜ್‌ಗೆ ಫೆಬ್ರವರಿ 2024ರಲ್ಲಿ ನೀಡಿದ್ದೇನೆ. ಮೋಹನ್ ನನಗೆ 2024ರ ಮೇ ತಿಂಗಳಿನಲ್ಲಿ ಹಿಂದಿರುಗಿಸಿದ್ದಾರೆ. ಮೋಹನ್ ಮೂಲತಃ ಬೆಂಗಳೂರಿನವರೇ ತುಂಬಾ ಹಳೆಯ ಸ್ನೇಹಿತರು. ಅದನ್ನ ಬಿಟ್ಟರೆ 6 ವರ್ಷದಿಂದ ನಾನು ಯಾರಿಗೂ ಸಾಲ ನೀಡಿಲ್ಲ, ಪಡೆದಿಲ್ಲ
2. ಫೆಬ್ರವರಿ 2024ರಲ್ಲಿ ನೀವು ಮೋಹನ್ ರಾಜ್‌ಗೆ 40 ಲಕ್ಷ ಹಣ ನೀಡಿದ್ದೀರಿ.. ಅದಕ್ಕೆ ಸಂಬಂಧಿಸಿದಂತೆ ಹಣದ ಮೂಲ ಸ್ಪಷ್ಟ ಪಡಿಸಬಹುದಾ?
ಉತ್ತರ: ಮೋಹನ್ ರಾಜ್‌ಗೆ ನೀಡಿದ 40 ಲಕ್ಷ ಹಣದಲ್ಲಿ 25 ಲಕ್ಷ ಹಣವನ್ನು ನಾನು ಕೃಷಿಯಿಂದ ಬಂದ ಲಾಭದಲ್ಲಿ ಸಂಪಾದಿಸಿದ್ದೇನೆ. ಇನ್ನುಳಿದ 15 ಲಕ್ಷಕ್ಕೆ ಪ್ರಾಣಿಗಳ ಮಾರಾಟ ಮಾಡಿದ್ದೇನೆ. ಇನ್ನುಳಿದಂತೆ ನನ್ನ ಹುಟ್ಟುಹಬ್ಬದ ದಿನ ನನ್ನ ಅಭಿಮಾನಿಗಳು ನೀಡಿದ ಹಣ ಅದರಲ್ಲಿತ್ತು.
3. ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿ 19-06-2024ರಂದು ನಿಮ್ಮ ಮನೆಯಲ್ಲಿ 37 ಲಕ್ಷದ 50 ಸಾವಿರ ರೂಪಾಯಿ ಸೀಜ್ ಮಾಡಿದ್ದಾರೆ, ಅದು ಕೂಡ ಕೃಷಿ ಲಾಭದಿಂದಲೇ ಬಂದಿದ್ದಾ?
ಉತ್ತರ: ಹೌದು, ನಾನು ಈಗಾಗಲೇ ಹೇಳಿದ ಹಾಗೇ ನನಗೆ ಬಂದಿರೋ ಹಣವೆಲ್ಲಾ ಕೃಷಿ, ಪ್ರಾಣಿಗಳ ಮಾರಾಟ ಮತ್ತು ಅಭಿಮಾನಿಗಳು ನೀಡಿದ ಉಡುಗೊರೆ ಆಗಿದೆ ಅದನ್ನು ಬಿಟ್ಟು ಬೇರೆ ಏನು ಇಲ್ಲ.
4. ನಿಮ್ಮ ಮನಯಲ್ಲಿ ಸಿಕ್ಕ 37 ಲಕ್ಷ ಮತ್ತು ನಿಮ್ಮ ಪತ್ನಿಯ ಬಳಿ ಸಿಕ್ಕ 3 ಲಕ್ಷ ಹಣಕ್ಕೆ ಯಾವುದಾದರೂ ಮೂಲ ದಾಖಲೆಗಳು ಇದ್ಯಾ?
ಉತ್ತರ: ಇಲ್ಲ ನನ್ನ ಬಳಿ ಸಿಕ್ಕ ಹಣಕ್ಕೆ ಮತ್ತು ನನ್ನ ಪತ್ನಿಯ ಬಳಿ ಸಿಕ್ಕ ಹಣಕ್ಕೆ ಸಧ್ಯಕ್ಕೆ ಯಾವುದೇ ದಾಖಲೆಗಳು ಕೂಡ ಇಲ್ಲ. ನಾನು 2024-2025 ರಲ್ಲಿ ಸಲ್ಲಿಕೆ ಮಾಡುವ ಆದಾಯ ತೆರಿಗೆ ಮಾಹಿತಿಯಲ್ಲಿ ಉಲ್ಲೇಖ ಮಾಡುತ್ತೇನೆ. ಇದನ್ನೂ ಓದಿ: ನಿರ್ದೇಶಕ ನಂದಕಿಶೋರ್‌ಗೆ ಸಾಲ ನೀಡಿದ ಕೇಸ್‌ಗೆ ಟ್ವಿಸ್ಟ್ – ಉದ್ಯಮಿ ಕಿಡ್ನ್ಯಾಪ್ ಹಿಂದೆ ರಘು ಕೈವಾಡ ಸಾಬೀತು


