ಬೆಂಗಳೂರು/ನವದೆಹಲಿ: ಕಾಂಗ್ರೆಸ್ ನಾಯಕರ ಮಾಲೀಕತ್ವದ ಡಿಸೈನ್ ಬಾಕ್ಸ್ ಪಿಆರ್ ಕಂಪನಿ ಮೇಲೆ ದೆಹಲಿ, ಬೆಂಗಳೂರಿನಲ್ಲಿ ಐಟಿ ರೇಡ್ ನಡೆದಿದೆ.
ದಾಳಿ ವೇಳೆ ಹಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದು, ಬ್ಯಾಂಕ್ ಖಾತೆಗಳನ್ನು ಜಾಲಾಡಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಕಾರ್ತಿ ಚಿದಂಬರಂ ಸೇರಿ ಹಲವು ಕಾಂಗ್ರೆಸ್ ನಾಯಕರ ಕಂಪನಿಯನ್ನು ನಿರ್ವಹಿಸುತ್ತಿತ್ತು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ದೇಶದ ವಿವಿಧ ಪ್ರಮುಖ ನಾಯಕರ ಪರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕೇವಲ ಒಂದೂವರೆ ತಿಂಗಳ ಹಿಂದೆ ಡಿಸೈನ್ ಬಾಕ್ಸ್ ಕಂಪನಿ ಜೊತೆಗಿನ ಒಪ್ಪಂದವನ್ನು ಡಿಕೆ ಶಿವಕುಮಾರ್ ರದ್ದು ಮಾಡಿದ್ದರು. ಇದನ್ನೂ ಓದಿ: ಬಿಎಸ್‍ವೈ ಆಪ್ತರ ಬಳಿ 765 ಕೋಟಿ ಅಕ್ರಮ ಆಸ್ತಿ
ಡಿಸೈನ್ ಬಾಕ್ಸ್ ಮೇಲಿನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಆ ಸಂಸ್ಥೆ ನನ್ನ ಸೋಷಿಯಲ್ ಮೀಡಿಯಾ ನೋಡಿಕೊಳ್ತಿರಲಿಲ್ಲ. ಅವರು ನನಗೆ ಸಹಾಯ ಮಾಡುತ್ತಿದ್ದರು. ನಿನ್ನೆ ನನ್ನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸಿದ್ದರು. ಕಂಪನಿ ವೃತ್ತಿಪರವಾಗಿದ್ದು ದಾಳಿಗೆ ಸಂಬಂಧಿಸಿದಂತೆ ಉತ್ತರ ಕೊಟ್ಟುಕೊಳ್ತಾರೆ ಎಂದು ತಿಳಿಸಿದರು.