ಬೆಂಗಳೂರು: ಎಷ್ಟೋ ದಿನದ ಮೇಲೆ ನಿದ್ರೆಯಿಂದ ಎದ್ದು ಬಿಜೆಪಿಯವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ ಪಾಪ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಕಮಲ ನಾಯಕ ಪ್ರತಿಭಟನೆಯನ್ನು ವ್ಯಂಗ್ಯ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಅವರು ಹೋರಾಟ ಮಾಡುವುದು ಬಹಳ ಖುಷಿ. ನಾನು ಯಾವುದಲ್ಲಿ ಭ್ರಷ್ಟಾಚಾರ ಮಾಡಿದ್ದೇನೆ ಎನ್ನುವುದನ್ನು ಅವರು ಹೇಳಬೇಕು. ಅವರ ಬಳಿ ಇರೋ ಬತ್ತಳಿಕೆಗಳನ್ನ ಬಿಡುಗಡೆ ಮಾಡಲಿ ಎಂದು ಸವಾಲು ಎಸೆದರು.
Advertisement
ನನ್ನ ಮೇಲೆ ಐಟಿ ರೇಡ್ ಆಗಿದೆ. ಅದಕ್ಕೆ ಕಾನೂನು ಚೌಕಟ್ಟು ಇದೆ. ಅಮಿತ್ ಶಾ, ಯಡಿಯೂರಪ್ಪ ಐಟಿ ಅಧಿಕಾರಿಯಲ್ಲ. ಬಿಜೆಪಿ ಅವರು ನನ್ನ ಭ್ರಷ್ಟಾಚಾರ ಸಾಬಿತು ಮಾಡಿದರೆ ಆಗ ರಾಜೀನಾಮೆ ಕೇಳಲು ಹಕ್ಕಿದೆ ಎಂದು ತಿಳಿಸಿದರು.
Advertisement
ರಮೇಶ್ ಜಾರಕಿಹೊಳಿ, ಗೋವಿಂದ ರಾಜು, ಸೀತಾರಾಂ, ಶಿವಶಂಕರಪ್ಪ ಮಗನ ಮನೆ ಮೇಲೆ ರೇಡ್ ಆಗಿ ಎಷ್ಟು ದಿನ ಆಯ್ತು. ಯಾಕೆ ಅವರ ವಿರುದ್ದ ಪ್ರತಿಭಟನೆ ಮಾಡಿಲ್ಲ? ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನನ್ನ ಬಳಿಯು ಅಸ್ತ್ರಗಳು ಇವೆ. ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ದಾಖಲೆಗಳು, ಮಾಹಿತಿಗಳು ಬೇಡ ಅಂದ್ರು ಜನ ತಂದು ಕೊಡುತ್ತಿದ್ದಾರೆ. ನಮ್ಮ ಮೇಲೆ ಯುದ್ಧ ಮಾಡುವವರ ವಿರುದ್ಧ ನಾನು ಯುದ್ಧ ಮಾಡಲು ರೆಡಿ ಆಗುತ್ತೇನೆ ಎಂದರು.
Advertisement
ಯಡಿಯೂರಪ್ಪ ಡಿನೋಟಿಫೈ ಮಾಡಿಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಆಸ್ತಿ ಎಲ್ಲವೂ ಕಾನೂನು ಬದ್ಧವಾಗಿದೆ. ಕಾನೂನು ಬಾಹಿರವಾಗಿ ಡಿ ನೋಟಿಫೈ ಮಾಡಿಕೊಂಡಿಲ್ಲ. ಈ ಸಂಬಂಧ ಹೈಕೋರ್ಟ್ ಸುಪ್ರೀಂಕೋರ್ಟ್‍ಗಳಲ್ಲಿ ಇದ್ದ ಕೇಸ್‍ಗಳು ಬಿದ್ದು ಹೋಗಿವೆ. ನನ್ನ ಪರವಾಗಿಯೇ ಕೇಸ್ ಆಗಿದೆ. ಅಕ್ರಮವಾಗಿ ಯಡಿಯೂರಪ್ಪ ಸಹಿ ಹಾಕಿಲ್ಲ. ನಾನು ಅಕ್ರಮವಾಗಿ ಸಹಿ ಹಾಕಿಸಿಕೊಂಡಿಲ್ಲ. ಕ್ರಮ ಬದ್ಧವಾಗಿ ಕಾನೂನಿನ ಒಳಗೆ ನಡೆದಿದೆ. ಬೇರೆ ಡಿನೋಟಿಫೈ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
Advertisement
Corruption and misgovernance are pillars of @siddaramaiah Govt. Attended a protest demanding the resignation of corrupt congress ministers. pic.twitter.com/13I2XD9hUL
— P Muralidhar Rao (@PMuralidharRao) August 18, 2017
In pictures: Vidhana Soudha Chalo at Bengaluru today. pic.twitter.com/U5jppkYPRg
— BJP Karnataka (@BJP4Karnataka) August 18, 2017
Arrested for protesting against #CorruptCongress. Voice of @BJP4Karnataka in the service of Karnataka can't be suppressed by @CMofKarnataka. pic.twitter.com/vieJSCudMr
— C T Ravi ???????? ಸಿ ಟಿ ರವಿ (@CTRavi_BJP) August 18, 2017
Huge crowds joining @BJP4Karnataka protest against #CorruptCongress is growing indication of People's anger against @CMofKarnataka. pic.twitter.com/VssGMzOrLZ
— C T Ravi ???????? ಸಿ ಟಿ ರವಿ (@CTRavi_BJP) August 18, 2017