ಚೆನ್ನೈ: ಹಾಸ್ಟೆಲ್ ವಾರ್ಡನ್, ಶಾಲಾ ಬಾಲಕಿಯೋರ್ವಳ ಕುಟುಂಬವನ್ನು ಮತಾಂತರ ಆಗುವಂತೆ ಪೀಡಿಸುತ್ತಿದ್ದ ಹಿನ್ನೆಲೆ ಬಾಲಕಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಂಜವೂರ್ನಲ್ಲಿ ವರದಿಯಾಗಿದೆ.
Advertisement
ಬಾಲಕಿ ಸಾವಿಗೆ ಶರಣಾಗುವ ಮುನ್ನ ವೀಡಿಯೋ ಮಾಡಿದ್ದು, ನನ್ನ ಕುಟುಂಬಕ್ಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ನನ್ನ ಹಾಸ್ಟೆಲ್ ವಾರ್ಡನ್ ಕಿರುಕುಳ ನೀಡುತ್ತಿದ್ದು, ಅಷ್ಟೇ ಅಲ್ಲದೆ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಹಾಗಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಬಾಲಕಿ ಹೇಳಿಕೊಂಡಿದ್ದಾಳೆ. ಈ ಘಟನೆ ಜನವರಿ 9 ರಂದು ನಡೆದಿದೆ. ವಿಷ ಸೇವಿಸಿದ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನ ಎಳೆದೊಯ್ದು ಅತ್ಯಾಚಾರ ಮಾಡಿದ್ರು
Advertisement
Advertisement
ಬಾಲಕಿ ತಿಳಿಸಿರುವಂತೆ ಹಾಸ್ಟೆಲ್ ವಾರ್ಡನ್ ಮೊದಲು ಬಾಲಕಿಯ ಪೋಷಕರಲ್ಲಿ ಆಕೆಯ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ತಿಳಿಸಿದ್ದರಂತೆ. ಬಳಿಕ ಆಕೆಯ ಕುಟುಂಬಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯ ವೀಡಿಯೋ ಹೇಳಿಕೆಯನ್ನು ಪರಿಗಣಿಸಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹಾಸ್ಟಲ್ ವಾರ್ಡನ್ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಡಾನ್ಸ್ ಮಾಡಿದ ವಧುವಿನ ಕೆನ್ನೆಗೆ ಹೊಡೆದ ವರ- ಮದುವೆ ಮುರಿದು ಬಿತ್ತು
Advertisement
Very sad day to see @tnpoliceoffl losing all its hard earned reputation by its irresponsible statements.
When there is a clear video testimony by the girl of forced conversion, the local police is hell bent on changing the course of the case of Lavanya.#JusticeforLavanya https://t.co/VdgLdldFzw
— K.Annamalai (@annamalai_k) January 20, 2022
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ವೀಡಿಯೋ ಶೇರ್ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ. ಇತ್ತ ಈ ಪ್ರಕರಣ ರಾಜಕೀಯ ತಿರುವು ಕೂಡ ಪಡೆದುಕೊಳ್ಳುತ್ತಿದೆ.