ಲಕ್ನೋ: ಮನೆಯಿಂದ ನಾಪತ್ತೆಯಾದ 13 ವರ್ಷದ ಬಾಲಕಿ, ತಲೆಯಿಂದ ಹಿಡಿದು ಮೈ ಮೇಲೆ ಗಾಯಗಳೊಂದಿಗೆ ಪತ್ತೆಯಾಗಿದ್ದಾಳೆ. ತೀವ್ರವಾಗಿ ಗಾಯಗೊಂಡ ಯುವತಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೆ, ಸಹಾಯ ಮಾಡುವುದರ ಬದಲಾಗಿ ಅನೇಕರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆಹಿಡಿಯುವುದರ ಮೂಲಕ ಅಮಾನವೀಯತೆ ಮೆರೆದಿದ್ದಾರೆ.
ಉತ್ತರ ಪ್ರದೇಶದ (Uttar Pradesh) ಕನೌಜ್‍ನಲ್ಲಿ (Kannauj) ತೀವ್ರವಾಗಿ ಗಾಯಗೊಂಡ ಬಾಲಕಿಯೊಬ್ಬಳು ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿರುತ್ತಾಳೆ. ಆದರೆ ಈ ವೇಳೆ ಅನೇಕ ವ್ಯಕ್ತಿಗಳು ಸಹಾಯ ಮಾಡದೇ ಆಕೆಯ ಸುತ್ತಾ ಮೊಬೈಲ್ ಹಿಡಿದುಕೊಂಡು ವೀಡಿಯೋ ಮಾಡಿದ್ದಾರೆ. ಇದನ್ನೂ ಓದಿ: ಪ್ರವಾಸಿಗರ ಕಣ್ಮನ ಸೆಳೆಯುತ್ತಿರೋ ಅತ್ಯಾಧುನಿಕ ರೈಲ್ವೆ ರೆಸ್ಟೋರೆಂಟ್ – ಎಲ್ಲಿದೆ ಗೊತ್ತಾ?
Advertisement
Advertisement
13 ವರ್ಷದ ಬಾಲಕಿ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದಳು. ಹಲವು ಗಂಟೆಗಳ ಬಳಿಕ ತಲೆ ಹಾಗೂ ಮೈ ಮೇಲಿನ ಗಾಯಗಳೊಂದಿಗೆ ಪತ್ತೆಯಾಗಿದ್ದಾಳೆ. ಅಲ್ಲದೇ ಆಕೆಯ ತೋಳುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೂ ಸಹಾಯ ಮಾಡದೇ ವಿವಿಧ ರೀತಿಯಲ್ಲಿ ವೀಡಿಯೋವನ್ನು ಚಿತ್ರೀಕರಿಸುವುದರಲ್ಲಿ ಬ್ಯುಸಿಯಾಗಿದ್ದರು.
Advertisement
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೀರಾ ಎಂದು ಓರ್ವ ವ್ಯಕ್ತಿ ಕೇಳುತ್ತಿದ್ದರೆ, ಮತ್ತೋರ್ವ ಪೊಲೀಸ್ ಮುಖ್ಯಸ್ಥರ ಸಂಖ್ಯೆಯನ್ನು ಕೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಿಸಿಕೊಳ್ಳಬಹುದಾಗಿದೆ. ಆದರೆ ಬಾಲಕಿಗೆ ಸಹಾಯ ಮಾಡಲು ಯಾರು ಕೂಡ ಮುಂದಾಗಲಿಲ್ಲ. ಇದನ್ನೂ ಓದಿ: ನಿಷೇಧದ ನಡುವೆಯೂ ಪಟಾಕಿ ಸದ್ದು- ಅತಿಯಾದ ವಾಯುಮಾಲಿನ್ಯದಿಂದ ಉಸಿರಾಟಕ್ಕೂ ತೊಂದರೆ
Advertisement
वीडियो कन्नौज के गुरसहायगंज से है। रविवार को पीडब्ल्यूडी के डाक बंगले में 10 साल की एक बच्ची खून से लथपथ मिली। उसके चेहरे को ईंट-पत्थर से बुरी तरह कुचल दिया गया था। मजमा मदद के बजाए उसका वीडियो बनाने लगा। बच्ची मदद मांगती रही। तमाशबीन डटे रहे। #kannauj@kannaujpolice @Uppolice pic.twitter.com/l7FD0YUgZf
— Tariq Iqbal (@tariq_iqbal) October 23, 2022
ಪೊಲೀಸರು ಬರುವವರೆಗೂ ಬಾಲಕಿ ಕಾಯುತ್ತಿದ್ದಳು. ನಂತರ ಪೊಲೀಸರು ಬಂದು ಆಕೆಯನ್ನು ಕೈಯಲ್ಲಿ ಎತ್ತುಕೊಂಡು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದಿದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೀಗ ಬಾಲಕಿಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲದ ಕಾರಣ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.