ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮೈತ್ರಿ ಮಾತುಕತೆಗೆ ಪ್ರತಿಪಕ್ಷಗಳು ಮುಂದಾಗುತ್ತಿರುವ ಬೆನ್ನಲ್ಲೇ ಉಪಚುನಾವಣೆಯಲ್ಲಿ ಸಿಹಿ ಸುದ್ದಿ ಸಿಕ್ಕಿದೆ.
ಆಡಳಿತಾರೂಢ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ಫೂಲ್ಪುರ್ ಎಸ್‍ಪಿಯ ನಾಗೇಂದ್ರ ಪ್ರತಾಪ್ ಬಿಜೆಪಿಯ ಅಭ್ಯರ್ಥಿ ವಿರುದ್ಧ 59,613 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
Advertisement
ಗೋರಖ್‍ಪುರ್ ದಲ್ಲಿ ಸಮಾಜವಾದಿ ಅಭ್ಯರ್ಥಿ 26,954 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 25ನೇ ಸುತ್ತಿನ ಮತ ಎಣಿಕೆಯ ವೇಳೆ ಎಸ್‍ಪಿಯ ಪ್ರವೀಣ್ ಕುಮಾರ್ ನಿಶಾದ್ ಅವರಿಗೆ 3,77,146 ಮತಗಳು ಬಿದ್ದರೆ, ಬಿಜೆಪಿಯ ಉಪೇಂದ್ರ ದತ್ತಾ ಶುಕ್ಲಾ ಅವರಿಗೆ 3,54,192 ಮತಗಳು ಬಿದ್ದಿವೆ.
Advertisement
ಫೂಲ್ಪುರ್ ದಲ್ಲಿ 28 ಸುತ್ತಿನ ಮತ ಎಣಿಕೆಯ ವೇಳೆ ಬಿಜೆಪಿಯ ಕೌಶಲೇಂದ್ರ ಸಿಂಗ್ ಪಟೇಲ್ ಅವರಿಗೆ 2,57,821 ಮತಗಳು ಬಿದ್ದಿದ್ದರೆ, ಎಸ್‍ಪಿಯ ನಾಗೇಂದ್ರ ಪ್ರತಾಪ್ ಸಿಂಗ್ ಅವರಿಗೆ 3,05,172 ಮತಗಳು ಬಿದ್ದಿತ್ತು.
Advertisement
ಗೋರಖ್‍ಪುರ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದ್ದು ಮಹಂತ್ ಅವೈದ್ಯದನಾತ್ ಅವರು ಪ್ರತಿನಿಧಿಸಿದ್ದರು. ಆ ಕ್ಷೇತ್ರದಲ್ಲಿ 1998 ರಲ್ಲಿ ಆದಿತ್ಯನಾಥ್ ಅವರು 2014ರವರೆಗೆ ನಿರಂತರ ಗೆಲುವು ಸಾಧಿಸಿಕೊಂಡು ಬಂದಿದ್ದರು. ಈ ಎರಡು ಕ್ಷೇತ್ರದಲ್ಲಿ ಬಿಎಸ್‍ಬಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಎಸ್‍ಪಿ ಅಭ್ಯರ್ಥಿಗೆ ಬೆಂಬಲ ನೀಡಿತ್ತು.
Advertisement
ಆರ್ ಜೆಡಿಗೆ ಗೆಲುವು
ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ-ಜೆಡಿಯು ಮೈತ್ರಿ ಅಭ್ಯರ್ಥಿ ಸೋತಿದ್ದು ವಿಪಕ್ಷ ಆರ್ ಜೆಡಿ ಅಭ್ಯರ್ಥಿ ಗೆದ್ದಿದ್ದಾರೆ. 2014ರ ಚುನಾವಣೆಯಲ್ಲೂ ಆರ್ ಜೆಡಿ ಇಲ್ಲಿ ಗೆದ್ದುಕೊಂಡಿತ್ತು.
Leader of the opposition and Samajwadi Party member Ram Govind Choudhury met Bahujan Samaj Party Chief Mayawati in #Lucknow pic.twitter.com/6t0zPy53B9
— ANI UP/Uttarakhand (@ANINewsUP) March 14, 2018
Samajwadi Party workers celebrate in Agra #UPByPolls pic.twitter.com/ORtNZlwzhZ
— ANI UP/Uttarakhand (@ANINewsUP) March 14, 2018