ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ 26 ಸೀರೆ ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್

Advertisements

ಬಳ್ಳಾರಿ: ಗಡಿನಾಡು ಬಳ್ಳಾರಿಯಲ್ಲಿ ಖತರ್ನಾಕ್ ಕಳ್ಳಿಯರ ಗುಂಪೊಂದು ಸಕ್ರಿಯವಾಗಿದೆ. ಖರೀದಿಗೆಂದು ಬಂದು ಲಕ್ಷಾಂತರ ರೂ. ಸೀರೆಗಳ ಕಳ್ಳತನ ಮಾಡುತ್ತಿರುವ ಗ್ಯಾಂಗ್ ಬಳ್ಳಾರಿಯಲ್ಲಿ ಪತ್ತೆಯಾಗಿದೆ.

Advertisements

ಇಬ್ಬರು ಮಹಿಳೆಯರ ಜೊತೆ ಮೂವರು ಪುರುಷರಿರುವ ಗುಂಪು ಕಾಲೋನಿಗಳಲ್ಲಿ ಇರುವ ಬಟ್ಟೆ ಅಂಗಡಿಗಳಿಗೆ ಸೀರೆಕೊಳ್ಳುವ ನೆಪದಲ್ಲಿ ಎಂಟ್ರಿ ಕೊಡುತ್ತಾರೆ. ಈ ಗ್ಯಾಂಗ್ ಅಂಗಡಿಯವರ ಗಮನ ಬೇರೆಡೆ ಸೆಳೆದು ಲಕ್ಷಾಂತರ ಮೌಲ್ಯದ ರೇಷ್ಮೆ ಸೀರೆಗಳು ಹಾಗೂ ಬೆಲೆ ಬಾಳುವ ಸೀರೆಗಳನ್ನು ಕದ್ದು ತೆಗೆದುಕೊಂಡು ಹೋಗುತ್ತಾರೆ. ಇದನ್ನೂ ಓದಿ: ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು, ಇಷ್ಟೇ ಕಾಂಗ್ರೆಸ್ ಅಜೆಂಡಾ: ಜೋಶಿ ಟೀಕೆ 

Advertisements

ಗಾಂಧಿನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ವಿಜಯಶ್ರೀ ಸ್ಯಾರಿ ಅಂಗಡಿಗೆ ಬಟ್ಟೆ ಖರೀದಿ ಮಾಡುವ ನೆಪದಲ್ಲಿ ಭೇಟಿ ಕೊಟ್ಟು ಸುಮಾರು ಮೂರು ಲಕ್ಷ ರೂ. ಬೆಲೆ ಬಾಳುವ ಸೀರೆಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ನಂತರ ಅವರ ನಡುವಳಿಗೆಯಿಂದ ಅನುಮಾನಗೊಂಡು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಖತರ್ನಾಕ್ ಕಳ್ಳರ ಕೈಚಳಕ ಬಯಲಿಗೆ ಬಂದಿದೆ.

ತಕ್ಷಣಕ್ಕೆ ಅಂಗಡಿಯಲ್ಲಿನ ಸೀರೆಗಳ ಸ್ಟಾಕ್‍ನ್ನು ಪರಿಶೀಲಿಸಿದಾಗ 26 ಸೀರೆಗಳು ಕಳ್ಳತನವಾಗಿದೆ. ಅದರಲ್ಲಿ ಹತ್ತು ಸಾವಿರ ಬೆಲೆ ಬಾಳುವ ರೇಷ್ಮೆ ಸೀರೆಗಳು ಸೇರಿದಂತೆ ಇತರೆ ಬೆಲೆ ಬಾಳುವ ಸೀರೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: Sena Vs Sena: ಉದ್ಧವ್ ಶಿಬಿರಕ್ಕೆ ತಕ್ಷಣದ ಪರಿಹಾರವಿಲ್ಲ, ಆಗಸ್ಟ್ 1 ರಂದು ಮುಂದಿನ ವಿಚಾರಣೆ: ಕೋರ್ಟ್

Advertisements

ಇದಲ್ಲದೆ ಬೇರೆ ಅಂಗಡಿಗಳಿಗೆ ತೆರಳಿರುವ ಗುಂಪು ಕಳ್ಳತನ ಮಾಡಲು ಪ್ರಯತ್ನ ನಡೆಸಿರುವ ಸಿಸಿಟಿವಿ ಫೋಟೇಜ್ ಲಭ್ಯವಾಗಿದೆ. ಈ ಪ್ರಕರಣ ಕುರಿತಂತೆ ಅಂಗಡಿ ಮಾಲೀಕರಾದ ಕಲ್ಯಾಣಿ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Live Tv

Advertisements
Exit mobile version