ಕನ್ನಡ ಕಲರ್ಸ್ ವಾಹಿನಿಯ ಅತ್ಯಂತ ದುಬಾರಿ ಶೋ ಬಿಗ್ ಬಾಸ್ ಮುಂದಿನ ತಿಂಗಳಿಂದ ಶುರುವಾಗಲಿದೆ ಎನ್ನುವ ಮಾಹಿತಿ ಇದೆ. ಈಗಾಗಲೇ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಲವು ಕೆಲಸಗಳು ನಡೆಯುತ್ತಿವೆ. ಬಿಗ್ ಬಾಸ್ ಮನೆ ರೆಡಿ ಆಗುತ್ತಿರುವ ಕುರಿತು ವಾಹಿನಿಯ ಮುಖ್ಯಸ್ಥರೆ ಈಗಾಗಲೇ ತಿಳಿಸಿದ್ದಾರೆ. ಅಲ್ಲದೇ, ಮೊನ್ನೆಯಷ್ಟೇ ಕಿಚ್ಚ ಸುದೀಪ್ ಅವರ ಪ್ರೊಮೋಗಳನ್ನು ಚಿತ್ರೀಕರಣ ಮಾಡಲಾಗಿದೆ. ಈ ನಡುವೆ ಬಿಗ್ ಬಾಸ್ ಆಯ್ಕೆಯ ಹೆಸರಿನಲ್ಲಿ ವಸೂಲಿಗೆ ಇಳಿದಿದ್ದಾರಾ ಎನ್ನುವ ಅನುಮಾನ ಹುಟ್ಟಿದೆ.
Advertisement
ಈ ಕುರಿತು ವಾಹಿನಿಯೇ ಒಂದಷ್ಟು ಪೋಸ್ಟರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಬಿಗ್ ಬಾಸ್ ಶೋ ಸ್ಪರ್ಧಿಗಳು ನೇರವಾಗಿ ಆಯ್ಕೆ ಆಗುವುದರಿಂದ ಮತ್ತು ಅವರನ್ನು ವಾಹಿನಿಯೇ ಆಯ್ಕೆ ಮಾಡುವುದರಿಂದ ಈ ವಿಷಯದಲ್ಲಿ ಯಾರಾದರೂ ದುಡ್ಡು ಕೇಳಿದರೆ ದೂರು ಕೊಡಿ ಎಂದು ಹೇಳಿದೆ. ಕೆಲವರು ಬಿಗ್ ಬಾಸ್ ಹೆಸರಿನಲ್ಲಿ ವಸೂಲಿಗೆ ಇಳಿದಿರುವ ಕುರಿತು ಮಾಹಿತಿಯು ವಾಹಿನಿಗೆ ಬಂದಿದ್ದರಿಂದ, ಇಂಥದ್ದೊಂದು ಪೋಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್ ರಿಲೀಸ್
Advertisement
Advertisement
ಬಿಗ್ ಬಾಸ್ ಮನೆಗೆ ಹೋಗಲು ತರಬೇತಿ, ಇನ್ಫ್ಯೂಲೆನ್ಸ್ ಹೆಸರಿನಲ್ಲಿ ಕೆಲವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿಯು ವಾಹಿನಿಗೆ ಸಿಕ್ಕಿದೆ ಅಂತೆ. ಹಾಗಾಗಿ ಯಾರೂ ದುಡ್ಡು ಕೊಡಬೇಡಿ, ಮೋಸ ಹೋಗಬೇಡಿ ಎಂದು ವಾಹಿನಿಯು ಎಚ್ಚರಿಸಿದೆ. ಹಾಗೇನಾದರೂ ದುಡ್ಡು ಕಳೆದುಕೊಂಡರೆ ವಾಹಿನಿಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದೆ.