Latest
ಹುತಾತ್ಮ ಯೋಧನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ಘೋಷಣೆ

ಭೋಪಾಲ್: ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತ ಮಟ್ಟ ಮಧ್ಯಪ್ರದೇಶದ ವೀರ ಯೋಧ ಅಶ್ವಿನಿ ಕುಮಾರ್ (36) ಕುಟುಂಬಕ್ಕೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ.
ಯೋಧನ ವೀರ ಮರಣದ ಕುರಿತು ಸಂತಾಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಅವರು, ಕುಟುಂಬಸ್ಥರಿಗೆ ಸಂತ್ವಾನ ತಿಳಿಸಿದ್ದಾರೆ. ಅಲ್ಲದೇ ಸರ್ಕಾರದಿಂದ ಒಂದು ಕೋಟಿ ರೂ. ಪರಿಹಾರ ಹಾಗೂ ಕುಟುಂಬ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಪ್ರಕಟಿಸಿದ್ದಾರೆ.
कश्मीर के #Pulwama में @crpfindia पर आतंकी हमला बेहद निंदनीय है। शहीद जवानों को श्रद्धांजलि। उनकी शहादत को देश नमन करता है। घायल जवान शीघ्र स्वस्थ हों। ऐसी आतंकी घटनाओं से भारत विचलित नहीं होगा। आतंक के खात्मे के लिए देश प्रतिबद्ध है- श्री कमल नाथ, मुख्यमंत्री
— CMO Madhya Pradesh (@CMMadhyaPradesh) February 14, 2019
ಮಧ್ಯಪ್ರದೇಶ ಕೋಹ್ವಾಲ್ ಶಿರೋರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಅಶ್ವಿನಿ ಕುಮಾರ್, ಜಮ್ಮು ಕಾಶ್ಮೀರದ ಸಿಆರ್‍ಪಿಎಫ್ 35 ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಶ್ವಿನಿ ಕುಮಾರ್ ಅವರ ಕುಟುಂಬ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು, ಕುಟುಂಬದಲ್ಲಿ ಹಿರಿಯರಾಗಿದ್ದ ಅಶ್ವಿನಿ ಕುಮಾರ್ ಅವರನ್ನೇ ಕುಟುಂಬ ಅಶ್ರಯಿಸಿತ್ತು.
ಯೋಧನ ಕುಟುಂಬದಲ್ಲಿ ಪೋಷಕರೊಂದಿಗೆ ಐದು ಮಂದಿ ಸಹೋದರರು ಇದ್ದು, ಇತ್ತೀಚೆಗಷ್ಟೇ ಅಶ್ವಿನಿ ಕುಮಾರ್ ಅವರಿಗೆ ಮದುವೆ ಮಾಡಲು ಕುಟುಂಬ ನಿರ್ಧರಿಸಿತ್ತು.
शहादत को नमन..!
पुलवामा आतंकी हमले में शहीद मप्र के जबलपुर के सपूत अश्विनी कुमार काछी की शहादत को नमन करता हूं।
मप्र सरकार द्वारा शहीद के परिवार को 1 करोड़ रुपये, एक आवास एवं परिवार के 1 सदस्य को शासकीय नौकरी दी जाएगी।
—दुख की इस घड़ी में हम शहीद परिवार के साथ हैं।
— Office Of Kamal Nath (@OfficeOfKNath) February 15, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
