ಶಿವಮೊಗ್ಗ: ಸಾಗರದಿಂದ ಬಿಜೆಪಿ ಟಿಕೆಟ್ ಕೈ ತಪ್ಪುತ್ತೆ ನಾನು ಪಕ್ಷ ಬಿಡುತ್ತೇನೆ ಎಂದಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಈಗ ಯೂಟರ್ನ್ ಹೊಡೆದಿದ್ದಾರೆ.
ಸೊರಬಕ್ಕು ಹೋಗಲ್ಲ ಬಿಜೆಪಿಯನ್ನೂ ಬಿಡಲ್ಲ ಸಾಗರದಿಂದಲೇ, ಅದೂ ಬಿಜೆಪಿಯಿಂದಲೆ ಸ್ಪರ್ಧಿಸ್ತೀನಿ. ಸಾಗರ ಹಾಗೂ ಹೊಸನಗರದಲ್ಲಿ ಚುನಾವಣೆ ಕಚೇರಿ ತೆರೆಯಲು ಎರಡು ಜಾಗ ನೋಡಿ ಎಂದು ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ. ಇಂದು ಸಾಗರಕ್ಕೆ ಎಂಟ್ರಿ ಕೊಡುವ ಹಾಲಪ್ಪ ಇಂದಿನಿಂದಲೇ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ
2 ದಿನದ ಹಿಂದೆ ಬಿಜೆಪಿ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಹಾಲಪ್ಪ ಈ ಹೊಸ ವರಸೆ ಆರಂಭಿಸಿದ್ದಾರೆ. ಇತ್ತ ಸಾಗರದಿಂದ ನನಗೆ ಬಿಜೆಪಿ ಟಿಕೆಟ್ ಸಿಗುತ್ತೆ ಎಂದು ಪಟಾಕಿ ಹೊಡೆದು ಸಂಭ್ರಮಿಸಿದ್ದ ಬೇಳೂರು ಗೋಪಾಲ ಕೃಷ ಅವರಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ.
ಬಿಜೆಪಿ ನಾಯಕರು ಹಾಲಪ್ಪ ಹಾಗೂ ಬೇಳೂರು ಗೋಪಾಲ ಕೃಷ್ಣ ಇಬ್ಬರಿಗೂ ಟಿಕೆಟ್ ಭರವಸೆ ನೀಡಿ ಕ್ಷೇತ್ರದಲ್ಲಿ ಜಂಗಿ ಕುಸ್ತಿಗೆ ಬಿಟ್ಟಂತಿದೆ. ಇಂದಿನಿಂದ ಸಾಗರ ಕ್ಷೇತ್ರದಲ್ಲಿ ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ನಡುವೆ ಬಿಜೆಪಿ ಟಿಕೆಟ್‍ಗಾಗಿ ಭರ್ಜರಿ ಫೈಟ್ ಅಂತು ಆರಂಭವಾಗಲಿದೆ.