ನವದೆಹಲಿ: ಯಾವುದೇ ಗಡಿಬಿಡಿ ಇಲ್ಲ, ಯಾವುದೇ ಫಾಲೋ ಅಪ್ ಇಲ್ಲ. ಯಾವುದೇ ಕಾರಿಡಾರ್ ಸುತ್ತದೇ ನಮಗೆ ಹಂಚಿಕೆ ಪತ್ರ ಸಿಕ್ಕಿದೆ. 30 ವರ್ಷದಲ್ಲಿ ಮೊದಲ ಬಾರಿಗೆ ಈ ಅನುಭವವಾಗಿದೆ ಎಂದು ಭಾರತಿ ಎಂಟರ್‌ಪ್ರೈಸಸ್ ಮುಖ್ಯಸ್ಥ ಸುನಿಲ್ ಮಿತ್ತಲ್ ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ.
5G ಸ್ಪೆಕ್ಟ್ರಮ್‌ಗಾಗಿ ಮೊದಲ ಕಂತು ಪಾವತಿಸಿದ ಕೆಲವೇ ಗಂಟೆಗಳಲ್ಲಿ ಟೆಲಿಕಾಂ ಕಂಪನಿಗಳಿಗೆ ಹಂಚಿಕೆ ಪತ್ರಗಳನ್ನು ದೂರಸಂಪರ್ಕ ಸಚಿವಾಲಯ ನೀಡಿದೆ. ಕೇಂದ್ರ ಸರ್ಕಾರ ವೇಗವಾಗಿ ಹಂಚಿಕೆ ಪತ್ರ ನೀಡಿದ್ದಕ್ಕೆ ಸುನಿಲ್ ಮಿತ್ತಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
“ಯಾವುದೇ ಗಡಿಬಿಡಿಯಿಲ್ಲ, ಯಾವುದೇ ಫಾಲೋ ಅಪ್ ಇಲ್ಲ. ಯಾವುದೇ ಕಾರಿಡಾರ್ ಸುತ್ತಿಲ್ಲ. ದೂರಸಂಪರ್ಕ ಇಲಾಖೆಯ 30 ವರ್ಷಗಳ ವ್ಯವಹಾರದಲ್ಲಿ ಮೊದಲ ಬಾರಿಗೆ ಈ ರೀತಿಯ ಅನುಭವವಾಗಿದೆ. Ease of doing business ಅಂದ್ರೆ ಇದು. ವ್ಯವಹಾರ ಅಂದರೆ ಹೀಗಿರಬೇಕು” ಎಂದು ಶ್ಲಾಘಿಸಿದ್ದಾರೆ.
Advertisement
5G ಸ್ಪೆಕ್ಟ್ರಮ್ ಖರೀದಿ ಸಂಬಂಧ ಏರ್‌ಟೆಲ್ ಬುಧವಾರ 8,312.4 ಕೋಟಿ ರೂ. ಪಾವತಿಸಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್ ಬ್ಯಾನ್? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?
Advertisement
ಕೆಲಸದಲ್ಲಿ ನಾಯಕತ್ವ. ಏನು ಬದಲಾವಣೆ! ಇದು ರಾಷ್ಟ್ರವನ್ನು ಪರಿವರ್ತಿಸುವ ಬದಲಾವಣೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಅದರ ಕನಸುಗಳಿಗೆ ಇದು ಶಕ್ತಿ ನೀಡುತ್ತದೆ ಎಂದು ಮಿತ್ತಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ತಿಂಗಳ ಕೊನೆಯಲ್ಲಿ 5G ಸೇವೆಯನ್ನು ನೀಡಲು ಏರ್‌ಟೆಲ್ ಮುಂದಾಗಿದೆ. 5G ತರಂಗಾಂತರ ಹರಾಜಿನಲ್ಲಿ 43,084 ಕೋಟಿ ರೂ. ಮೌಲ್ಯದ ವಿವಿಧ ಬ್ಯಾಂಡ್‌ಗಳಲ್ಲಿ 19,867 MHz ಸ್ಪೆಕ್ಟ್ರಮ್ ಅನ್ನು ಏರ್‌ಟೆಲ್ ಖರೀದಿಸಿದೆ.
ಇಂದು ಬೆಳಿಗ್ಗೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಕೂ ಮಾಡಿ, 5G ಅಪ್‌ಡೇಟ್: ಸ್ಪೆಕ್ಟ್ರಮ್ ನಿಯೋಜನೆ ಪತ್ರವನ್ನು ನೀಡಲಾಗಿದೆ. 5G ಆರಂಭಿಸಲು ಸಿದ್ಧವಾಗುವಂತೆ ಟೆಲಿಕಾಂ ಕಂಪನಿಗಳನ್ನು ವಿನಂತಿಸಲಾಗುತ್ತಿದೆ ಎಂದಿದ್ದರು.
Live Tv
[brid partner=56869869 player=32851 video=960834 autoplay=true]