LatestMain PostNationalSmartphonesTech

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

ನವದೆಹಲಿ: ಈಗಾಗಲೇ ಚೀನಾ ಮೊಬೈಲ್‌ ಕಂಪನಿಗಳ ಮೇಲೆ ರೇಡ್‌ ಮಾಡಿ ಬಿಸಿ ಮುಟ್ಟಿಸಿದ್ದ ಸರ್ಕಾರ ಈಗ ಮತ್ತೊಂದು ಶಾಕ್‌ ನೀಡಲು ಮುಂದಾಗಿದೆ. 12 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಚೀನಿ ಮೊಬೈಲ್‌ಗಳಿಗೆ ನಿಷೇಧ ಹೇರಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.

ದೇಶಿ ಮೊಬೈಲ್‌ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 12 ಸಾವಿರ ರೂ.ಗಿಂತ ಕಡಿಮೆ ಮೌಲ್ಯದ ವಿದೇಶಿ ಫೋನ್‌ಗಳ ಮಾರಾಟದ ಮೇಲೆ ನಿರ್ಬಂಧ ಹೇರಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

2ಜಿ, 3ಜಿ ಇದ್ದಾಗ ದೇಶೀಯ ಕಾರ್ಬನ್‌, ಮೈಕ್ರೋಮ್ಯಾಕ್ಸ್‌, ಲಾವಾ ಇತ್ಯಾದಿ ಕಂಪನಿಗಳು ಅತಿ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಟಾಪ್‌ ಫೋನ್‌ಗಳಾಗಿ ಗುರುತಿಕೊಂಡಿದ್ದವು. ಆದರೆ 4ಜಿ ಬಂದ ಬಳಿಕ ಚೀನಿ ಸ್ಮಾರ್ಟ್‌ಫೋನ್‌ಗಳು ದೇಶದ ಮಾರುಕಟ್ಟೆಯಲ್ಲಿ ಶೇ.70 ರಷ್ಟು ಪಾಲನ್ನು ಹೊಂದಿದೆ. ಇದನ್ನೂ ಓದಿ: ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ- ED ತನಿಖೆ ವೇಳೆ ಅಕ್ರಮ ಬಯಲು

ಚೀನಾದ ಕ್ಸಿಯೋಮಿ, ವಿವೋ, ಒಪ್ಪೋ ಕಡಿಮೆ ಬೆಲೆಯ ಫೋನ್‌ಗಳನ್ನು ಬಿಡುಗಡೆ ಮಾಡಿದ ಪರಿಣಾಮ ದೇಶೀಯ ಕಂಪನಿಗಳು ನಷ್ಟವನ್ನು ಅನುಭವಿಸಿ ಮಾರುಕಟ್ಟೆಯಿಂದಲೇ ಹಿಂದೆ ಸರಿದಿವೆ. ಈ ಹಿನ್ನೆಲೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಷೇಧದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಒಂದು ವೇಳೆ ಕೇಂದ್ರ ಸರ್ಕಾರ ನಿಷೇಧ ಮಾಡಿದರೆ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ ಕಂಪನಿಗೆ ನೆರವಾಗುವ ಸಾಧ್ಯತೆಯಿದೆ.

ಟಾಪ್‌ 5 ಕಂಪನಿಗಳು ಯಾವುದು?
canalys ಪ್ರಕಾರ ಎರಡನೇ ತ್ರೈಮಾಸಿಕದಲ್ಲಿ ಕ್ಸಿಯೋಮಿ ನಂಬರ್‌ ಒನ್‌ ಆಗಿದ್ದರೆ ಸ್ಯಾಮ್‌ಸಂಗ್‌ ಎರಡನೇ ಸ್ಥಾನವನ್ನು ಹೊಂದಿದೆ. ಕ್ಸಿಯೋಮಿ 70 ಲಕ್ಷ ಫೋನ್‌ ಮಾರಾಟ ಮಾಡಿದ್ದರೆ ಸ್ಯಾಮ್‌ಸಂಗ್‌ 67 ಲಕ್ಷ ಫೋನ್‌ ಮಾರಾಟ ಮಾಡಿದೆ. ಮೂರನೇ ಸ್ಥಾನದಲ್ಲಿ ರಿಯಲ್‌ಮೀ, ನಾಲ್ಕು ಮತ್ತು ಐದನೇಯ ಸ್ಥಾನವನ್ನು ವಿವೋ, ಒಪ್ಪೋ ಕಂಪನಿ ಗಳಿಸಿದೆ.

ಗಲ್ವಾನ್‌ ಗಲಾಟೆಯ ಬಳಿಕ ಭಾರತ ಸರ್ಕಾರ ಹಲವು ಚೀನಿ ಆಪ್‌ಗಳನ್ನು ನಿಷೇಧ ಮಾಡಿತ್ತು. ಇದಾದ ಬಳಿ ತೆರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಸಿಯೋಮಿ, ಒಪ್ಪೋ, ವಿವೋ ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿ ಭಾರೀ ದಂಡ ವಿಧಿಸಿದೆ. ಇದಾದ ಬೆನ್ನಲ್ಲೇ ಚೀನಿ ಲೋನ್‌ ಅಪ್ಲಿಕೇಶನ್‌ಗಳನ್ನು ನಿಷೇಧ ಮಾಡಿದೆ.

Live Tv

Leave a Reply

Your email address will not be published.

Back to top button