ಭೋಪಾಲ್: ಮಧ್ಯಪ್ರದೇಶದ (Madhya Pradesh)ಶಾಲೆಯೊಂದರಲ್ಲಿ ಮಕ್ಕಳೇ ಕಸ ಗುಡಿಸುವ, ರೊಟ್ಟಿ ಮಾಡುವ ಮತ್ತು ಪಾತ್ರೆಗಳನ್ನು ತೊಳೆಯುವ ದೃಶ್ಯಗಳು ತಡವಾಗಿ ಬೆಳಕಿಗೆ ಬಂದಿದೆ.
ಚಕ್‍ದೇವಪುರ ಗ್ರಾಮದ (Chakdevpur village) ಕೊಯಲಾರಿಯ (Koyalari)ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 5 ಮತ್ತು 6 ನೇ ತರಗತಿಯ ಶಾಲಾ ವಿದ್ಯಾರ್ಥಿನಿಯರು ತಮ್ಮ ಶಾಲಾ ಆವರಣದಲ್ಲಿರುವ ಕೈ ಪಂಪ್‍ನಿಂದ ನೀರು ತಂದು ಶೌಚಾಲಯ ಸ್ವಚ್ಛಗೊಳಿಸಿ ಮತ್ತು ಮಹಡಿಗಳನ್ನು ಗುಡಿಸಿದ್ದಾರೆ. ಇದನ್ನೂ ಓದಿ: ಮಗು ಏಕೆ ಕಪ್ಪಾಗಿದೆ ಎಂದು ಪತ್ನಿಯನ್ನೇ ಕೊಂದ ಪತಿ- ಎರಡೂವರೆ ವರ್ಷದ ಮಗುವಿನಿಂದ ಬಯಲಾಯ್ತು ರಹಸ್ಯ
Advertisement
Advertisement
Advertisement
ವಿದ್ಯಾರ್ಥಿಗಳು ಎದುರಿಸುತ್ತಿರುವ ಈ ಸಮಸ್ಯೆಗಳ ಕುರಿತಂತೆ ಗಿರಿಜನ ಕಲ್ಯಾಣ ಇಲಾಖೆಯ ಹೆಚ್ಚುವರಿ ಆಯುಕ್ತ ಪಿಎನ್ ಚತುರ್ವೇದಿ (PN Chaturvedi) ಅವರು, ನಾವು ಈ ಸಮಸ್ಯೆಯನ್ನು ಉನ್ನತ ಅಧಿಕಾರಿಗಳಿಗೆ ತಿಳಿಸುತ್ತೇವೆ ಮತ್ತು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಳಗ್ಗಿನ ಜಾವ ಮಲ ವಿಸರ್ಜನೆಗೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆ
Advertisement
ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಶಿಕ್ಷಣಾಧಿಕಾರಿ ಚಂದ್ರಶೇಖರ್ ಸಿಸೋಡಿಯಾ (Chandrasekhar Sisodia) ಅವರು, ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಈ ಸಮಸ್ಯೆಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ 21,077 ಸರ್ಕಾರಿ ಶಾಲೆಗಳಲ್ಲಿ ತಲಾ ಒಬ್ಬ ಶಿಕ್ಷಕರಿದ್ದಾರೆ. 87,630 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಡಿಮೆ-ಗುಣಮಟ್ಟದ ಬೋಧನೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಕ್ಕಳಿಗೆ ಓದುವುದರಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. 2020-2021 ರಲ್ಲಿ ಶಾಲೆಗಳಿಂದ ಡ್ರಾಪ್-ಔಟ್ ಆದವರ ಪ್ರಮಾಣ ಶೇಕಡಾ 23.8 ರಷ್ಟಿತ್ತು.