ತಿರುಪತಿ: ನೋಟ್ ಬ್ಯಾನ್ ಆದ ಬಳಿಕ ಇದೇ ಮೊದಲ ಬಾರಿಗೆ ತಿರುಪತಿ ವೆಂಕಟೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 4.75 ಕೋಟಿ ರೂ. ಸಂಗ್ರಹವಾಗಿದೆ.
ವೆಂಕಟೇಶ್ವರ ದೇವರಿಗಾಗಿ ಸಮರ್ಪಿಸುವ ಬೆಳ್ಳಿ, ಬಂಗಾರದ ಜೊತೆಗೆ 2.5 ಕೋಟಿ ರೂ.ನಿಂದ 3 ಕೋಟಿ ರೂ. ವರೆಗೆ ಪ್ರತಿ ದಿನ ಕಾಣಿಕೆ ಸಂಗ್ರಹವಾಗುತಿತ್ತು. ಆದರೆ 1 ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ತಿರುಪತಿ ದೇವಾಲಯದ ಮೂಲಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿವೆ.
Advertisement
7 ಅಡಿ ಎತ್ತರದ ಕಾಣಿಕೆ ಹುಂಡಿಯನ್ನು ಸಿಬ್ಬಂದಿ ತೆಗೆದಾಗ ಇಷ್ಟೊಂದು ಮೊತ್ತದ ಹಣಗಳನ್ನು ನೋಡಿ ಆಶ್ಚರ್ಯವಾಗಿತ್ತು. ವಿಶೇಷವಾಗಿ ಎಣಿಕೆ ಮಾಡುವಾಗ ಒಂದೇ ಚೀಲದಲ್ಲಿ 1 ಕೋಟಿ ರೂ. ಮೌಲ್ಯದ ಹಣ ಸಿಕ್ಕಿದೆ ಎಂದು ತಿಳಿಸಿದ್ದಾರೆ.
Advertisement
ಈ ಹಿಂದೆ 2012ರ ಏಪ್ರಿಲ್‍ನಲ್ಲಿ ಶ್ರೀರಾಮ ನವಮಿ ದಿನದಂದು 5.73 ಕೋಟಿ ರೂ. ಕಾಣಿಕೆ ಹಣ ಸಂಗ್ರಹವಾಗಿತ್ತು. ಇದು ಇದೂವರೆಗೆ ಸಂಗ್ರಹವಾದ ಅತಿ ಹೆಚ್ಚು ಕಾಣಿಕೆಯಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
Advertisement
2016-17ರ ಹಣಕಾಸು ವರ್ಷದಲ್ಲಿ 2,678 ಕೋಟಿ ರೂ. ಅಂದಾಯ ಸಂಗ್ರಹವಾಗಲಿದೆ ಎಂದು ಎಂದು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಅಂದಾಜಿಸಿದೆ. ಈ ವರ್ಷ ಹುಂಡಿಯಿಂದಲೇ 1,010 ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ.
Advertisement
ಇದನ್ನೂ ಓದಿ: ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?