ಕಲಬುರಗಿ: ಗುಜರಾತ್ (Gujarat) ನಲ್ಲಿ ನಮ್ಮ ನಿರೀಕ್ಷೆಗಿಂತ ಕಡಿಮೆ ಸ್ಥಾನ ಬಂದಿವೆ. ಈ ಕುರಿತು ಪರಾಮರ್ಶೆ ಮಾಡಲಾಗುವುದು ಎಂದು ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು.
ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮಗೆ ಗುಜರಾತ್‍ನಲ್ಲಿ 80 ರಿಂದ 95 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯಂತೆ ಗೆಲ್ಲಲು ಆಗಲಿಲ್ಲ. ಅಲ್ಲಿ ಮೂರು ‘ತ್ರಿ’ ಗಳು ಚೆನ್ನಾಗಿ ಕೆಲಸ ಮಾಡಿವೆ. ಅವುಗಳಿಂದಲೇ ಬಿಜೆಪಿ (BJP) ಗೆಲುವು ಸಾಧಿಸಿದೆ. ಆ ಮೂರು ತ್ರಿ ಗಳೆಂದರೆ, ಮೋದಿ, ಮನಿ ಹಾಗೂ ಮಸಲ್ ಪವರ್ ಗಳು ಎಂದರು. ಇದನ್ನೂ ಓದಿ: ಗುಜರಾತ್ ಚುನಾವಣೆ – ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಏನು?
Advertisement
Advertisement
ಗುಜರಾತ್‍ನಲ್ಲಿ ನಮ್ಮ ಹಲವು ಮುಖಂಡರ ಮೇಲೆ ಹಲ್ಲೆ ಸಹ ನಡೆಸಲಾಗಿದೆ ಎಂದು ಆರೋಪಿಸಿದ ಖರ್ಗೆ, ಬಿಜೆಪಿ ಸಿಬಿಐ, ಐಟಿ ಹಾಗೂ ಇಡಿಗಳ ಬೆಂಬಲ ಪಡೆದುಕೊಂಡಿದೆ. ಗುಜರಾತ್ ನಲ್ಲಿ ಮೋದಿ ಪ್ರಭಾವವಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡ ಪ್ರಿಯಾಂಕ್, ಮೋದಿ (Narendra Modi) ಈ ಸಲದ ಚುನಾವಣೆ ಪ್ರಚಾರವನ್ನು ಕಾರ್ಪೋರೇಷನ್ ಚುನಾವಣೆಗಳ ರೀತಿ ನಡೆಸಿದ್ದಾರೆ ಎಂದರು. ಪಕ್ಷದ ಸೋಲಿನ ಕುರಿತಂತೆ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸಿ ಸರಿಪಡಿಸಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.
Advertisement
Advertisement
ರಾಜ್ಯದಲ್ಲಿ ಮೋದಿ ಪ್ರಭಾವ ಕುರಿತು ಮಾತನಾಡಿದ ಅವರು, ಕರ್ನಾಟಕ ಪ್ರಗತಿಪರ ಚಿಂತನೆಯ ರಾಜ್ಯ ಇಲ್ಲಿ ಅವರ ಆಟ ನಡೆಯುವುದಿಲ್ಲ. ಅವರ ಆಟ ನಡೆಯುವುದಿಲ್ಲ ಎಂದು ಅರಿತುಕೊಂಡಿದ್ದರಿಂದಲೇ ಯಡಿಯೂರಪ್ಪನವರನ್ನ ಪಾರ್ಲಿಮೆಂಟರಿ ಬೋರ್ಡ್ ಗೆ ತರಲಾಗಿದೆ. ಬಿಜೆಪಿಗರ ಜಟ್ಕಾಕಟ್ ಹಾಗೂ ಹಲಾಲ್ ಕಟ್ ಗಳಿಗೆ ರಾಜ್ಯದಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದರು.