LatestLeading NewsNational

ಗುಜರಾತ್‌ ಚುನಾವಣೆ – ಕಾಂಗ್ರೆಸ್‌ ಹೀನಾಯ ಸೋಲಿಗೆ ಕಾರಣ ಏನು?

ನವದೆಹಲಿ: ಕಳೆದ ಗುಜರಾತ್‌ ಚುನಾವಣೆಯಲ್ಲಿ(Gujarat Election) ಪ್ರತಿರೋಧ ತೋರಿದ್ದ ಕಾಂಗ್ರೆಸ್‌(Congress) ಈ ಬಾರಿ ಯಾವುದೇ ಹೋರಾಟ ನೀಡದೇ ಹೀನಾಯವಾಗಿ ಸೋತಿದೆ.

ಮೋದಿ, ಶಾ(Narendra Modi, Amit Shah) ತಂತ್ರಗಾರಿಕೆಯ ಮುಂದೆ ಕಾಂಗ್ರೆಸ್‌ ರಣತಂತ್ರ ಸಂಪೂರ್ಣ ವಿಫಲವಾಗಿದೆ. 27 ವರ್ಷಗಳಿಂದ ಆಡಳಿತದಲ್ಲಿರುವ ಪಕ್ಷದ ವಿರುದ್ಧ ಆಡಳಿತ ವಿರೋಧಿ ಅಲೆ ಏಳುವುದು ಸಹಜ. ಈ ಕಾರಣಕ್ಕೆ ಈ ಅಂಶಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪ್ರಚಾರ ನಡೆಸಿದ್ದರೂ ಮತದಾರ ಈ ಬಾರಿಯೂ ಕಾಂಗ್ರೆಸ್‌ ಕೈ ಹಿಡಿಯಲಿಲ್ಲ.

ಗುಜರಾತ್‌ ಚುನಾವಣೆ - ಕಾಂಗ್ರೆಸ್‌ ಹೀನಾಯ ಸೋಲಿಗೆ ಕಾರಣ ಏನು?

ಸೋಲಿಗೆ ಕಾರಣ ಏನು?
ಸತತ ಸೋಲಿನಿಂದಾಗಿ ಗುಜರಾತ್‌ನಲ್ಲಿ ಕಾಂಗ್ರೆಸ್‌ ಸಂಘಟನೆಯೇ ದುರ್ಬಲವಾಗಿತ್ತು. ಆರಂಭದಲ್ಲೇ ಹುಮ್ಮಸ್ಸು ಕಳೆದುಕೊಂಡಿದ್ದ ಕಾಂಗ್ರೆಸ್ ನಾಯಕರು ನೆಪ ಮಾತ್ರಕ್ಕೆ ಸ್ಪರ್ಧಿಸಿದ್ದರು. ಬಿಜೆಪಿ(BJP) ಸರ್ಕಾರವನ್ನು ಟೀಕಿಸಲು ಪ್ರಬಲ ಅಸ್ತ್ರಗಳಿಲ್ಲದೇ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರುದ್ಯೋಗ, ಬೆಲೆ ಏರಿಕೆ, ಜಿಡಿಪಿ ಕುಸಿತವನ್ನೇ ನಾಯಕರು ಪ್ರಚಾರ ಮಾಡಿದ್ದರೂ ಇದು ಯಾವುದು ಜನರಿಗೆ ತಲುಪಲಿಲ್ಲ.‌

ಕಾಂಗ್ರೆಸ್‌ ಭಾರತ್‌ ಜೋಡೋ ಯಾತ್ರೆಯ((Bharat Jodo Yatra) ಕಡೆ ಗಮನ ನೀಡಿತೇ ಹೊರತು ಗುಜರಾತ್‌ ಕಡೆ ಹೆಚ್ಚಿನ ಗಮನ ಹರಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೊರತುಪಡಿಸಿ ಬೇರೆ ರಾಷ್ಟ್ರೀಯ ನಾಯಕರು ಗುಜರಾತ್‌ ಕಡೆ ತಲೆ ಹಾಕಲಿಲ್ಲ. ನೆಪ ಮಾತ್ರಕ್ಕೆ ರಾಹುಲ್ ಪ್ರಚಾರ ನಡೆಸಿದರೂ ಪ್ರಿಯಾಂಕಾ, ಸೋನಿಯಾಗಾಂಧಿ ಗೈರಾಗಿದ್ದರು. ಇದನ್ನೂ ಓದಿ: ಫಲ ನೀಡಿತು ಚಾಣಕ್ಯ ಜೋಡಿಯ ತಂತ್ರ – ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?

ಗುಜರಾತ್‌ ಚುನಾವಣೆ - ಕಾಂಗ್ರೆಸ್‌ ಹೀನಾಯ ಸೋಲಿಗೆ ಕಾರಣ ಏನು?

ಕಾಂಗ್ರೆಸ್ ಚಾಣಕ್ಯ ಅಹಮದ್‌ ಪಟೇಲ್ ನಿಧನ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ನೀಡಿದ್ದು, ಸ್ಥಳೀಯ ನಾಯಕರ ಮೇಲೆ ಚುನಾವಣೆ ಅವಲಂಬನೆಯಾಗಿತ್ತು. ಆದರೆ ಸ್ಥಳೀಯ ನಾಯಕರಲ್ಲಿ ಬಿಜೆಪಿಗೆ ಫೈಟ್‌ ನೀಡಬಲ್ಲ ನಾಯಕರು ಕಾಂಗ್ರೆಸ್‌ನಲ್ಲಿ ಇರಲಿಲ್ಲ. ಹಾರ್ದಿಕ್, ಅಲ್ಪೇಶ್ ಸೇರಿ ಕಡೆಯ ಸಮಯದಲ್ಲಿ ಪ್ರಮುಖ ನಾಯಕರು ಪಕ್ಷಾಂತರ ಮಾಡಿದ್ದರಿಂದ ಬಿಜೆಪಿಗಿದ್ದ ವಿರೋಧ ಕಡಿಮೆಯಾಯಿತು.  ಇದರ ಜೊತೆ ಹಲವು ರಾಜ್ಯಗಳನ್ನು ಕಳೆದುಕೊಂಡಿದ್ದರಿಂದ ಆರ್ಥಿಕ ಶಕ್ತಿಯೂ ಕಡಿಮೆಯಾಗಿತ್ತು.

ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ವೋಟಿನ ಬುಟ್ಟಿಗೆ ಆಪ್‌ ಲಗ್ಗೆ ಇಟ್ಟಿತ್ತು. ಪರಿಣಾಮ ಕಾರಣ ಕಡಿಮೆ ಅಂತರದಲ್ಲಿ ಗೆಲ್ಲಬಹುದಾಗಿದ್ದ ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳು ಸೋತಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button