ಪಣಜಿ: ಇತ್ತೀಚೆಗೆ ಬ್ಯಾಂಕ್ ಖಾತೆಗಳಿಗೆ ಮತ್ತು ಮೊಬೈಲ್ ನಂಬರ್ ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಬೇಕಾದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ವಿಚಿತ್ರ ಅಂದರೆ ಗೋವಾದಲ್ಲಿ ಯುವಕರು ಸೆಕ್ಸ್ ಗೆ ಮುನ್ನ ಆಧಾರ್ ಕಾರ್ಡ್ ತೋರಿಸಬೇಕಿದೆ.
ಹೌದು, ಗೋವಾದಲ್ಲಿ ‘ಪೇಡ್ ಸೆಕ್ಸ್’ ಇಚ್ಚಿಸುವವರು ಮೊದಲಿಗೆ ತಮ್ಮ ಆಧಾರ್ ಕಾರ್ಡ್ ನ್ನು ಪಿಂಪ್(ದಲ್ಲಾಳಿ)ಗೆ ತೋರಿಸಬೇಕು. ಪಿಂಪ್ ಆಧಾರ್ ಕಾರ್ಡ್ ನೋಡಿ ಕನ್ಫರ್ಮ್ ಆದ ನಂತರವೇ ಹುಡುಗಿಯರನ್ನು ಅವರಿದ್ದ ಸ್ಥಳಕ್ಕೆ ಕಳುಹಿಸುತ್ತಾನೆ.
ಕೆಲವು ದಿನಗಳ ಹಿಂದೆ ದೆಹಲಿ ಮೂಲದ ಐವರು ಯುವಕರು ‘ಬ್ಯಾಚೂಲರ್ ಪಾರ್ಟಿಗಾಗಿ’ ಗೋವಾಗೆ ಬಂದಿದ್ದರು. ಈ ವೇಳೆ ಯುವಕರೆಲ್ಲಾ ಉತ್ತರ ಗೋವಾದ ಕಡಲ ಕಿನಾರೆಯಲ್ಲಿರುವ ಲಾಡ್ಜ್ ವೊಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಒಂದು ನಂಬರ್ ಗೆ ಕಾಂಟ್ಯಾಕ್ಟ್ ಮಾಡಿ ತಮಗೆ ಐವರು ಹುಡುಗಿಯರನ್ನು ಕಳುಹಿಸುವಂತೆ ಹೇಳಿದ್ದಾರೆ. ಈ ವೇಳೆ ಫೋನ್ ಕಟ್ ಮಾಡಿದ ಪಿಂಪ್, ನಂಬರ್ ಮೂಲಕ ಫೊನ್ ಮಾಡಿದವರು ದೆಹಲಿ ಮೂಲದ ಯುವಕರೆಂದು ಖಾತ್ರಿ ಮಾಡಿಕೊಂಡು ಕರೆ ಮಾಡಿದ್ದಾನೆ.
ಸೆಕ್ಸ್ ಗೆ ಆಧಾರ್ ಕಾರ್ಡ್ ಬೇಕೆಂದ: ಯುವಕರಿಗೆ ಪುನಃ ಕರೆ ಮಾಡಿದ ಪಿಂಪ್, ಅವರು ತಂಗಿರುವ ಹೋಟೆಲ್ ಅಡ್ರೆಸ್ ಕೇಳಿದ್ದಾನೆ. ನಂತರ ನಿಮ್ಮ ಐವರ ಆಧಾರ್ ಕಾರ್ಡ್ ಮತ್ತು ತಾವು ವಾಸ್ತವ್ಯ ಹೂಡಿರುವ ಕೋಣೆಯ ಬೀಗದ ಕೈ ಫೋಟೋಗಳನ್ನು ವಾಟ್ಸಪ್ ಮಾಡುವಂತೆ ತಿಳಿಸಿದ್ದಾನೆ. ಈ ಎಲ್ಲ ಮಾಹಿತಿಗಳನ್ನು ಒದಗಿಸಿದ ನಂತರವೇ ಪಿಂಪ್ ಹುಡುಗಿಯರನ್ನು ಕಳುಹಿಸಲು ಒಪ್ಪಿದ್ದಾನೆ.
ಆಧಾರ್ ಕಾರ್ಡ್ ಯಾಕೆ?: ಸೆಕ್ಸ್ ಗೆ ಆಧಾರ್ ಕಾರ್ಡ್ ಯಾಕೆ ಬೇಕೆಂದು ಎಲ್ಲರಲ್ಲಿ ಪ್ರಶ್ನೆ ಮೂಡುತ್ತದೆ. ಗೋವಾ ಪೊಲೀಸರು ಪಿಂಪ್ ಗಳಿಗೆ ಫೋನ್ ಮಾಡಿ ಹುಡುಗಿಯರನ್ನು ಕಳುಹಿಸುವಂತೆ ಬೇಡಿಕೆ ಇಟ್ಟು, ನಂತರ ಕೊನೆಗೆ ಎಲ್ಲರನ್ನು ಬಂಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪಿಂಪ್ ಗಳಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು, ತಮಗೆ ಕಾಲ್ ಮಾಡುವ ಗ್ರಾಹಕರಿಗೆ ಆಧಾರ್ ಕಾರ್ಡ್ ಫೋಟೋ ಕೇಳುತ್ತಿದ್ದಾರೆ.