ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಮುಕೇಶ್ ಅಂಬಾನಿಗೆ (Reliance Industries chairman Mukesh Ambani) ಇದೀಗ ಮತ್ತೊಂದು ಕೊಲೆ ಬೆದರಿಕೆಯ ಇಮೇಲ್ (E-mail) ಬಂದಿದೆ.
ಅಂಬಾನಿಗೆ ಮೇಲಿಂದ ಮೇಲೆ ಕೊಲೆ ಬೆದರಿಕೆಯ ಇಮೇಲ್‍ಗಳು ಬರುತ್ತಿವೆ. ಒಂದೇ ವಾರದಲ್ಲಿ, ಒಂದೇ ಅಕೌಂಟ್‍ನಿಂದ ಎರಡು ಬಾರಿ ಬೆದರಿಕೆಯ ಇಮೇಲ್ ಬಂದಿದ್ದು, ಈ ಬಾರಿ 200 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ.
20 ಕೋಟಿ ರೂ. ಬೇಡಿಕೆ ಇಟ್ಟು ಕಳುಹಿಸಲಾಗಿದ್ದ ಇಮೇಲ್‍ಗೆ ಪ್ರತಿಕ್ರಿಯಿಸದಿದ್ದಕ್ಕೆ ಸೇಮ್ ಅಕೌಂಟ್‍ನಿಂದ ಮತ್ತೊಂದು ಜೀವಬೆದರಿಕೆಯ ಇಮೇಲ್ ಬಂದಿದೆ. ಎರಡನೇ ಬಾರಿ ಬಂದಿರುವ ಇಮೇಲ್‍ನಲ್ಲಿ, ನಾವು ಕಳುಹಿಸಿರುವ ಇಮೇಲ್‍ಗೆ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಇದೀಗ 20 ಕೋಟಿಯಿಂದ 200 ಕೋಟಿಗೆ ಏರಿಕೆ ಮಾಡಲಾಗಿದೆ. ಒಂದು ವೇಳೆ ಹಣ ನೀಡದೇ ಇದ್ದರೆ ಕೊಲೆ ಮಾಡುವುದಾಗಿ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಕಳಿಸಿದ್ದ ಬೆದರಿಕೆಯಲ್ಲಿ 20 ಕೋಟಿಗೆ ಬೇಡಿಕೆ ಇಡಲಾಗಿತ್ತು. ಕೇಳಿದಷ್ಟು ಹಣ ಕೊಡದಿದ್ದರೆ ಶೂಟ್ ಮಾಡುವುದಾಗಿ ಜೀವ ಬೆದರಿಕೆ ಹಾಕಲಾಗಿತ್ತು. ಅಲ್ಲದೆ ನಾವು ಭಾರತದಲ್ಲಿ ಅತ್ಯುತ್ತಮ ಶೂಟರ್‍ಗಳನ್ನು ಹೊಂದಿದ್ದೇವೆ ಎಂದು ತಿಳಿಸಲಾಗಿತ್ತು. ಇದನ್ನೂ ಓದಿ: ಚಾಲಕನಿಗೆ ಹೃದಯ ಸ್ತಂಭನ- ಸಾಯೋ ಮೊದ್ಲು 48 ಪ್ರಯಾಣಿಕರ ರಕ್ಷಿಸಿದ ಬಸ್ ಚಾಲಕ
ಸದ್ಯ ಅಂಬಾನಿ ಅವರ ಭದ್ರತಾ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ ದಕ್ಷಿಣ ಮುಂಬೈನ ಗಾಮ್‍ದೇವಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ (ಐಪಿಸಿ) 387 ಮತ್ತು 506 (2) ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Web Stories