ರಾಂಚಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ (Team India) ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ (ICC Test Ranking) 14 ಸ್ಥಾನ ಜಿಗಿದು, ಟಾಪ್-20 ಸ್ಥಾನಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
29ನೇ ಸ್ಥಾನದಲ್ಲಿದ್ದ 22 ವರ್ಷದ ಯಶಸ್ವಿ ಜೈಸ್ವಾಲ್ (Yashasvi Jaiswal) 699 ಅಂಕಗಳೊಂದಿಗೆ 14 ಸ್ಥಾನ ಮೇಲಕ್ಕೆ ಜಿಗಿದು 15ನೇ ಸ್ಥಾನ ಪಡೆದುಕೊಂಡಿದ್ದಾರೆ. 12ನೇ ಸ್ಥಾನದಲ್ಲಿದ್ದ ರಿಷಭ್ ಪಂತ್ 706 ಅಂಕಗಳೊಂದಿಗೆ 14ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನೂ 13ನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) 731 ಅಂಕಗಳೊಂದಿಗೆ 12ನೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಟಾಪ್-10 ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿ ಮತ್ಯಾರು ಸ್ಥಾನ ಗಳಿಸಿಲ್ಲ. 752 ಅಂಕ ಗಳಿಸಿರುವ ವಿರಾಟ್ 7ನೇ ಸ್ಥಾನದಲ್ಲಿದ್ದರೆ, 893 ಅಂಕ ಪಡೆದಿರುವ ಕಿವೀಸ್‌ನ ಕೇನ್ ವಿಲಿಯಮ್ಸನ್ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಫೋಟೋ ಶೂಟ್‌ನಲ್ಲಿ ಮಿಂಚಿದ RCB ಸ್ಟಾರ್ಸ್ – ʻಈ ಸಲ ಕಪ್ ನಮ್ದೇʼ ಮತ್ತೆ ಶುರುವಾಯ್ತು ಟ್ರೆಂಡ್!
Advertisement
Advertisement
ಕೊಹ್ಲಿ ದಾಖಲೆ ಮುರಿಯುವ ಸನಿಹ:
ಭಾರತ ಹಾಗೂ ಇಂಗ್ಲೆಂಡ್ (Ind vs Eng) ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಮಿಂಚುತ್ತಿರುವ ಜೈಸ್ವಾಲ್ ಸದ್ಯದಲ್ಲೇ ವಿರಾಟ್ ಕೊಹ್ಲಿ ಅವರ ಅಪರೂಪದ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ. ಟೆಸ್ಟ್ ಸರಣಿಯೊಂದರಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ ಟೀಂ ಇಂಡಿಯಾದ 3ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಸನಿಹದಲ್ಲಿ ಜೈಸ್ವಾಲ್ ಇದ್ದಾರೆ. ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ ಬ್ಯಾಟರ್‌ಗಳ ಪೈಕಿ 774 ರನ್ ಗಳಿಸಿರುವ ಸುನೀಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಈಗಾಗಲೇ 3 ಪಂದ್ಯಗಳಲ್ಲಿ 545 ರನ್ ಗಳಿಸಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಕೊಹ್ಲಿ ದಾಖಲೆ ಮುರಿಯಲು ಇನ್ನೂ 147 ರನ್‌ಗಳ ಅಗತ್ಯವಿದೆ. ಇದನ್ನೂ ಓದಿ: ಕಿಂಗ್ ಕೊಹ್ಲಿಯ ಅಪರೂಪದ ದಾಖಲೆ ಮುರಿಯುವ ಸನಿಹದಲ್ಲಿ ಯಶಸ್ವಿ!
Advertisement
Advertisement
2023-25ರ WTCನಲ್ಲಿ ಯಶಸ್ವಿ ಸಾಧನೆ:
ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್ ಸದ್ಯ 2023-25ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಲ್ಲಿ ಟಾಪ್‌ನಲ್ಲಿದ್ದಾರೆ. ಅತಿಹೆಚ್ಚು ಸ್ಕೋರರ್, ಉತ್ತಮ ಸರಾಸರಿ, ಅತಿಹೆಚ್ಚು ರನ್, ಅತಿಹೆಚ್ಚು ಸ್ಟ್ರೈಕ್‌ರೇಟ್, ಹೆಚ್ಚು ಬಾರಿ 50+ ರನ್ ಗಳಿಸಿದವರು, ಹೆಚ್ಚು ಬಾರಿ ಶತಕ ಸಿಡಿಸಿದವರು, ಹೆಚ್ಚು ಬೌಂಡರಿ, ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲೂ ಯಶಸ್ವಿ ಜೈಸ್ವಾಲ್ ಅಗ್ರಸ್ಥಾನದಲ್ಲಿರುವುದು ವಿಶೇಷ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯಕ್ಕೆ ಕೆ.ಎಲ್ ರಾಹುಲ್ ಕಂಬ್ಯಾಕ್ – ಸುಳಿವು ಕೊಟ್ಟ ರೋಹಿತ್
ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಟಾಪ್-5 ಲಿಸ್ಟ್
* ಡಾನ್ ಬ್ರಾಡ್ಮನ್ – 974 ರನ್ (5 ಪಂದ್ಯ, 7 ಇನ್ನಿಂಗ್ಸ್)
* ವಾಲಿ ಹ್ಯಾಮಂಡ್ – 905 ರನ್ (5 ಪಂದ್ಯ, 9 ಇನ್ನಿಂಗ್ಸ್)
* ರಾಸ್ ಟೇಲರ್ – 839 ರನ್ (6 ಪಂದ್ಯ, 11 ಇನ್ನಿಂಗ್ಸ್)
* ನೀಲ್ ಹಾರ್ವೆ – 834 ರನ್ (5 ಪಂದ್ಯ, 9 ಇನ್ನಿಂಗ್ಸ್)
* ವಿವ್ ರಿಚರ್ಡ್ಸ್ – 829 (4 ಪಂದ್ಯ, 7 ಇನ್ನಿಂಗ್ಸ್)
ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯರು
* ಸುನೀಲ್ ಗವಾಸ್ಕರ್ – 774 (4 ಪಂದ್ಯ, 8 ಇನ್ನಿಂಗ್ಸ್) – 1970-71 ರಲ್ಲಿ
* ಸುನೀಲ್ ಗವಾಸ್ಕರ್ – 732 (6 ಪಂದ್ಯ, 9 ಇನ್ನಿಂಗ್ಸ್) – 1978/79 ರಲ್ಲಿ
* ವಿರಾಟ್ ಕೊಹ್ಲಿ – 692 – (4 ಪಂದ್ಯ, 8 ಇನ್ನಿಂಗ್ಸ್) – 2014/15 ರಲ್ಲಿ