– ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಿಸಿಎಂ ರಾಜಕೀಯ ಮಾತು
ಬೆಂಗಳೂರು: ನೀವೆಲ್ಲ ಬಣ್ಣ ಹಾಕಿಕೊಂಡು ಸಿನಿಮಾ ಮಾಡುತ್ತೀರಾ, ನಾವು ಬಣ್ಣ ಹಾಕದೇ ಸಿನಿಮಾ ಮಾಡುತ್ತೀವಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಸಿಬಿಗೆ ಸತತ 4ನೇ ಸೋಲು – ಡೆಲ್ಲಿ ಪ್ಲೇ ಆಫ್‌ಗೆ
Advertisement
Advertisement
ವಿಧಾನಸೌಧದ ಮುಂಭಾಗದಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ಸಾಹಿತ್ಯ, ಸಂಗೀತ, ಸಿನಿಮಾ ಇವೆಲ್ಲವೂ ನಮ್ಮ ಸಂಸ್ಕೃತಿ ನಮ್ಮ ದೇಶದ ಆಸ್ತಿ. 18% ಜನರಿಗೆ ಸಿನಿಮಾದಿಂದ ಉದ್ಯೋಗ ದೊರೆಯುತ್ತಿದೆ. ನಾನು ಎಕ್ಸಿಬಿಟರ್ ಆಗಿ ಜೀವನ ಪ್ರಾರಂಭ ಮಾಡಿದೆ. ಇಂದಿರಾ ಗಾಂಧಿ ಹೆಸರಿನಲ್ಲಿ ಥಿಯೇಟರ್ ಮಾಡಿದ್ದೆ. ಈಗ 23 ಸ್ಕ್ರೀನ್ ಇವೆ. ಆದರೆ ಒಂದು ದಿನವೂ ನಾನು ಅಲ್ಲಿ ಸಿನಿಮಾ ನೋಡಿಲ್ಲ. ನಮ್ಮ ರಜನಿಕಾಂತ್, ಜಯಲಲಿತಾ ಅವರು ಬೇರೆ ರಾಜ್ಯದಲ್ಲಿ ಹೆಸರು ಮಾಡಿದರು. ಸಿನಿಮಾಗೆ ಯಾವುದೇ ಎಲ್ಲೆ ಇಲ್ಲ. ಎಲ್ಲಿ ಬೇಕಾದರೂ ಬೆಳೆಯಬಹುದು. ನೀವೆಲ್ಲ ಬಣ್ಣ ಹಾಕಿಕೊಂಡು ಸಿನಿಮಾ ಮಾಡ್ತೀರಾ. ನಾವು ಬಣ್ಣ ಹಾಕದೇ ಸಿನಿಮಾ ಮಾಡ್ತೀವಿ ಅಷ್ಟೆ ಎಂದು ರಾಜಕೀಯದ ಬಗ್ಗೆ ಹೇಳಿದರು.
Advertisement
ವಿಧಾನಸೌಧದ ಆವರಣದಲ್ಲಿ ಇಂದು 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಾನು ಉದ್ಘಾಟಿಸಿದೆವು. ಇಂದಿನಿಂದ ಮಾರ್ಚ್ 8ರವರೆಗೆ ನಡೆಯಲಿರುವ ಈ ಚಲನಚಿತ್ರೋತ್ಸವವು ಹಲವು ದೇಶ-ವಿದೇಶಗಳ ಸಿನಿಮಾ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದು,
“ಸರ್ವ ಜನಾಂಗದ ಶಾಂತಿಯ ತೋಟ ಎಂಬ” ಪರಿಕಲ್ಪನೆಯಲ್ಲಿ 60 ದೇಶಗಳ… pic.twitter.com/e1Zy7C0Nuc
— DK Shivakumar (@DKShivakumar) March 1, 2025
Advertisement
ಸೌಥ್ ಇಂಡಿಯಾ ಫಿಲ್ಮ್ಫೇರ್ ಅವಾರ್ಡ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡಲು ಮಾತುಕತೆಗಳು ನಡೆಯುತ್ತಿವೆ. ಈಗಾಗಲೇ ಎರಡು ಮೀಟಿಂಗ್ ಆಗಿದೆ. ಸಿಎಂ ಜೊತೆ ಇನ್ನೊಂದು ಸಭೆ ಮಾಡಿ ನಿರ್ಧಾರ ತೆಗೆದುಕೊಂಡು ಬೆಂಗಳೂರಿನಲ್ಲಿ ಪ್ರಶಸ್ತಿ ಸಮಾರಂಭ ಮಾಡ್ತೀವಿ. ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಲು ಸಿಎಂ ಸಂಕಲ್ಪ ಮಾಡಿದ್ದಾರೆ. ಬಜೆಟ್ ಆದ ಮೇಲೆ ಮತ್ತೆ ಚರ್ಚೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್ ಸಿಟಿ ಬಗ್ಗೆ ನಿರ್ಧಾರ ಮಾಡ್ತೀವಿ ಎಂದರು.ಇದನ್ನೂ ಓದಿ: ಪೆರ್ರಿ ಫಿಫ್ಟಿ ಆಟ – ಡೆಲ್ಲಿಗೆ 148ರನ್‌ಗಳ ಟಾರ್ಗೆಟ್