ಬೆಳಗಾವಿ: ಕಷ್ಟ ಕಾಲದಲ್ಲಿ ಸವದಿ (Laxman Savadi), ಶೆಟ್ಟರ್ (Jagadish Shettar) ಅವರು ನಮ್ಮ ಪಕ್ಷಕ್ಕೆ ಬಂದು ನಮಗೆ ಶಕ್ತಿ ತುಂಬಿದ್ದಾರೆ ಎಂದು ಡಿಸಿಎಂ (DCM) ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸವದಿ ಮತ್ತು ಶೆಟ್ಟರ್ ಅವರ ಜೊತೆಗೆ ಮಾತನಾಡಲು ನನಗೆ ಸಮಯವೇ ಸಿಕ್ಕಿರಲಿಲ್ಲ. ಚುನಾವಣೆ ಆದ ಮೇಲೂ ಟೈಂ ಸಿಕ್ಕಿರಲಿಲ್ಲ. ಹೀಗಾಗಿ ಸವದಿ ಸಾಹೇಬರು, ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಲು ಬಂದಿದ್ದೇನೆ ಎಂದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳಿಗೆ ‘ಲೋಕಾ’ ಶಾಕ್ – ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ದಾಳಿ
Advertisement
Advertisement
ಏನಾದರೂ ಬೇಸರವಾಗಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೂ ಬೇಸರವಿಲ್ಲ. ನಾನೊಬ್ಬ ಪಕ್ಷದ ಅಧ್ಯಕ್ಷನಾಗಿ, ಸೀನಿಯರ್ ಲೀಡರ್ ಇದ್ದೇನೆ. ಲಕ್ಷ್ಮಣ ಸವದಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು ಎಂಬ ವಿಚಾರ ನನಗೆ ಗೊತ್ತಿಲ್ಲ. ಕಾಂಗ್ರೆಸ್ (Congress) ಪಕ್ಷ ಯಾರನ್ನೂ ಕೈ ಬಿಡುವುದಿಲ್ಲ. ಅಷ್ಟು ಮಾತ್ರ ಹೇಳುತ್ತೇನೆ. ಯಾವಾಗ, ಏನು ಎಂದು ಕೇಳಬೇಡಿ ಎಂದು ಹೇಳಿದರು. ಇದನ್ನೂ ಓದಿ: ಬಿಹಾರದಲ್ಲಿ ಮೋದಿ ದಾಳಿಗೆ ಸಂಚು ಪ್ರಕರಣ – ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್ಐಎ ದಾಳಿ
Advertisement
Advertisement
ಸವದಿ, ಶೆಟ್ಟರ್ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಇವೆಯಾ ಎಂಬ ಪ್ರಶ್ನೆಗೆ, ಯಾರು ನಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದಾರೆ, ಕಾಂಗ್ರೆಸ್ ಪಕ್ಷ ಅವರ ಕೈ ಹಿಡಿಯುತ್ತದೆ ಎಂದರು. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಸಂಚಾರ ಭಾಗ್ಯ ಫಿಕ್ಸ್ – ಸಾರಿಗೆ ಇಲಾಖೆ ಲೆಕ್ಕಾಚಾರ ಏನು?