– 44 ಸಾವಿರ ಕೋಟಿ ವೆಚ್ಚದಲ್ಲಿ 12 ಸ್ವದೇಶಿ ಯುದ್ಧ ನೌಕೆಗಳ ನಿರ್ಮಾಣಕ್ಕೆ ಅನುಮೋದನೆ
– ಮಿಂಚಿನಂತೆ ಮುಗಿಲು ಮುಟ್ಟುವ ಕ್ಷಿಪಣಿ ಖರೀದಿಗೂ ಗ್ರೀನ್ ಸಿಗ್ನಲ್
ನವದೆಹಲಿ: ʻಆಪರೇಷನ್ ಸಿಂಧೂರʼ (Operation Sindoor) ಯಶಸ್ಸಿನ ಬಳಿಕ ಭಾರತ ರಕ್ಷಣಾ ವಲಯಕ್ಕೆ (Defence Sector) ಹೆಚ್ಚಿನ ಒತ್ತು ನೀಡುತ್ತಿದೆ. ಚೀನಾ ಹಾಗೂ ಪಾಕಿಸ್ತಾನ ತನ್ನ ರಕ್ಷಣಾ ಸಾಮರ್ಥ್ಯಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಹೊತ್ತಿನಲ್ಲೇ ನಡುವೆ ಭಾರತದ ರಕ್ಷಣಾ ಇಲಾಖೆ ನಿರ್ಣಾಯಕ ಹೆಜ್ಜೆಯನ್ನಿಟ್ಟಿದೆ. ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 10 ಯೋಜನೆಗಳಿಗೆ ಪ್ರಾಥಮಿಕ ಅನುಮೋದನೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 3 ದೊಡ್ಡ ರಕ್ಷಣಾ ಮತ್ತು 7 ಸಣ್ಣ ಯೋಜನೆಗಳಿವೆ. ಇದರಲ್ಲಿ ಅತ್ಯಾಧುನಿಕ ಕಣ್ಗಾವಲು ವಿಮಾನಗಳು, ನೀರಿನಲ್ಲಿ ಚಲಿಸುವ ಡ್ರೋನ್‌ಗಳು ಸೇರಿವೆ. ಸ್ವದೇಶಿ ನಿರ್ಮಿತ ರಕ್ಷಣಾ ಸಾಧನಗಳಿಗೆ ಭಾರತ ಸರ್ಕಾರ (Indian Government) ಹೆಚ್ಚಿನ ಮಹತ್ವ ನೀಡುತ್ತಿದೆ. ಬ್ರಹ್ಮೋಸ್, ಸುಖೋಯ್ ಯುದ್ಧ ವಿಮಾನಗಳ ಸ್ವದೇಶಿ ನಿರ್ಮಾಣಕ್ಕೆ ಒತ್ತು ನೀಡಲಾಗ್ತಿದೆ. ಹಡುಗುಗಳನ್ನು ನಾಶ ಮಾಡುವ ಮತ್ತು ಹಡುಗುಗಳನ್ನು ಪತ್ತೆಹಚ್ಚುವ ರಕ್ಷಣಾ ವ್ಯವಸ್ಥೆಗೂ ಅನುಮೋದನೆ ಸಿಕ್ಕಿದೆ. ಇದನ್ನೂ ಓದಿ: ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ರಾಷ್ಟ್ರಕ್ಕಾಗಿ ಮಾಡಿದ ಸೇವೆಗೆ – ದೆಹಲಿ ಹೈಕೋರ್ಟ್
44 ಸಾವಿರ ಕೋಟಿ, 12 ವಿಶೇಷ ಯುದ್ಧನೌಕೆ
ರಕ್ಷಣಾ ಇಲಾಖೆ ಅನುಮೋದನೆ ನೀಡಿದ 1 ಲಕ್ಷ ಕೋಟಿ ಮೌಲ್ಯದ ಯೋಜನೆಗಳಲ್ಲಿ ಇದು ಅತಿದೊಡ್ಡ ಯೋಜನೆಯಾಗಿದೆ. ಸುಮಾರು 44,000 ಕೋಟಿ ರೂಪಾಯಿ ವೆಚ್ಚದಲ್ಲಿ 12 ಗಣಿ ನಿರೋಧಕ ಯುದ್ಧ ನೌಕೆಗಳ ಸ್ವದೇಶಿ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈ ಮೈನ್ ಕೌಂಟರ್ ಮೆಷರ್ ವೆಸಲ್ಸ್ ನಿರ್ಮಾಣಕ್ಕೆ 1 ದಶಕ ಆಗಬಹುದು ಎಂಬ ಅಂದಾಜಿದ್ದು, 2035ರ ಹೊತ್ತಿಗೆ ಸಮುದ್ರದಲ್ಲಿ ಭಾರತದ ಪರ ಅಖಾಡಕ್ಕೆ ಇಳಿಯಲಿವೆ. ಇದನ್ನೂ ಓದಿ: ಮಾದಕ ವಸ್ತು, ಶಸ್ತ್ರಾಸ್ತ್ರ ಕೇಸ್‌ಲ್ಲಿ ಕರ್ನಾಟಕದ ಇಬ್ಬರು ಸೇರಿ 9 ಜನ ಅರೆಸ್ಟ್
ಈ ವಿಶೇಷ ಯುದ್ಧನೌಕೆಗಳು 900 ರಿಂದ 1000 ಟನ್ ತೂಕವನ್ನು ಹೊಂದಿರಲಿದ್ದು, ಶತ್ರು ಪಡೆಗಳ ಗಣಿ ಅಸ್ತ್ರಗಳ ವಿರುದ್ಧ ಹೋರಾಡಲಿವೆ. ಬಂದರು ಮತ್ತು ಶಿಪ್‌ಯಾರ್ಡ್ ಅನ್ನು ಬಂದ್ ಮಾಡಲು, ಹಡಗು ಸಂಚಾರ ಮತ್ತು ಕಡಲ ವ್ಯಾಪಾರಕ್ಕೆ ಅಡ್ಡಿಪಡಿಸಲು ಶತ್ರುಗಳು ಸಮುದ್ರದಲ್ಲಿ ಹಾಕಿರುವ ಮೈನ್‌ಗಳನ್ನು ಪತ್ತೆಹಚ್ಚಿ ಅವುಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದನ್ನೂ ಓದಿ: ಮದುವೆ ದಿಬ್ಬಣಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತ – ವರ ಸೇರಿ 8 ಮಂದಿ ದುರ್ಮರಣ
ಮಿಂಚಿನಂತೆ ಮುಗಿಲು ಮುಟ್ಟುವ ಕ್ಷಿಪಣಿ ಖರೀದಿಗೆ ಅಸ್ತು
ಇನ್ನೂ 2ನೇ ಮಹತ್ವದ ಯೋಜನೆಯಾಗಿ ವಾಯು ರಕ್ಷಣಾ ವ್ಯವಸ್ಥೆಗೆ ಬಲವರ್ಧನೆ ನೀಡಲು ರಕ್ಷಣಾ ಇಲಾಖೆ ಮುಂದಾಗಿದೆ. ಇದಕ್ಕಾಗಿ 36,000 ಕೋಟಿ ರೂ. ವೆಚ್ಚದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ತ್ವರಿತ-ಪ್ರತಿಕ್ರಿಯೆಯ ಭೂಮಿಯಿಂದ-ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ಅಂದ್ರೆ QRSAM ವ್ಯವಸ್ಥೆಗಳ ಖರೀದಿಗೆ ಅನುಮೋದನೆ ನೀಡಿದೆ. ಇದರಲ್ಲಿ 3 ರೆಜಿಮೆಂಟ್‌ಗಳು ಸೇನೆಗೆ ಮತ್ತು ಮೂರು ಸ್ಕ್ವಾಡ್ರನ್‌ಗಳು ವಾಯುಪಡೆಗೆ ಸೇರಿವೆ. ಇದನ್ನೂ ಓದಿ: ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಪರಾರಿಯಾದ ಆರ್ಥಿಕ ಅಪರಾಧಿ: ದೆಹಲಿ ವಿಶೇಷ ಕೋರ್ಟ್ ಆದೇಶ