ಕೋಲ್ಕತ್ತಾ: ನಮ್ಮ ಸರ್ಕಾರ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವುದಿಲ್ಲ. ಇಲ್ಲಿ ಮಸೀದಿ, ಮಂದಿರ, ಗುರುದ್ವಾರಗಳೆಲ್ಲವೂ ನಮ್ಮ ದೇಹಗಳಂತೆ ಒಟ್ಟಿಗೆ ಇರುತ್ತವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ್ತಾದ ಬೆಂಗಾಲ್ ಜಾಗತಿಕ ವ್ಯಾವಹಾರಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಯಾವುದೇ ಭಾಗದಿಂದ ಬಂದವರಾಗಿದ್ದರೂ, ಬಂಗಾಳದಲ್ಲಿ ನಮ್ಮ ಕುಟುಂಬದ ಭಾಗವಾಗಿದ್ದಾರೆ. ಇಲ್ಲಿ ಎಲ್ಲರೂ ಆರಾಮದಾಯಕವಾಗಿರಬೇಕು. ಇಲ್ಲಿ ನೀವು ಗುಜರಾತ್ ಅಥವಾ ಮಹಾರಾಷ್ರದವರು ಎಂಬುದನ್ನು ಮರೆತುಬಿಡಿ, ನೀವೂ ನಮ್ಮ ಕುಟುಂಬದ ಸದಸ್ಯರಿದ್ದಂತೆ. ಇಲ್ಲಿನ ಮಸೀದಿ, ಮಂದಿರ, ಗುರುದ್ವಾರಗಳೆಲ್ಲವೂ ನಮ್ಮ ದೇಹಗಳಂತೆ ಒಟ್ಟಿಗೇ ಇರುತ್ತವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆ ನಡೆದರೂ ಅದಕ್ಕೆ ಕಾಂಗ್ರೆಸ್ ನೇರ ಹೊಣೆ: ಅಶೋಕ್
ಇದೇ ವೇಳೆ ಏಜೆನ್ಸಿಗಳಿಂದ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖರ್ ಅವರಿಗೆ ಒತ್ತಾಯಿಸಿದರು.