ಅಮರಾವತಿ: ಹಗಲಿನಲ್ಲಿ ಮಹಿಳೆಯರು ನೈಟಿಯನ್ನು ಧರಿಸಿದರೇ, 2,000 ರೂ ದಂಡ ವಿಧಿಸುವ ವಿಚಿತ್ರ ಕಾನೂನನ್ನು ಗ್ರಾಮದ ಮುಖಂಡರು ಜಾರಿಗೆ ತಂದಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಕಳೆದ ಒಂಭತ್ತು ತಿಂಗಳುಗಳಿಂದ ಪಶ್ಚಿಮ ಗೋಧಾವರಿ ಜಿಲ್ಲೆಯ ಟೋಕ್ಲಾಪಲ್ಲಿ ಗ್ರಾಮದಲ್ಲಿ ಮಹಿಳೆಯರು ಹಗಲಿನಲ್ಲಿ ನೈಟಿ ಧರಿಸುವಂತಿಲ್ಲವೆಂಬ ಕಟ್ಟುನಿಟ್ಟಿನ ಆದೇಶವನ್ನು ಊರ ಹಿರಿಯರು ಜಾರಿಗೆ ತಂದಿದ್ದಾರೆ. ಅಲ್ಲದೇ ಮಹಿಳೆಯರು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ನೈಟಿಯನ್ನು ಧರಿಸಿದರೇ, ಅವರಿಗೆ 2,000 ರೂಪಾಯಿ ದಂಡ ಇಲ್ಲವೇ ಗ್ರಾಮದಿಂದ ಬಹಿಷ್ಕರಿಸುವ ಬಗ್ಗೆ ತೀರ್ಮಾನವನ್ನು ಕೈಗೊಂಡಿದ್ದಾರೆ.
Advertisement
Advertisement
ಗ್ರಾಮದಲ್ಲಿರುವ ಮಹಿಳೆಯರು ಹಗಲಿನಲ್ಲಿ ಯಾವುದೇ ಕಾರಣಕ್ಕೂ ನೈಟಿಗಳನ್ನು ಧರಿಸುವಂತಿಲ್ಲ. ಕೇವಲ ರಾತ್ರಿ ವೇಳೆ ನೈಟಿಗಳನ್ನು ಧರಿಸಬೇಕು. ಮಹಿಳೆಯರು ಹಗಲಿನಲ್ಲಿ ನೈಟಿ ಧರಿಸಿರುವ ಬಗ್ಗೆ ಮಾಹಿತಿ ನೀಡಿದವರಿಗೆ 1 ಸಾವಿರ ರೂಪಾಯಿ ಬಹುಮಾನವನ್ನು ಕೊಡಲಾಗುತ್ತದೆ ಎಂದು ತೀರ್ಮಾನಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸ್ ಹಾಗೂ ಸರ್ಕಾರಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
Advertisement
ಒಂದು ವೇಳೆ ಯಾರಾದರೂ ಆಜ್ಞೆ ಮೀರಿ ನೈಟಿ ಧರಿಸಿದ್ದಲ್ಲಿ, ಅಂತಹ ಮಹಿಳೆಯನ್ನು ದೋಷಿ ಎಂದು ಸಾಬೀತಿ ಪಡಿಸಿ ಸಾಮಾಜಿಕವಾಗಿ ಬಹಿಷ್ಕಕರಿಸಲಾಗುತ್ತದೆ. ಅಲ್ಲದೇ ಈ ಬಗ್ಗೆ ಯಾರೂ ಸಹ ಅಧಿಕಾರಿಗಳಿಗೆ ಮಾಹಿತಿ ನೀಡಬಾರದೆಂದು ಎಚ್ಚರಿಕೆಯ ಸಂಗತಿಯನ್ನು ಊರ ಗ್ರಾಮಸ್ಥರು ವರದಿಗೆ ತೆರಳಿದ್ದ ಮಾಧ್ಯಮಗಳಿಗೆ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews