ಮದುವೆ ಫೋಟೋ ಜೊತೆಗೆ ಭಾವನಾತ್ಮಕ ಸಾಲು ಬರೆದು ಶೇರ್ ಮಾಡಿದ ಶಿಲ್ಪಾ ಶೆಟ್ಟಿ

Public TV
2 Min Read
Raj Kundra Shilpa Shetty 1

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ 12ನೇ ವರ್ಷದ ವಾರ್ಷಿಕೋತ್ಸವದ ದಿನ ನೋಡುಗರ ಮನಕರಗುವಂತೆ ಸೋಶಿಯಲ್ ಮಿಡಿಯಾದಲ್ಲಿ ಮದುವೆ ಫೋಟೋ ಶೇರ್ ಮಾಡಿ ಭಾವನಾತ್ಮಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.

SHILPA SHETTY RAJ KUNDRA 3

ಇಂದು ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರ 12ನೇ ವರ್ಷದ ಮದುವೆ ವಾರ್ಷಿಕೋತ್ಸವ. ಈ ಹಿನ್ನೆಲೆ ಶಿಲ್ಪಾ ಇನ್‍ಸ್ಟಾಗ್ರಾಮ್ ನಲ್ಲಿ ಮದುವೆಯ ಫೋಟೋವನ್ನು ಶೇರ್ ಮಾಡಿಕೊಂಡು, ಈ ಕ್ಷಣ ಮತ್ತು ದಿನ 12 ವರ್ಷಗಳ ಹಿಂದೆ ನಡೆದ್ದಿತ್ತು. ಅಂದು ನಾವು ಭರವಸೆಯನ್ನು ನೀಡಿದ್ದೇವೆ. ಅದನ್ನು ಈಡೇರಿಸುವುದಕ್ಕೆ ಮುಂದುವರಿದಿದ್ದೇವೆ. ಒಳ್ಳೆಯ ಸಮಯವನ್ನು ಹಂಚಿಕೊಳ್ಳುವುದು ಮತ್ತು ಕಷ್ಟದ ಸಮಯಗಳನ್ನು ಸಹಿಸಿಕೊಳ್ಳುವುದು ಪ್ರೀತಿಯಲ್ಲಿ ನಂಬಿಕೆಯನ್ನು ಹೆಚ್ಚಿಸುತ್ತೆ. ಇದಕ್ಕೆ ದೇವರು ನಮಗೆ ದಿನದಿಂದ ದಿನಕ್ಕೆ ದಾರಿ ತೋರಿಸುತ್ತಾನೆ. 12 ವರ್ಷಗಳನ್ನು ಎಣಿಸಲು ಆಗುವುದಿಲ್ಲ. ವಾರ್ಷಿಕೋತ್ಸವದ ಶುಭಾಶಯಗಳು, ಕುಕೀ! ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ

ಇಲ್ಲಿ ಅನೇಕ ಮಳೆಬಿಲ್ಲುಗಳು, ನಗು, ಮೈಲಿಗಲ್ಲುಗಳು ಮತ್ತು ನಮ್ಮ ಅಮೂಲ್ಯ ಆಸ್ತಿಗಳು ನಮ್ಮ ಮಕ್ಕಳು. ತಮ್ಮ ಕಷ್ಟದ ಸಮಯದಲ್ಲಿ ತನಗೆ ಮತ್ತು ತನ್ನ ಪತಿಗೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಎಂದಿದ್ದಾರೆ.

ಶಿಲ್ಪಾ ಮತ್ತು ರಾಜ್ 2009 ರ ನವೆಂಬರ್ 22 ರಂದು ವಿವಾಹವಾಗಿದ್ದರು. ಇಂದು ಈ ಜೋಡಿ ಒಟ್ಟಿಗೆ ಪ್ರಯಾಣ ಶುರು ಮಾಡಿ 12 ವರ್ಷವಾಗಿದೆ. ಈ ಹಿನ್ನೆಲೆ ಶಿಲ್ಪಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದು, ನಾವು ಇನ್ನೂ ಒಟ್ಟಿಗೆ ಬದುಕುತ್ತೇವೆ ಎಂಬುದನ್ನು ಜನರಿಗೆ ಖಚಿತ ಪಡಿಸಿದ್ದಾರೆ.

SHILPA SHETTY RAJ KUNDRA 4

ಜುಲೈನಲ್ಲಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಕ್ಲಿಪ್‍ಗಳನ್ನು ತಯಾರಿಸಿ ವಿತರಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದರು. ಸೆಪ್ಟೆಂಬರ್ 20 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ನೀಡಿತ್ತು. ಇದನ್ನೂ ಓದಿ: ಕಂಟೇನರ್ ಲಾರಿಗಳಲ್ಲಿ ಸಾಗಾಟವಾಗುತ್ತಿದ್ದ 500 ಕ್ವಿಂಟಲ್ ಪಡಿತರ ಅಕ್ಕಿ ವಶ

Share This Article
Leave a Comment

Leave a Reply

Your email address will not be published. Required fields are marked *