ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭೀಕರ ಪ್ರವಾಹದಿಂದಾಗಿ (pakistan flood) ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡುವ ಮೂಲಕ ಹಿಂದೂ ಸಮುದಾಯವೊಂದು ಧಾರ್ಮಿಕ ಸೌಹಾರ್ದತೆ ಮೆರೆದಿದೆ.
ಭೀಕರ ಪ್ರವಾಹವು ಪಾಕಿಸ್ತಾನದ 80 ಜಿಲ್ಲೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ದೇಶದಲ್ಲಿ ಪ್ರವಾಹದಿಂದ ಸತ್ತವರ ಸಂಖ್ಯೆ ಸುಮಾರು 1,200 ತಲುಪಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ – 1,300ಕ್ಕೂ ಹೆಚ್ಚು ಮಂದಿ ಬಲಿ
Advertisement
Advertisement
ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಜಲಾಲ್ ಖಾನ್ ಎಂಬ ಪುಟ್ಟ ಗ್ರಾಮವು ಪ್ರವಾಹದಿಂದಾಗಿ ಪ್ರಾಂತ್ಯದ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ದೇಶದಲ್ಲಿ ಪ್ರವಾಹದಿಂದಾಗಿ ಮನೆಗಳನ್ನು ನಾಶವಾಗಿವೆ. ಸ್ಥಳೀಯರಿಗೆ ಆಶ್ರಯ ಒದಗಿಸಲು ಬಾಬಾ ಮಧುದಾಸ್ ಮಂದಿರದ ಬಾಗಿಲು ತೆರೆಯಲಾಗಿದೆ.
Advertisement
ಪಾಕಿಸ್ತಾನದಲ್ಲಿ ದಾಖಲೆಯ ಮಳೆ ಹಾಗೂ ಭಾರೀ ಪ್ರವಾಹವು ಹಸಿವು ಮತ್ತು ವಿವಿಧ ಕಾಯಿಲೆಗಳಿಗೆ ಕಾರಣವಾಗಿದೆ. ಇದು 33 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಪ್ರವಾಹ ಪೀಡಿತರು ಅಗತ್ಯ ಸಂಪನ್ಮೂಲಗಳಿಂದ ವಂಚಿತರಾಗಿ ದುಸ್ತರ ಬದುಕು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪ್ರವಾಹದಿಂದ ನಲುಗಿದ ಪಾಕಿಸ್ತಾನ – ಭಾರೀ ಮೊತ್ತದ ಸಹಾಯಕ್ಕೆ ಮುಂದಾದ ಐಎಂಎಫ್
Advertisement
ದೇಶದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಇನ್ನೂ ಜನಜೀವನ ಸಹಜ ಸ್ಥಿತಿಗೆ ಬಾರದಂತಾಗಿದೆ. ಜನರು ಅನಿವಾರ್ಯವಾಗಿ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುವಂತಾಗಿದೆ.