InternationalLatestMain Post

ಪಾಕಿಸ್ತಾನದಲ್ಲಿ ಭೀಕರ ಪ್ರವಾಹ – 1,300ಕ್ಕೂ ಹೆಚ್ಚು ಮಂದಿ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ಭೀಕರ ಪ್ರವಾಹದ ಪರಿಣಾಮವಾಗಿ ದೇಶದಲ್ಲಿ ಸುಮಾರು 1,300 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 29 ಜನರು ಸಾವನ್ನಪ್ಪಿದ್ದು, ಇನ್ನೂ ಕೂಡಾ ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 

ದೇಶದ ದೊಡ್ಡ ಭಾಗಗಳೇ ಪ್ರವಾಹದಿಂದ ಮುಳುಗಡೆಯಾಗಿದೆ. ಮುಖ್ಯವಾಗಿ ಸಿಂಧ್‌ನಲ್ಲಿನ ಭೀಕರ ಪ್ರವಾಹಕ್ಕೆ ಕನಿಷ್ಠ 180 ಜನರು ಸಾವನ್ನಪ್ಪಿದ್ದಾರೆ. ಬಳಿಕ ಖೈಬರ್ ಪಖ್ತುಂಕ್ವಾದಲ್ಲಿ 138 ಹಾಗೂ ಬಲೂಚಿಸ್ತಾನದಲ್ಲಿ 125 ಜನರು ಸಾವನ್ನಪ್ಪಿದ್ದಾರೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಮನೆಗಳನ್ನು ಕಳೆದುಕೊಂಡು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸರ್ಕಾರದಿಂದ ಬಿಡುಗಡೆ ಆಗದ ಹಣ – ಇಂದಿರಾ ಕ್ಯಾಂಟೀನ್‍ಗೆ ಬೀಗ

ಪ್ರವಾಹದಿಂದಾಗಿ ಸುಮಾರು 14,68,010 ಮನೆಗಳಿಗೆ ಹಾನಿಯಾಗಿದೆ. 7,36,450 ಜಾನುವಾರುಗಳು ಸಾವನ್ನಪ್ಪಿವೆ. ಹಾನಿಯ ಆರಂಭಿಕ ಅಂದಾಜನ್ನು 10 ಶತಕೋಟಿ ಡಾಲರ್(ಸುಮಾರು 79 ಸಾವಿರ ಕೋಟಿ ರೂ.) ಎನ್ನಲಾಗಿದೆ. ಇನ್ನೂ ಕೂಡಾ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮೀಕ್ಷೆಗಳು ನಡೆಯುತ್ತಿವೆ. ಇದನ್ನೂ ಓದಿ: ದಾಳಿ ನಡೆಸಲು ಪಾಕ್ ಸೇನೆ ಹಣ ನೀಡಿದ್ದಾಗಿ ಸತ್ಯ ಬಾಯ್ಬಿಟ್ಟಿದ್ದ ಉಗ್ರ ಹೃದಯಾಘಾತದಿಂದ ಸಾವು

ಶನಿವಾರ ಬೆಳಗ್ಗೆ ಪ್ರವಾಹ ಪೀಡಿತ ದೇಶಕ್ಕೆ ಫ್ರಾನ್ಸ್‌ನಿಂದ ಮೊದಲ ಮಾನವೀಯ ನೆರವು ಬಂದಿದೆ. ಬಳಿಕ ಹಲವು ದೇಶಗಳು ಮಾನವೀಯ ನೆರವು ನೀಡಲು ಮುಂದಾಗಿವೆ.

Live Tv

Leave a Reply

Your email address will not be published.

Back to top button