ಮಾಸ್ಕೋ/ಕೈವ್: ರಷ್ಯಾದ (Russia) ಮೇಲೆ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಅಮೆರಿಕ ಒಪ್ಪಿಗೆ ನೀಡಿದ ಬೆನ್ನಲ್ಲೇ ಉಕ್ರೇನ್ (Ukraine) ಅಮೆರಿಕ ನಿರ್ಮಿತ ಕ್ಷಿಪಣಿಗಳಿಂದ (American Missiles) ದಾಳಿ ನಡೆಸಿದೆ. ಒಟ್ಟು 6 ಬ್ಲಾಲಿಸ್ಟಿಕ್ ಕ್ಷಿಪಣಿಗಳನ್ನು ತನ್ನ ಮೇಲೆ ಹಾರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.
Advertisement
ಉಕ್ರೇನ್ ಗಡಿಯಿಂದ ಸುಮಾರು 130 ಕಿಮೀ ದೂರದಲ್ಲಿರುವ ಬ್ರಿಯಾನ್ಸ್ಕ್ ಪ್ರದೇಶದ ಕರಾಚೆವ್ ನಗರದಲ್ಲಿರುವ ರಷ್ಯಾದ ಮಿಲಿಟರಿ ಸೌಲಭ್ಯ ಗುರಿಯಾಗಿಸಿ ಈ ದಾಳಿ ನಡೆದಿದೆ. ರಷ್ಯಾ ಸೇನೆಯನ್ನ ಗುರಿಯಾಗಿಸಿ ಉಕ್ರೇನ್ ಇದೇ ಮೊದಲ ಬಾರಿಗೆ ಈ ATACMS ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗ ಮಾಡಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಉಕ್ರೇನ್ ಹೇಳಿಕೊಂಡಿರುವುದಾಗಿ ವರದಿಗಳು ತಿಳಿಸಿವೆ.
Advertisement
Advertisement
ಉಕ್ರೇನ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಹಾರಿಸಿತ್ತು. ಇದರಿಂದ ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್ – ಭಾರತದಲ್ಲಿ ಏನಾಗ್ತಿದೆ?
Advertisement
1,000 ದಿನಗಳಲ್ಲಿ 10 ಲಕ್ಷ ಮಂದಿ ಸಾವು:
2022ರ ಫೆಬ್ರವರಿ 24ರಂದು ಶುರುವಾದ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಬರೋಬ್ಬರಿ ಒಂದು ಸಾವಿರ ದಿನಗಳನ್ನು ಪೂರೈಸಿದೆ. ಈ ಘನಘೋರ ಯುದ್ಧದಲ್ಲಿ ಈವರೆಗೂ ಅಂದಾಜು 10 ಲಕ್ಷ ಮಂದಿ ಬಲಿ ಆಗಿದ್ದಾರೆ. ಲಕ್ಷಾಂತರ ಮಂದಿ ಗಾಯಗೊಂಡಿದ್ದಾರೆ. ಉಕ್ರೇನ್ ಜನಸಂಖ್ಯೆ ಶೇ.25ರಷ್ಟು ಮಂದಿ ಇಲ್ಲವಾಗಿದ್ದಾರೆ. ರಷ್ಯಾ ಜನಸಂಖ್ಯೆಯೂ ಇಳಿಮುಖವಾಗಿದೆ ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಇದನ್ನೂ ಓದಿ: 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್
ಉಕ್ರೇನ್‌ನ 40 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. 60 ಲಕ್ಷ ಮಂದಿ ವಿದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಷ್ಟೆಲ್ಲಾ ಆದ್ರೂ ಈ ಭೀಕರ ಯುದ್ಧ ನಿಲ್ಲುವಂತೆ ಕಾಣ್ತಿಲ್ಲ. ಇದು ಯುರೋಪ್ ಇತರೆಡೆಗಳಿಗೂ ಹಬ್ಬುವ ಆತಂಕವಿದೆ. ರಷ್ಯಾ ದಾಳಿ ನಡೆಸಬಹುದು.. ಔಷಧಿ, ಬೇಬಿ ಫುಡ್ ಸ್ಟಾಕ್ ಮಾಡಿಕೊಳ್ಳಿ ಎಂದು ನ್ಯಾಟೋ ಕೂಟ ಅಲರ್ಟ್ ಮಾಡಿದೆ.
ಈ ಹೊತ್ತಲ್ಲೇ ಅಣ್ವಸ್ತ್ರಗಳ ಬಳಕೆಗೆ ಅನುಮತಿಸುವ ನಿಯಮಗಳನ್ನು ಸರಳೀಕರಿಸುವ ಕಡತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಸಹಿ ಹಾಕಿದ್ದಾರೆ. ಅಂದ ಹಾಗೇ, ಜನವರಿ ಆರಂಭದಲ್ಲಿ ಪುಟಿನ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ..ಆದ್ರೆ, ದಿನಾಂಕ ಇನ್ನೂ ನಿಗದಿ ಆಗಿಲ್ಲ ಎಂದು ಕ್ರೆಮ್ಲಿನ್ ತಿಳಿಸಿದೆ. ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ವೇದಘೋಷಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ