ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ 2005 ರಲ್ಲಿ ಗೌರಿ ಲಂಕೇಶ್‍ಗೆ ಪಿಸ್ತೂಲ್ ತೋರಿಸಿ ಇಂದ್ರಜಿತ್ ಬೆದರಿಕೆ ಹಾಕಿದ್ದರು. ಲಂಕೇಶ್ ಪತ್ರಿಕೆ ಒಡೆತನದ ವಿಷಯಕ್ಕೆ ಇಂದ್ರಜಿತ್ ಹಾಗೂ ಗೌರಿ ಲಂಕೇಶ್ ನಡುವೆ ಜಗಳವಾಗಿತ್ತು. ಈ ಪ್ರಕರಣದ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
2000ರಲ್ಲಿ ಲಂಕೇಶ್ ಮೃತ ಪಟ್ಟಿದ್ದರು. ಲಂಕೇಶ್ ಸಾವನಪ್ಪಿದ ಬಳಿಕ ಗೌರಿ ಲಂಕೇಶ್ ಅವರು ಲಂಕೇಶ್ ಪತ್ರಿಕೆಯ ಸಂಪಾದಕಿ ಆಗಿದ್ದರು. ಈ ವೇಳೆ ಪತ್ರಿಕೆಯಲ್ಲಿ ಪ್ರಕಟವಾದ ಕೆಲ ವರದಿಗಳಿಗೆ ಇಂದ್ರಜಿತ್ ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಕೂಡ ಉಂಟಾಗಿತ್ತು. 15 ಫೆಬ್ರವರಿ 2005 ರಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರ ಇಂದ್ರಜಿತ್ ವಿರುದ್ಧ ಗೌರಿ ಲಂಕೇಶ್ ದೂರುನೀಡಿದ್ದರು. ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆಂದು ಗೌರಿ ಲಂಕೇಶ್ ದೂರು ನೀಡಿದ್ದರು.
Advertisement
Advertisement
ನಂತರ ಪ್ರತಿಯಾಗಿ ಗೌರಿ ಲಂಕೇಶ್ ವಿರುದ್ಧ ಇಂದ್ರಜಿತ್ ಲಂಕೇಶ್ ಪ್ರತಿ ದೂರು ದಾಖಲಿಸಿದ್ದರು. ಪತ್ರಿಕೆಗೆ ಸಂಬಂಧ ಪಟ್ಟ ದಾಖಲೆ ಹಾಗೂ ಕಂಪ್ಯೂಟರ್ ಕದ್ದೊಯ್ದಿದ್ದಾರೆಂದು ಇಂದ್ರಜಿತ್ ದೂರು ದಾಖಲಿಸಿದ್ದರು. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ಮುಗಿಸಿದ ನಂತರ ನ್ಯಾಯಾಧೀಶರ ಮುಂದೆ ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದರು. ಈ ವಿಚಾರದ ಬಗ್ಗೆ ಈಗ ಮತ್ತೆ ಮಾಹಿತಿ ಪಡೆಯಲು ಎಸ್‍ಐಟಿ ಟೀಂ ಮುಂದಾಗಿದ್ದಾರೆ. ಮಾಹಿತಿ ಪಡೆದ ಬಳಿಕ ಸಂಬಂಧ ಪಟ್ಟವರ ವಿಚಾರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.
Advertisement
ಗೌರಿ ಲಂಕೇಶ್ ಫಾರ್ಮ್ ಹೌಸ್‍ನಲ್ಲೂ ಶೋಧ ನಡೆಸಿದ ಪೊಲೀಸರು ಅಲ್ಲಿದ್ದ ಇಬ್ಬರು ಕೆಲಸಗಾರರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಫಾರ್ಮ್ ಹೌಸ್ ಹಂಚಿಕೆ ವಿಚಾರವಾಗಿ ಗೌರಿ ಲಂಕೇಶ್ ಹಾಗೂ ಕುಟುಂಬಸ್ಥರ ನಡುವೆ ಅಸಮಾಧಾನ ಇತ್ತು. ಇದೇ ವಿಚಾರಕ್ಕೆ ಆಗಾಗ ಜಗಳವಾಡುತ್ತಿದ್ದರು ಎಂದು ಎಸ್‍ಐಟಿ ಗಮಕ್ಕೆ ತಂದಿದ್ದಾರೆ. ಕಳೆದ ಸೋಮವಾರ ವಿಶೇಷ ತಂಡ ಭೇಟಿ ನೀಡಿ ಶೋಧ ಕಾರ್ಯ ನಡೆಸಿದ್ದರು. ಗೌರಿ ಲಂಕೇಶ್ ಕಚೇರಿಯಲ್ಲೂ ಎಸ್‍ಐಟಿ ತಂಡ ಪರಿಶೀಲನೆ ನಡೆಸಿದರು. ಈ ವೇಳೆ ಮಹತ್ವದ ದಾಖಲೆಗಳಿರುವ ಗೌರಿ ಲಂಕೇಶ್‍ಗೆ ಸೇರಿದ ಲ್ಯಾಪ್‍ಟಾಪ್ ಹಾಗೂ ಎರಡು ಪೆನ್ ಡ್ರೈವ್ ಎಸ್‍ಐಟಿ ವಶಕ್ಕೆ ಪಡೆದಿದ್ದಾರೆ. ಗೌರಿ- ಇಂದ್ರಜಿತ್ ನಡುವಿನ ಹಳೆ ಜಗಳದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
Advertisement
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಪ್ರಕರಣದ ತನಿಖೆಯಲ್ಲಿ ಅತಿದೊಡ್ಡ ವಿಶೇಷ ತಂಡವನ್ನು ರಚಿಸಲಾಗಿದೆ. ಪ್ರಕರಣದ ತನಿಖೆಯಲ್ಲಿ 100 ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಹಿಂದೆ ಕಲಬುರ್ಗಿ ಪ್ರಕರಣದಲ್ಲಿ 70 ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕೊಲೆ ಪ್ರಕರಣಕ್ಕೆ 100 ಮಂದಿ ಅಧಿಕಾರಿಗಳ ನಿಯೋಜನೆ ಆಗಿದ್ದಾರೆ.